ಭಾರತ–ಫ್ರಾನ್ಸ್ ದ್ವಿಪಕ್ಷೀಯ ವಾಯು ವ್ಯಾಯಾಮ ಯಶಸ್ವಿ
ನವದೆಹಲಿ, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ವಾಯುಪಡೆಯ ತುಕಡಿ ಫ್ರಾನ್ಸ್‌ನ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ನಡೆದ ಭಾರತ–ಫ್ರಾನ್ಸ್ ದ್ವಿಪಕ್ಷೀಯ ವಾಯು ವ್ಯಾಯಾಮ ‘ಗರುಡ–8’ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ದೇಶಕ್ಕೆ ಮರಳಿದೆ. ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ಆತಿಥ್ಯ ವಹಿಸಿ
Air exisize


ನವದೆಹಲಿ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ವಾಯುಪಡೆಯ ತುಕಡಿ ಫ್ರಾನ್ಸ್‌ನ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ನಡೆದ ಭಾರತ–ಫ್ರಾನ್ಸ್ ದ್ವಿಪಕ್ಷೀಯ ವಾಯು ವ್ಯಾಯಾಮ ‘ಗರುಡ–8’ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ದೇಶಕ್ಕೆ ಮರಳಿದೆ. ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ಆತಿಥ್ಯ ವಹಿಸಿದ್ದ ಈ ವ್ಯಾಯಾಮದಲ್ಲಿ ಭಾರತೀಯ ಹಾಗೂ ಫ್ರೆಂಚ್ ಯುದ್ಧ ವಿಮಾನಗಳು ಆಕಾಶದಲ್ಲಿ ಜಟಿಲ ಕಾರ್ಯಾಚರಣೆಗಳನ್ನು ನೆರವೇರಿಸಿದವು.

ವ್ಯಾಯಾಮದ ಕೇಂದ್ರಬಿಂದುವಾಗಿ ಸುಖೋಯ್–30 ಎಂಕೆಐ, ಐಎಲ್–78 ಏರ್-ಟು-ಏರ್ ರಿಫ್ಯೂಲರ್, ಮತ್ತು ಸಿ–17 ಗ್ಲೋಬ್‌ಮಾಸ್ಟರ್ ವಿಮಾನಗಳನ್ನು ಭಾರತದಿಂದ ನಿಯೋಜಿಸಲಾಗಿತ್ತು. ವಾಸ್ತವಿಕ ಯುದ್ಧಸ್ಥಿತಿ ಪರಿಸರವನ್ನು ನಕಲಿಸುವ ರೀತಿಯಲ್ಲಿ ರೂಪಗೊಂಡಿದ್ದ ಈ ವ್ಯಾಯಾಮದಲ್ಲಿ ದಾಳಿ, ಬೆಂಗಾವಲು, ಜಂಟಿ ಕಾರ್ಯಾಚರಣೆ ಯೋಜನೆ, ಪರಸ್ಪರ ಕಾರ್ಯಾಚರಣಾ ವಿಧಾನಗಳ ಅರಿವು ಮತ್ತು ಗಗನಯುದ್ಧ ತಂತ್ರಗಳನ್ನು ಅಭ್ಯಾಸಿಸಲಾಯಿತು.

ಭಾರತೀಯ ವಾಯುಪಡೆ ತಿಳಿಸಿದಂತೆ, ತಮ್ಮ ನಿರ್ವಹಣಾ ತಾಂತ್ರಿಕ ಸಿಬ್ಬಂದಿಯು ಹೆಚ್ಚಿನ ಸೇವಾ ಸಾಮರ್ಥ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದು, ಎಲ್ಲಾ ಯೋಜಿತ ಮಿಷನ್‌ಗಳನ್ನು ಸಮಯಕ್ಕೆ ಸರಿಯಾಗಿ, ಯಾವುದೇ ವ್ಯತ್ಯಯವಿಲ್ಲದೆ ಪೂರ್ಣಗೊಳಿಸಲು ನೆರವಾಯಿತು.

ವ್ಯಾಯಾಮದ ಸಮಾರೋಪ ಸಮಾರಂಭದಲ್ಲಿ ಎರಡು ದೇಶಗಳ ಹಿರಿಯ ವಾಯುಪಡೆ ಅಧಿಕಾರಿಗಳು ಭಾಗವಹಿಸಿ, ವ್ಯಾಯಾಮದಲ್ಲಿ ತೊಡಗಿದ್ದ ಪಡೆಯ ವೃತ್ತಿಪರತೆ, ಶಿಸ್ತು, ಕಾರ್ಯನಿಷ್ಠೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಶ್ಲಾಘಿಸಿದರು.

ಈ ವರ್ಷದ ಭಾರತದ ಅತಿದೊಡ್ಡ ಅಂತಾರಾಷ್ಟ್ರೀಯ ವಾಯು ತರಬೇತಿ ಅಭ್ಯಾಸಗಳಲ್ಲಿ ಒಂದಾಗಿ ಗುರುತಿಸಿಕೊಂಡ ‘ಗರುಡ–8’, ಇಂಡೋ–ಫ್ರೆಂಚ್ ಕಾರ್ಯತಂತ್ರದ ಬಲವಾದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿ ಮಾಡಿದೆ. ವ್ಯಾಯಾಮದಲ್ಲಿ ದೊರಕಿದ ಕಾರ್ಯಾಚರಣಾ ಪಾಠಗಳು ಭಾರತೀಯ ವಾಯುಪಡೆಯ ಯುದ್ಧ ಹೋರಾಟ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ಸ್ನೇಹಪರ ರಾಷ್ಟ್ರಗಳ ವಾಯುಪಡೆಯೊಂದಿಗೆ ಜಂಟಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಬಲಪಡಿಸಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande