ಇಂಡಿಗೋ ಗೊಂದಲ ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ 73 ವಿಮಾನ ಹಾರಾಟ ರದ್ದು
ಬೆಂಗಳೂರು, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉಂಟಾಗಿರುವ ಕಾರ್ಯಾಚರಣಾ ಅಡಚಣೆ ಮುಂದುವರಿದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 73 ವಿಮಾನಗಳ ಹಾರಾಟ ರದ್ದುಗೊಂಡಿವೆ. ನಿನ್ನೆ 43 ವಿಮಾನಗಳನ್ನು ರದ್ದುಪಡಿಸಿದ್ದ ಕಂಪನಿ, ತಾಂತ್ರ
Indigo


ಬೆಂಗಳೂರು, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉಂಟಾಗಿರುವ ಕಾರ್ಯಾಚರಣಾ ಅಡಚಣೆ ಮುಂದುವರಿದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 73 ವಿಮಾನಗಳ ಹಾರಾಟ ರದ್ದುಗೊಂಡಿವೆ.

ನಿನ್ನೆ 43 ವಿಮಾನಗಳನ್ನು ರದ್ದುಪಡಿಸಿದ್ದ ಕಂಪನಿ, ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಹಾಗೂ ರೋಸ್ಟರಿಂಗ್ ನಿಯಮಗಳಲ್ಲಿ ಬದಲಾವಣೆಗಳಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದೆ.

ಸತತ ರದ್ದತಿಗಳು ಮತ್ತು ವಿಳಂಬಗಳಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದ್ದು, ಡಿಜಿಸಿಎ ಇಂಡಿಗೋ ಸಂಸ್ಥೆಗೆ ಪರಿಸ್ಥಿತಿ ಸುಧಾರಿಸಲು ವಿವರ ಮತ್ತು ಕಾರ್ಯಯೋಜನೆ ನೀಡುವಂತೆ ಸೂಚನೆ ನೀಡಿದೆ. ಸಂಸ್ಥೆ 48 ಗಂಟೆಗಳಲ್ಲಿ ಸ್ಥಿತಿ ಸಾಮಾನ್ಯಗೊಳ್ಳಲಿದೆ ಎಂದು ಭರವಸೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande