ಕೋಲಾರ, ೧೨ ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ನೆಲೆಸಿರುವ ಶ್ರೀಪಾರ್ವತಿ ಸಮೇತ ಶ್ರೀಮಾರ್ಕಂಡೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಬುಧವಾರ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಗಳಿಂದ ನಡೆಸಲಾಯಿತು. ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಮಿಂದರು.
ಬ್ರಹ್ಮರಥೋತ್ಸವಕ್ಕೆ ಶಾಸಕ ಕೊತ್ತೂರು ಮಂಜುನಾಥ್,ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್, ತಹಸೀಲ್ದಾರ್ ನಯನ, ಮುಖಂಡ ಸಿಎಂಆರ್.ಶ್ರೀನಾಥ್, ವಕ್ಕಲೇರಿರಾಮು, ಯಶೋಧಮ್ಮ, ದೇವಾಲಯದ ಕನ್ವಿನರ್ ಮನೋಹರ್ ಗೌಡ ಮತ್ತಿತರರು ಚಾಲನೆ ನೀಡಿದರು.
ಭಜನೆ ಮಂದಿರದಿಂದ ಆರಂಭವಾದ ರಥೋತ್ಸವ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ರಥೋತ್ಸವದ ಅಂಗವಾಗಿ ನಾಗರಪೂಜೆ ನಡೆಯಿತು. ಭಕ್ತಾಧಿಗಳು ರಥಕ್ಕೆ ಹೂ-ದವಣ, ಹಣ್ಣು ಎಸೆದು ಹರ್ಷೋದ್ಗಾರಗಳ ನಡುವೆ ಸಂಭ್ರಮಿಸಿದರು. ಗ್ರಾಮಸ್ಥರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಭಾವದಿಂದ ನಮಿಸಿ ಮಾರ್ಕಂಡೇಶ್ವರ ಸ್ವಾಮಿಯ ಅನುಗ್ರಹ ಕೋರಿದರು.
ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಾಗೂ ಅನ್ನದಾನ, ಪಾನಕ, ಕೋಸಂಬರಿ ಅನ್ನದಾಸೋಹ ನಡೆಯಿತು. ರಥೋತ್ಸವದ ಅಂಗವಾಗ ನಡೆದಿರುವ ಜಾತ್ರೆ ಹಿನ್ನಲೆಯಲ್ಲಿ ಗ್ರಾಮದಲ್ಲಿ ವಿವಿಧ ಅಂಗಡಿಗಳು ತಲೆಯೆತ್ತಿದ್ದು, ಜಾತ್ರೆ ವ್ಯಾಪಾರ ಜೋರಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೌಡೇಶ್ವರಿ, ಬಂಡೋರು ವೆಂಕಟೇಶಪ್ಪ, ಬಣಕನಹಳ್ಳಿ ನಟರಾಜ್, ಗ್ರಾಮದ ಮುಖಂಡರಾದ ಬೆಂಗಳೂರು ಸುಬ್ಬಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯೆ ವಿಜಯಲಕ್ಷ್ಮಿ ಮಂಜುನಾಥ್, ಜಿಪಂ ಮಾಜಿ ಸದಸ್ಯೆ ಯಶೋಧಮ್ಮ, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಮಂಜುನಾಥ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭಾರತಿ ಮತ್ತಿತರರು ಪಾಲ್ಗೊಂಡಿದ್ದರು.
ಚಿತ್ರ:ಕೋಲಾರ ತಾಲೂಕಿನ ವಕ್ಕಲೇರಿ ಶ್ರೀಮಾರ್ಕಂಡೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್