ಲಿಂಗಸುಗೂರು, 04 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕಸಬಾ ಲಿಂಗಸುಗೂರು ಬಳಿಯ ಹುನಕುಂಟಿ ಕ್ರಾಸ್ ಬಳಿ ಮಾರುತಿ ವೆಗಾನರ್ ಕಾರು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಸವಾರ ಬಸವರಾಜ ಪೊ. ಪಾಟೀಲ್ ಯರದೊಡ್ಡಿ (31). ಸುರಪುರದಿಂದ ದಾವಣಗೆರೆಗೆ ಲಿಂಗಸುಗೂರು ಮಾರ್ಗವಾಗಿ ತೆರಳುತ್ತಿದ್ದ ಕಾರು ಮತ್ತು ಮುದಗಲ್ ಪಟ್ಟಣದಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ ಕಾರಣ ಈ ಘಟನೆ ನಡೆದಿದೆ.
ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್