ಅದ್ದೂರಿಯಾಗಿ ನೆರವೇರಿದ ಭೈರನಾಯಕನಹಳ್ಳಿ ಜಾತ್ರಾ ಮಹೋತ್ಸವ
ಕುಕನೂರು, 5 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕುಕನೂರು ತಾಲೂಕಿನ ಭೈರನಾಯಕನಹಳ್ಳಿ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವ ಸಂಪ್ರದಾಯ ಆಚರಣೆಯ ಮೂಲಕ ಜಿಲ್ಲೆಯ ವಿವಿಧ ಮೂಲೆಯ ಜನರನ್ನು ತನ್ನತ್ತ ಸೆಳೆಯುತ್ತ ವರ್ಷದಿಂದ ವರ್ಷಕ್ಕೆ ಅಪಾರ ಭಕ್ತ ಜನಸ್ತೋಮವನ್ನು ಹೆಚ್ಚಿಸಿಕೊಳ್ಳುತ್ತ ವೈಭವದಿಂದ ಸಂಜೆ 5.30
ಅದ್ದೂರಿಯಾಗಿ ನೆರವೇರಿದ ಭೈರನಾಯಕನಹಳ್ಳಿ ಜಾತ್ರಾ ಮಹೋತ್ಸವ


ಅದ್ದೂರಿಯಾಗಿ ನೆರವೇರಿದ ಭೈರನಾಯಕನಹಳ್ಳಿ ಜಾತ್ರಾ ಮಹೋತ್ಸವ


ಅದ್ದೂರಿಯಾಗಿ ನೆರವೇರಿದ ಭೈರನಾಯಕನಹಳ್ಳಿ ಜಾತ್ರಾ ಮಹೋತ್ಸವ


ಕುಕನೂರು, 5 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕುಕನೂರು ತಾಲೂಕಿನ ಭೈರನಾಯಕನಹಳ್ಳಿ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವ ಸಂಪ್ರದಾಯ ಆಚರಣೆಯ ಮೂಲಕ ಜಿಲ್ಲೆಯ ವಿವಿಧ ಮೂಲೆಯ ಜನರನ್ನು ತನ್ನತ್ತ ಸೆಳೆಯುತ್ತ ವರ್ಷದಿಂದ ವರ್ಷಕ್ಕೆ ಅಪಾರ ಭಕ್ತ ಜನಸ್ತೋಮವನ್ನು ಹೆಚ್ಚಿಸಿಕೊಳ್ಳುತ್ತ ವೈಭವದಿಂದ ಸಂಜೆ 5.30 ಗಂಟೆಗೆ ಮಹಾರಥೋತ್ಸವವು ನೆರವೇರಿತು.

ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ 4 ಗಂಟೆಗೆ ಶ್ರೀಮಾರುತೇಶ್ವರನ ಉತ್ಸವದ ಕಳಸಾರೋಹಣ, 4.30 ಗಂಟೆಗೆ ಶ್ರೀಮಾರುತೇಶ್ವರನ ದೇವಸ್ಥಾನದಿಂದ ಡೊಳ್ಳು, ಭಜನೆ, ಕಳಸ, ಬಾಜಾಭಜಂತ್ರಿ ಸಕಲ ವಾದ್ಯಗಳಿಂದ ದೈವದವರ ಸಂಗಡ ಮೆರವಣಿಗೆಯಿಂದ ದೇವರ ಕೋಣೆಗೆ ತಲುಪಿದ ನಂತರ 5 ಗಂಟೆಗೆ ಗಂಗಾಪೂಜೆ, 5.30 ಗಂಟೆಗೆ ಪಾಯಸ ಪವಾಡ ನಂತರ ಭಕ್ತಾದಿಗಳಿಂದ ಅಗ್ನಿಕುಂಡದಲ್ಲಿ (ನೂರಾರು ಭಕ್ತರಿಂದ ಅಗ್ನಿಯ ಮೇಲೆ ನಡೆಯಿವದು) ಅಗ್ನಿ ಪವಾಡ, ಜರುಗಿತು. ಬೆಳಗ್ಗೆ 9 ಗಂಟೆಗೆ ನೆಲಜೇರಿ ಗ್ರಾಮದ ಭಕ್ತಾಧಿಗಳಿಂದ ಮಹಾರಥೋತ್ಸವಕ್ಕೆ ರಥದ ಹಗದಗ ಮತ್ತು ರುದ್ರಾಕ್ಷಿ ಮಾಲೆಯನ್ನು ಮೆರವಣಿಗೆ ಮೂಲಕ ತರಲಾಯಿತು.

ನಂತರ 10 ಗಂಟೆಗೆ, ಶ್ರೀಮಾರುತೇಶ್ವರನ ಉತ್ಸವ ಎಳೆಯುವುದು. ಮಧ್ಯಾಹ್ನ 12 ಗಂಟೆಗೆ ಯಾತ್ರಿಕರಿಗೆ ಅನ್ನಸಂತರ್ಪಣೆ ಮತ್ತು ಮಧ್ಯಾಹ್ನ 1 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮುಂಗೈ ಆಟಗಳು ಜರಗುವವು. ನಂತರ 5.30ಕ್ಕೆ ಮಹಾ ರಥೋತ್ಸವವು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಶ್ರೀಗವಿಮಠ, ಕೊಪ್ಪಳ, ಶ್ರೀ ವೀರಭದ್ರ ಮಹಾಸ್ವಾಮಿಗಳು ಅಂಕಲಿಮಠ, ಶ್ರೀನೀಲಕಂಠಯ್ಯ ಸ್ವಾಮಿಗಳು ಹಿರೇಮಠ, ಕುದರಿಮೋತಿ, ಶ್ರೀ ಸಂಗಯ್ಯ ಹಿರೇಮಠ ಇವರ ಸಮ್ಮುಖದಲ್ಲಿ ಪಕ್ಕದ ನೆಲಜೇರಿ, ಬೇವೂರು, ಮಂಗಳೂರು, ವಟಪರ್ವಿ, ವಣಗೇರಿ, ಕುದರಿಮೋತಿ, ಕಿನ್ನಾಳ, ಕದ್ರಳ್ಳಿ ಇತರ ಗ್ರಾಮದ ಅಪಾರ ಭಕ್ತ ಸಮೂಹದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಾತ್ರಿ 9 ಗಂಟೆಗೆ ಶ್ರೀಮಾರುತೇಶ್ವರನ ಮೂರ್ತಿಯು ಡೊಳ್ಳು, ಭಜನೆ, ಕಳಸ, ಬಾಜಾ ಭಜಂತ್ರಿಗಳೊಡನೆ ಮೆರವಣಿಗೆಯಿಂದ ಜಾತ್ರಾ ಕಾರ್ಯಕ್ರಮಗಳು ನೆರವೇರಲಿವೆ.

ರಾತ್ರಿ 10 ಗಂಟೆಗೆ ಶ್ರೀಮಾರುತೇಶ್ವರ ಯುವಕ ನಾಟ್ಯ ಸಂಘದವತಿಯಿಂದ `ಅಣ್ಣನ ಕಣ್ಣೀರು' ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಮಾರುತೇಶ್ವರ ಸೇವಾ ಸಮಿತಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande