ಕೋಲಾರದ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ದುರಾಡಳಿತ ವಿರೋಧಿಸಿ ಕೆ.ಆರ್.ಎಸ್ ಪಕ್ಷದಿಂದ ಪ್ರತಿಭಟನೆ
ಕೋಲಾರದ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ದುರಾಡಳಿತ ವಿರೋಧಿಸಿ ಕೆ.ಆರ್.ಎಸ್ ಪಕ್ಷದಿಂದ ಪ್ರತಿಭಟನೆ
ಕೋಲಾರದ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ದುರಾಡಳಿತ ವಿರೋಧಿಸಿ ಕೆ.ಆರ್.ಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.


ಕೋಲಾರ, 0೪ ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ದುರಾಡಳಿತ ಮತ್ತು ಅವ್ಯವಸ್ಥೆ ಹಾಗು ಭ್ರಷ್ಟಾಚಾರದ ವಿರುಧ್ದ ಆಸ್ಪತ್ರೆಯ ಮುಂದೆ ಕೆ.ಆರ್. ಎಸ್ ಪಕ್ಷದ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯಲ್ಲಿ ದುರಾಡಳಿತದಿಂದ ಬಡ ರೋಗಿಗಳಿಗೆ ಸಕಾಲದಲ್ಲಿ ಗುಣಮಟ್ಟದ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ಬಡವರು ನರಳುವಂತಾಗಿದೆ. ಸರ್ಕಾರ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ತುರ್ತುಗಮನ ಹರಿಸಿ ಆಸ್ಪತ್ರೆಯಲ್ಲಿ ಸುಧಾರಣೆಗಳನ್ನು ತರಬೇಕಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ ಕೆ.ಆರ್.ಎಸ್.ಪಕ್ಷದ ಸೇನೇಯ ಕಾರ್ಯಕರ್ತರು ರಾಜ್ಯದ ಬಹುತೇಕ ರಾಜಕಾರಣಿಗಳು ಮತ್ತು ಸಚಿವರು ಖಾಸಗಿ ಸುಸಜ್ಜಿತ ಹೈಟೆಕ್ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ.ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳನ್ನು ಬಡವರು ಮತ್ತು ಮಧ್ಯಮ ವರ್ಗದ ರೋಗಿಗಳು ಅವಲಂಭಿಸಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗಿವೆ. ಸರ್ಕಾರದ ನಿರ್ಲಕ್ಷ ಮತ್ತು ಆಸ್ಪತ್ರೆಯನ್ನು ನಿರ್ವಹಿಸುವ ವೈದ್ಯಾಧಿಕಾರಿಗಳ ದುರಾಡಳಿತದಿಂದ ಗುಣಾತ್ಮಕವಾದ ಚಿಕಿತ್ಸೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ದೊರೆಯುತ್ತಿಲ್ಲ. ಜನ ಸಾಮಾನ್ಯರ ತೆರಿಗೆ ಹಣದಿಂದ ಸರ್ಕಾರಿ ಆಸ್ಪತ್ರೆಗಳು ನಡೆಯತ್ತಿವೆ. ಆದರೆ ಪರಿಣಾಕಾರಿ ಮತ್ತು ಗುಣಾತ್ಮಕವಾದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೋರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯನ್ನು ಸಾವಿರಾರು ಮಂದಿ ಅವಲಂಭಿಸಿದ್ದಾರೆ.ಕೋಲಾರ ನಗರ ಅಲ್ಲದೆ ಜಿಲ್ಲೆ ಮತ್ತು ನೆರೆಯ ಆಂದ್ರ ಪ್ರದೇಶದ ರೋಗಿಗಳು ಪ್ರತಿನಿತ್ಯ ಚಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇದೆ.ಇದರಿಂದಾಗಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ನರಳ ಬೇಕಾಗಿದೆ. ರೋಗಿಗಳಿಗೆ ಅಗತ್ಯವಿರುವ ಔಷಧಿಗಳು ದೊರೆಯತ್ತಿಲ್ಲ. ಇದರಿಂದಾಗಿ ರೋಗಿಗಳು ಅನಿರ್ವಾವಾಗಿ ಹೊರಗೆ ಔಷಧಿಗಳನ್ನು ಖರೀದಿ ಮಾಡಬೇಕಾಗುತ್ತದೆ.

ಆಸ್ಪತ್ರೆಗೆ ಹೆರಿಗೆಗೆ ದಾಖಲಾಗುವ ಮಹಿಳೆಯರು ಹೆರಿಗೆ ನೋವಿಗಿಂತ ಆಸ್ಪತ್ರೆಯದ ದುರಾಡಳಿತದಿಂದ ನರಳಬೇಕಾಗಿದೆ. ಹೆರಿಗೆಗೆ ವೈದ್ಯರು ಮತ್ತು ದಾದಿಯರಿಗೆ ಲಂಚ ನೀಡಬೇಕಾಗಿದೆ. ಲಂಚ ನೀಡದಿದ್ದಲ್ಲಿ ಹೆರಿಗೆ ಸುಸೂತ್ರವಾಗಿ ನಡೆಯುವುದಿಲ್ಲ. ಕೆಲವು ವೈದ್ಯರು ಮತ್ತು ದಾದಿಯರು ಖಾಸಗಿ ಆಸ್ಪತ್ರೆಗಳೊಂದಿಗೆ ಹೊಂದಾಣಿಕೆ ಹೊಂದಿದ್ದು, ರೋಗಿಗಳನ್ನು ಖಾಸಗಿ ನರ್ಸಸಿಂಗ್ ಹೋಮ್‌ಗಳಿಗೆ ಸಾಗು ಹಾಕುತ್ತಾರೆ. ಸ್ಕಾö್ಯನಿಂಗ್ ವಿಭಾಗದಲ್ಲಿ ತುರ್ತಾಗಿ ವರದಿ ದೊರೆಯುವುದಿಲ್ಲ. ಲಂಚ ನೀಡಿದರೆ ಕೂಡಲೇ ವರದಿ ದೊರೆಯುತ್ತದೆ. ಇಂದು ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಬೆರಳ ತುದಿಯಲ್ಲಿ ಮಾಹಿತಿ ದೊರೆಯತ್ತದೆ. ಆದರೆ ವಾರಗಟ್ಟಲೇ ವರದಿಗಾಗಿ ಕಾಯಬೇಕಾತ್ತದೆ.ಅಗತ್ಯ ಮತ್ತು ತುರ್ತ ಪರಿಸ್ಥಿಗೆ ಅನುಗುಣವಾಗಿ ವರದಿಗಳು ದೊರೆಯುವುದಿಲ್ಲ.ಇದರಿಂದಾಗಿ ಗಂಭೀರ ಪರಿಸ್ಥಿಯಲ್ಲಿ ವೈದ್ಯರು ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಸ್ಕಾö್ಯನಿಂಗ್ ಮತ್ತು ಎಕ್ಸ್ರೇ ವಿಭಾಗದಲ್ಲಿ ಗಂಟೆಗಟ್ಟಲೇ ರೋಗಿಗಳು ಕಾಯಬೇಕಾಗುತ್ತದೆ.ತುರ್ತಾಗಿ ಮತ್ತು ಸಕಾಲದಲ್ಲಿ ವರದಿಗಳು ದೊರೆಯುತ್ತಿಲ್ಲ. ಆಸ್ಪತ್ರೆಗೆ ಭೇಟಿ ನೀಡುವ ಹೊರ ರೋಗಿಗಳು ಟೋಕನ್ ಪಡೆಯಲು ಪರದಾಡಬೇಕು. ಒಂದೇ ಕೌಂಟರ್‌ನಲ್ಲಿ ಟೋಕನ್ ವಿತರಿಸುವುದರಿಂದ ವಿಳಂಬವಾಗುತ್ತದೆ. ಮತ್ತೊಂದು ಕೌಂಟರ್ ತೆರೆದು ಕೂಡಲೇ ಟೋಕನ್ ವಿತರಿಸಬೇಕು. ಒಂದೇ ಕೌಂಟರ್ ಇರುವುದರಿಂದ ಅಶಕ್ತ ರೋಗಿಗಳು ಪರದಾಡಬೇಕಾಗಿದೆ. ಸರ್ಕಾರಿ ಅಂಬುಲೆನ್ಸ್ ಸೇವೆ ಲಭ್ಯವಿಲ್ಲದ ಕಾರಣ ಖಾಸಗಿ ಅಂಬುಲೆನ್ಸ್ ಮಾಫಿಯ ರೋಗಿಗಳು ಮತ್ತು ಸಂಬದಧಿಕರನ್ನು ಶೋಷಣೆ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸಾಗಿಸಲು ಸಾವಿರಾರು ರೂಪಾಯಿ ಆಂಬ್ಯುಲೆನ್ಸ್ ಮಾಫಿಯಾಗೆ ನೀಡಬೇಕಾಗಿದೆ. ಆಸ್ಪತ್ರೆಯಲ್ಲಿ ಯಾರಾದರೂ ಮೃತಪಟ್ಟರೆ ಅವರ ಸಾವಿನ ದುಃಖಕ್ಕಿಂತ ಅಂಬ್ಯುಲೆನ್ಸ್ ಮಾಫೀಯ ನೀಡುವ ಹಿಂಸೆ ಘೋರವಾದುದ್ದು, ವೈದ್ಯಾಕಾರಿಗಳ ಸಂಭದಪಟ್ಟ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆಯಬೇಕು.ಆನಂತರ ನಾವು ಎಲ್ಲಾ ಪ್ರಯತ್ನ ಮಾಡಿದ್ದೇವೆ ಎಂದು ಕೈಚಲ್ಲಿ ಕುಳಿತು ಕೊಳ್ಳಬಹುದು ಎಂದು ತಾಕೀತು ಮಾಡಬಹುದು.

ವೈದ್ಯಕೀಯ ಮಾಫೀಯಾ ಒತ್ತಡಕ್ಕೆ ಮಣಿದು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಿಗನ್ನು ಸರಬರಾಜು ಮಾಡುತ್ತಿಲ್ಲ. ಸರ್ಕಾರ ಔಷಧಿಗಳನ್ನು ಸರಬರಾಜು ಮಾಡಲು ವಿಳಂಭ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಬಳಕೆದಾರರ ಹಣದಿಂದ ಅಗತ್ಯವಿರುವ ಔಷಧಿಗಳನ್ನು ಖರೀದಿ ಮಾಡಬಹುದಾಗಿರುತ್ತದೆ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೆ.ಆರ್.ಎಸ್ .ಸೈನಿಕರು ಆಸ್ಪತ್ರೆಯ ವೈದ್ಯಾದಿಕಾರಿ ಡಾ.ಜಗದೀಶ್‌ರವರಿಗೆ ಬೆವರಿಳಿಸಿದರು. ಪ್ರತಿಭಟನೆಯ ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ್ ರವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೆ.ಆರ್.ಎಸ್ ಪಕ್ಷದ ಮುಖಂಡರಾದ ರಾಜ್ಯ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ ಕೋಲಾರ ಜಿಲ್ಲಾಧ್ಯಕ್ಷ ಮಂಜುನಾಥ್, ಕೋಲಾರ ಜಿಲ್ಲಾಧ್ಯಕ್ಷೆ ಲಕ್ಷಿö್ಮ, ಕೋಲಾರ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ,ಕೋಲಾರ ಜಿಲ್ಲಾ ಉಸ್ತುವಾರಿ ಮಹೇಶ್ ,ಯುವಧ್ವನಿ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.

ಚಿತ್ರ ; ಕೋಲಾರದ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ದುರಾಡಳಿತ ವಿರೋಧಿಸಿ ಕೆ.ಆರ್.ಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande