ಇಸ್ಲಾಮಾಬಾದ್, 26 ಮಾರ್ಚ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದ ಹಿರಿಯ ಪತ್ರಕರ್ತ ವಹೀದ್ ಮುರಾದ್ ಅವರನ್ನು ಇಂದು ಮುಂಜಾನೆ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಅವರ ನಿವಾಸದಿಂದ ಅಪಹರಿಸಲಾಗಿದೆ ಎಂದು ವರದಿಯಾಗಿದೆ.
ವಿದೇಶದಲ್ಲಿ ವಾಸಿಸುವ ಅವರ ಪತ್ನಿ, ಮುಂಜಾನೆ 2 ಗಂಟೆ ಸುಮಾರಿಗೆ ಮುಸುಕುಧಾರಿ ಪುರುಷರ ಗುಂಪೊಂದು ತಮ್ಮ ಮನೆಗೆ ಬಂದಿರುವುದಾಗಿ ಆರೋಪಿಸಿದ್ದಾರೆ. ಈ ಜನರು ಮುರಾದ್ ಅವರನ್ನು ಅಫ್ಘಾನ್ ಎಂದು ಆರೋಪಿಸಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಮುರಾದ್ ಅವರ ಅತ್ತೆ ವಕೀಲರಾದ ಇಮಾನ್ ಮಜಾರಿ ಮತ್ತು ಹಾದಿ ಅಲಿ ಚಟ್ಟಾ ಮೂಲಕ ಕಾಣೆಯಾದ ಪತ್ರಕರ್ತನ ಪತ್ತೆಗಾಗಿ ಅರ್ಜಿ ಸಲ್ಲಿಸಿದ್ಧಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa