ವಿಜಯಪುರ, 26 ಮಾರ್ಚ್ (ಹಿ.ಸ.) :
ಆಂಕರ್ : ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ 6 ವರ್ಷ ಪಕ್ಷದಿಂದ ಉಚ್ಛಾಟಿಸುತ್ತಿದ್ದಂತೆ ವಿಜಯಪುರ ಬಿಜೆಪಿ ಮತ್ತೊಂದು ಬಣ ಸಂಭ್ರಮಿಸಿದೆ.
ಮಾಜಿ ಶಾಸಕರಾದ ಅಪ್ಪು ಪಟ್ಟಣಶೆಟ್ಟಿ ಅವರ ಬಣ, ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಉಚ್ಛಾಟನೆ ಮಾಡುತ್ತಿದ್ದಂತೆ ನಗರದ ಜೋರಾಪುರ ಪೇಟೆಯಲ್ಲಿನ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಹಿ ಹಂಚಿ ಸಂಭ್ರಮಿಸಿದರು.
ರಾಜೂ ಹುನ್ನೂರ, ಆಕಾಶ ತೊರವಿ, ಸುಮಿತ್ ಮ್ಯಾಡಿ, ಸುಮೀತ್ ಗೌರ, ಆಕಾಶ ನಾಗನೂರ ಹಾಗೂ ಇತತರು ಸಂಭ್ರಮಿಸುವ ಮೂಲಕ ಯತ್ನಾಳ ಉಚ್ಛಾಟನೆಯನ್ನು ಸ್ವಾಗತಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande