ಬಳ್ಳಾರಿ ವ್ಯಕ್ತಿ ಕಾಣೆ 
ಬಳ್ಳಾರಿ, 04 ಫೆಬ್ರವರಿ (ಹಿ.ಸ.) : ಆ್ಯಂಕರ್ : ನಗರದ ಲಾಲ್‍ಕಮಾನ್‍ನ ಕಟ್ಟೆ ಹತ್ತಿರದ ಅಶೋಕ(28) ಜ.27 ರಂದು ಕಾಣೆಯಾಗಿರುವ ಕುರಿತು ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ವ್ಯಕ್ತಿಯ ಚಹರೆ ಎತ್ತರ 5.6 ಅಡಿ, ದುಂಡು ಮು
ಬಳ್ಳಾರಿ : ವ್ಯಕ್ತಿ ಕಾಣೆ


ಬಳ್ಳಾರಿ, 04 ಫೆಬ್ರವರಿ (ಹಿ.ಸ.) :

ಆ್ಯಂಕರ್ : ನಗರದ ಲಾಲ್‍ಕಮಾನ್‍ನ ಕಟ್ಟೆ ಹತ್ತಿರದ ಅಶೋಕ(28) ಜ.27 ರಂದು ಕಾಣೆಯಾಗಿರುವ ಕುರಿತು ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.

ವ್ಯಕ್ತಿಯ ಚಹರೆ

ಎತ್ತರ 5.6 ಅಡಿ, ದುಂಡು ಮುಖ, ಗೋದಿ ಮೈಬಣ್ಣ, ದುಂಡನೆಯ ಮೈಕಟ್ಟು, ಕಪ್ಪು ತಲೆಕೂದಲು, ಎಡಗೈ ಮೇಲೆ ಅಮ್ಮ ಎಂದು ಹಾಗೂ ಬಲ ಭುಜದ ಹತ್ತಿರ ಸೂರ್ಯನ ಗುರುತು ಹಚ್ಚೆಯನ್ನು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಚೆಕ್ಸ್ ಅಂಗಿ ಮತ್ತು ತಿಳಿ ಬಾದಾಮಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಭಾಷೆ, ಮಾತಾನಾಡುತ್ತಾನೆ.

ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿಎಸ್‍ಐ ಮೊ.9480803081, ಪಿಐ ಮೊ.9480803045 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande