ಮಾ.25 ರಂದು ಅಂಚೆ ಕಚೇರಿ ದೂರುಗಳ ‘ಡಾಕ್ ಅದಾಲತ್’
ಬಳ್ಳಾರಿ, 12 ಮಾರ್ಚ್ (ಹಿ.ಸ.): ಆ್ಯಂಕರ್ : ಅಂಚೆ ಇಲಾಖೆ ಬಳ್ಳಾರಿ ವಿಭಾಗದ ವತಿಯಿಂದ ಮಾ.25 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ. ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ಅಂಚೆ ವಿಷಯಗಳ ಕುರಿತು ಕುಂದು-ಕೊರತೆಗಳಿದ್ದಲ್ಲಿ ತಮ್ಮ
ಮಾ.25 ರಂದು ಅಂಚೆ ಕಚೇರಿ ದೂರುಗಳ  ‘ಡಾಕ್ ಅದಾಲತ್’


ಬಳ್ಳಾರಿ, 12 ಮಾರ್ಚ್ (ಹಿ.ಸ.):

ಆ್ಯಂಕರ್ : ಅಂಚೆ ಇಲಾಖೆ ಬಳ್ಳಾರಿ ವಿಭಾಗದ ವತಿಯಿಂದ ಮಾ.25 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ.

ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ಅಂಚೆ ವಿಷಯಗಳ ಕುರಿತು ಕುಂದು-ಕೊರತೆಗಳಿದ್ದಲ್ಲಿ ತಮ್ಮ ಕುಂದು-ಕೊರತೆಗಳನ್ನು ವಿವರವಾಗಿ ಬರೆದು ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ಬಳ್ಳಾರಿ-583102 ಈ ವಿಳಾಸಕ್ಕೆ ಮಾ.24 ರ ಸಂಜೆ 04 ಗಂಟೆಯೊಳಗೆ ಅಥವಾ ಇದಕ್ಕೂ ಮುಂಚಿತವಾಗಿ ಕಳುಹಿಸಬೇಕು.

ಕುಂದು-ಕೊರತೆಗಳನ್ನು doballari.ka@indiapost.gov.in ಗೆ ಸಹ ಕಳುಹಿಸಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande