ಜೇರುಸಲೆಮ್, 25 ಮಾರ್ಚ್ (ಹಿ.ಸ.) :
ಆ್ಯಂಕರ್ : ಆಸ್ಕರ್ ಪ್ರಶಸ್ತಿ ವಿಜೇತ 'ನೋ ಅದರ್ ಲ್ಯಾಂಡ್' ಚಿತ್ರದ ಪ್ಯಾಲೆಸ್ಟೀನಿಯನ್ ಸಹ ನಿರ್ದೇಶಕ ಹಮ್ದಾನ್ ಬಲ್ಲಾಲ್ ಮೇಲೆ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ದಾಳಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಸ್ರೇಲಿ ಗುಂಪು ಬಲ್ಲಾಲ್ ಅವರ ಮನೆಗೆ ಹಾನಿ ಮಾಡಿದ್ದು, ಬಳಿಕ ಇಸ್ರೇಲಿ ಸೈನಿಕರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಈ ಕುರಿತು ಅವರ ಸಹ ನಿರ್ದೇಶಕ ಬಾಸೆಲ್ ಆದ್ರಾ ಮಾಹಿತಿ ನೀಡಿದ್ದು, ದಾಳಿ ಸಮಯದಲ್ಲಿ ಬಲ್ಲಾಲ್ ತಲೆ ಮತ್ತು ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
'ನೋ ಅದರ್ ಲ್ಯಾಂಡ್' ಚಿತ್ರದಲ್ಲಿ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ಟೀನಿಯನ್ನರನ್ನು ಬಲವಂತವಾಗಿ ಮನೆಬಿಟ್ಟು ಹೊರಹಾಕುವ ಪ್ರಕ್ರಿಯೆಯನ್ನು ತೋರಿಸಲಾಗಿದೆ.
ಇಸ್ರೇಲಿ ಸೇನೆಯ ಆಕ್ರಮಣಕಾರಿ ನೀತಿಗಳನ್ನು ಬಹಿರಂಗ ಪಡಿಸಿದ್ದಕ್ಕಾಗಿ ನಿರ್ದೇಶಕ ಹಮ್ದಾನ್ ಬಲ್ಲಾಲ್ ಪರೋಕ್ಷ ಬೆದರಿಕೆ ಅನುಭವಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa