
ಕೋಲಾರ, ೦೪ ಡಿಸೆಂಬರ್ (ಹಿ.ಸ) :
ಆ್ಯಂಕರ್ : ತಾಲೂಕಿನ ನುಗ್ಗಲಾಪುರ ಗ್ರಾಮದ ಸದ್ಗುರು ಶ್ರೀ ಭೂಮಾನಂದ ಭಾರತೀ ಸ್ವಾಮಿ ಆಶ್ರಮದಲ್ಲಿ ಗುರುವಾರ ೧೮ನೇ ವರ್ಷದ ಆರಾಧನಾ ಮಹೋತ್ಸವವನ್ನು ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿ0ದ ನಡೆಯಿತು.
ಗುರುವಾರ ಬೆಳಗ್ಗೆ ೭ ರಿಂದ ೯ ಗಂಟೆಯವರೆಗೆ ಭೂಮಾನಂದ ಭಾರತೀ ಸ್ವಾಮೀಜಿಗೆ ಅಭಿಷೇಕ, ಹೂವಿನ ಅಲಂಕಾರ, ಗುರು ಅಷ್ಟೋತ್ತರ ಶತನಾಮಾವಳಿ, ಪಾರಾಯಣ ಪೂಜೆ, ಮಹಾಮಂಗಳಾರತಿ ನಡೆಯಿತು. ಬಳಿಕ ಹಿಮಾಲಯದಿಂದ ಆಗಮಿಸಿದ್ದ ಸಾಧು ಮಹಾತ್ಮರಿಂದ ಭಕ್ತರಿಗೆ ಸತ್ಸಂಗ ಹಾಗೂ ಆಶೀರ್ವಚನ ನೀಡಲಾಯಿತು.
ಪೀಠಾಧಿಪತಿ ಆಚಾರ್ಯ ಶ್ರೀಚಿದಾತ್ಮಾನಂದ ಸ್ವಾಮೀಜಿ, ಸ್ಥಿತಪ್ರಜ್ಞಾನಂದ ಸ್ವಾಮೀಜಿ, ಸುದೀರಾನಂದ ಸ್ವಾಮೀಜಿಗಳ ತಪಸ್ಸಿನ ಮೂಲಕ ಸೇವಾ ಕಾರ್ಯಕ್ರಮಗಳು ನಡೆಯಿತು ಎಂದು ಆಶ್ರಮದ ಕೆವಿ ಶ್ರೀನಿವಾಸ್ ತಿಳಿಸಿದರು.
ಸದ್ಗುರುಗಳಾದ ಭೂಮಾನಂದ ಭಾರತೀ ಸ್ವಾಮೀಜಿಗಳ ಅನುಗ್ರಹ ಪಡೆಯಲು ನಾವು ವರ್ಷಕ್ಕೆ ಎರಡು ಬಾರಿ ಸ್ವಾಮೀಜಿಯ ಜಯಂತಿ ಮತ್ತು ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ನಮ್ಮ ಕುಲಬಾಂಧವರು ಆಚರಣೆ ಮಾಡುತ್ತೇವೆ. ಈ ಆಶ್ರಮವನ್ನು ೨೦೧೮ರಲ್ಲಿ ಕಟ್ಟಿದ್ದು ಅಂದಿನಿAದ ಪ್ರತೀ ವರ್ಷವೂ ನಾವು ಎರಡು ಬಾರಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದಿನAತೆ ಈ ಬಾರಿಯೂ ನೂರಾರು ಭಕ್ತರು ಸ್ವಾಮೀಜಿಯ ಅನುಗ್ರಹ ಪಡೆದಿದ್ದಾರೆ ಎಂದರು.
ಚಿತ್ರ : ಕೋಲಾರ ತಾಲ್ಲೂಕಿನ ನುಗ್ಗಲಾಪುರ ಭಾರತೀ ಸ್ವಾಮಿ ಆಶ್ರಮದಲ್ಲಿ ೧೮ನೇ ವರ್ಷದ ಆರಾಧನಾ ಮಹೋತ್ಸವ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್