ಕುಂಭಮೇಳ :  ವಿದ್ಯುತ್ ಸ್ಪರ್ಶಿಸಿ ಕಾರಟಗಿ ಸಿದ್ಧಾಪುರದ ಯುವಕ ಸಾವು
ಕಾರಟಗಿ, 05 ಫೆಬ್ರವರಿ (ಹಿ.ಸ.) : ಆ್ಯಂಕರ್ : ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ಅಯೋಧ್ಯೆಗೆ ಹೊರಟಿದ್ದ ಕಾರಟಗಿಯ ಸಿದ್ಧಾಪುರ ಗ್ರಾಮದ ಪ್ರವೀಣ ಮಲ್ಲಿಕಾರ್ಜುನ ಹೊಸಮನಿ (ಹಗೇದಾಳ) (27) ಉತ್ತರ ಪ್ರದೇಶದ ಗೋರಖ್‍ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಶಾಕ್‍ನಿಂದ ಮೃ
ಕುಂಭಮೇಳ :  ವಿದ್ಯುತ್ ಸ್ಪರ್ಶಿಸಿ ಕಾರಟಗಿ ಸಿದ್ಧಾಪುರದ ಯುವಕ ಸಾವು


ಕಾರಟಗಿ, 05 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ಅಯೋಧ್ಯೆಗೆ ಹೊರಟಿದ್ದ ಕಾರಟಗಿಯ ಸಿದ್ಧಾಪುರ ಗ್ರಾಮದ ಪ್ರವೀಣ ಮಲ್ಲಿಕಾರ್ಜುನ ಹೊಸಮನಿ (ಹಗೇದಾಳ) (27) ಉತ್ತರ ಪ್ರದೇಶದ ಗೋರಖ್‍ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದಾನೆ.

ಗೋರಖ್‍ಪುರ ಪೊಲೀಸ್ರು ಸಿದ್ಧಾಪುರ ಗ್ರಾಮದ ಮೃತ ಯುವಕನ ಕುಟುಂಬಕ್ಕೆ ಮಾಹಿತಿ ಬಂದಿದೆ. ಕುಂಭಮೇಳ ಆರಂಭವಾಗುತ್ತಿದ್ದಂತೆ ಸಿದ್ಧಾಪುರ ಗ್ರಾಮದ ಯುವಕ ಪ್ರವೀಣ ಹೊಸಮನಿ ಮೇಳಕ್ಕೆ ಹೋಗಿದ್ದ. ಪ್ರಯಾಗ್‍ರಾಜ್‍ನಲ್ಲಿ ಇದ್ದು, ಸೋಮವಾರ ಅಯೋಧ್ಯೆಗೆ ಹೊರಟಿದ್ದ. ಮಾರ್ಗ ಮಧ್ಯೆ ಉತ್ತರ ಪ್ರದೇಶದ ಸಿದ್ಧಾರ್ಥ ಜಿಲ್ಲೆಯ ಗೋರಖ್‍ಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ವಿದ್ಯುತ್ ತಗಲಿ ತೀವ್ರ ಗಾಯಗೊಂಡಿದ್ದಾನೆ.

ಸ್ಥಳದಲ್ಲಿದ್ದ ರೈಲ್ವೆ ಪೆÇಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಗೋರಖ್‍ಪುರ ಬಿಆರ್‍ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 2ಕ್ಕೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿದ್ಧಾಪುರ ಗ್ರಾಮದಲ್ಲಿರುವ ಮೃತ ಯುವಕನ ಮನೆಗೆ ತಹಶೀಲ್ದಾರ್ ಎಂ.ಕುಮಾರಸ್ವಾಮಿ ತೆರಳಿ ಪಾಲಕರಿಗೆ ಮಾಹಿತಿ ನೀಡಿದ್ದು, ಯುವಕನ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ತಯಾರಿ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande