ಗ್ಯಾರಂಟಿ : ತಾಲೂಕು ಮಟ್ಟದ ಸದಸ್ಯರಿಗೆ ಗ್ರಾಮ ಪಂಚಾಯತಿಗಳ ಉಸ್ತುವಾರಿ
ಗದಗ, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗ್ಯಾರಂಟಿ ಯೋಜನೆಗಳ ಸಂಪೂರ್ಣವಾದ ಸಮರ್ಪಕ ನಿರ್ವಹಣೆ ಪರಿಣಾಮಕಾರಿಯಾಗಿ ಗದಗ ತಾಲೂಕಿನಲ್ಲಿ ಜಾರಿಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ಕೆಳಕ
ಫೋಟೋ


ಗದಗ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗ್ಯಾರಂಟಿ ಯೋಜನೆಗಳ ಸಂಪೂರ್ಣವಾದ ಸಮರ್ಪಕ ನಿರ್ವಹಣೆ ಪರಿಣಾಮಕಾರಿಯಾಗಿ ಗದಗ ತಾಲೂಕಿನಲ್ಲಿ ಜಾರಿಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ಕೆಳಕಂಡ ಗ್ರಾಮ ಪಂಚಾಯತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಾಲೂಕಾಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಅವರಿಗೆ ರೋಣ ಮತ್ತು ನರಗುಂದ ವಿಧಾನಸಭಾ ಮತಕ್ಷೇತ್ರದ ಗ್ರಾಮ ಪಂಚಾಯತ್‌ಗಳ ಉಸ್ತುವಾರಿಯನ್ನು (ಮೊ.ಸಂ. 9449446313), ಕೃಷ್ಣಗೌಡ ಎಚ್ ಪಾಟೀಲ ಅವರಿಗೆ ಹುಲಕೋಟಿ ಮತ್ತು ಕುರ್ತಕೋಟಿ ಗ್ರಾ.ಪಂ.ಗಳ ಉಸ್ತುವಾರಿಯನ್ನು (ಮೊ.ಸಂ. 9742598038), ಶಂಭು ಎಸ್ ಕಾಳೆ ಅವರಿಗೆ ವಾರ್ಡ ನಂ. 1,2, 16, 21 ಮತ್ತು 15 ( ಮೊ.ಸಂ. 9902108686) ; ಶ್ರೀಮತಿ ಮೀನಾಕ್ಷಿ ಬೆನಕಣ್ಣವರ ಅವರಿಗೆ ವಾ.ಸಂ.27,28 ಮತ್ತು 29 ( ಮೊ.ಸಂ. 998038503) ; ಶ್ರೀಮತಿ ಸಾವಿತ್ರಿ ಹೂಗಾರ ಅವರಿಗೆ ವಾ.ಸಂ.24,31, 32 & 35 ರ (ಮೊ.ಸಂ.6360212737 ) ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande