ಹೊಸಪೇಟೆ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕಮಲಾಪುರದ ಚಪ್ಪರದಹಳ್ಳಿಯಲ್ಲಿ ವ್ಯಕ್ತಿಯೋರ್ವನ ಮುಖವನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ
ಬುಧವಾರ ಬೆಳಕಿದೆ ಬಂದಿದೆ.
ಮೃತ ವ್ಯಕ್ತಿ ಚಿನ್ನೋಡು (35). ವೃತ್ತಿಯಲ್ಲಿ ಪೇಂಟರ್. ಕುಡಿತದ ದಾಸನಾಗಿರುವ ಕಾರಣ ಸ್ಮಶಾನದಲ್ಲಿಯೇ ಮಲಗುತ್ತಿದ್ದ. 2-3 ದಿನಗಳ ಹಿಂದೆ ಈತನ ಮುಖವನ್ನು ಚಾಕುವಿನಿಂದ ಚುಚ್ಚಿ, ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಮಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್