
ನವದೆಹಲಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಡಾಲರ್ ಎದುರು ಭಾರತೀಯ ರೂಪಾಯಿ ನಿರಂತರ ಕುಸಿತ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರದ ತಪ್ಪಾದ ಆರ್ಥಿಕ ನಿರ್ವಹಣೆಯ ಪರಿಣಾಮ ರೂಪಾಯಿ ದಾಖಲೆ ಮಟ್ಟಕ್ಕೆ ಕುಸಿದಿದೆ ಎಂದು ಅವರು ಹೇಳಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಖರ್ಗೆ, ರೂಪಾಯಿ ಮೌಲ್ಯ ಕುಸಿಯುತ್ತಿರುವುದು ದೇಶದ ಆರ್ಥಿಕ ಆರೋಗ್ಯ ಸುವ್ಯವಸ್ಥಿತವಾಗಿಲ್ಲ ಎಂಬ ಸ್ಪಷ್ಟ ಸಂದೇಶ. ಕರೆನ್ಸಿ ದುರ್ಬಲಗೊಳ್ಳುವುದು ಆರ್ಥಿಕತೆಯ ನಿಜಸ್ಥಿತಿ ಬಯಲು ಮಾಡುವ ಸೂಚಕ ಎಂದರು.
ಮೋದಿ ಸರ್ಕಾರದ ನೀತಿಗಳು ಸರಿಯಾಗಿದ್ದರೆ ರೂಪಾಯಿ ಇಷ್ಟು ಕೆಳಕ್ಕೆ ಇಳಿಯುತ್ತಿರಲಿಲ್ಲ, ಸರ್ಕಾರ ಈ ಕುಸಿತಕ್ಕೆ ಉತ್ತರಿಸಲೇಬೇಕು ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa