
ನವದೆಹಲಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ನೌಕಾಪಡೆ ದಿನದ ಅಂಗವಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ನೌಕಾ ಸಿಬ್ಬಂದಿಗೆ ಶುಭಾಶಯಗಳನ್ನು ತಿಳಿಸಿ, ದೇಶದ ಭದ್ರತೆಗಾಗಿ ನೀಡುತ್ತಿರುವ ಅವರ ಶ್ರೇಷ್ಠ ಸೇವೆಯನ್ನು ಶ್ಲಾಘಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಮ್ಮ ನೌಕಾಪಡೆ ಅಪ್ರತಿಮ ಧೈರ್ಯ, ಅಚಲ ದೃಢಸಂಕಲ್ಪ ಮತ್ತು ಪರಿಪೂರ್ಣ ವೃತ್ತಿಪರತೆಯ ಸಂಕೇತವಾಗಿದೆ. ಅವರು ನಮ್ಮ ಕರಾವಳಿಯನ್ನು ರಕ್ಷಿಸುವದಷ್ಟೇ ಅಲ್ಲ ದೇಶದ ಕಡಲ ಹಿತಾಸಕ್ತಿಗಳನ್ನು ಬಲವಾಗಿ ಕಾಪಾಡುತ್ತಿದ್ದಾರೆ ಎಂದು ಹೇಳಿದ್ದಾರೆ
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ನೌಕಾಪಡೆ ಸ್ವಾವಲಂಬನೆ ಮತ್ತು ಆಧುನೀಕರಣದತ್ತ ಪರಿಣಾಮಕಾರಿ ಹೆಜ್ಜೆ ಹಾಕಿರುವುದು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚು ಬಲಪಡಿಸಿದೆ ಎಂಬುದನ್ನು ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಈ ವರ್ಷದ ದೀಪಾವಳಿಯನ್ನು ಐಎನ್ಎಸ್ ವಿಕ್ರಾಂತ್ ನೌಕಾಯಾನದಲ್ಲಿ ನೌಕಾ ಸಿಬ್ಬಂದಿಯೊಂದಿಗೆ ಆಚರಿಸಿದ ಕ್ಷಣಗಳನ್ನು ಸ್ಮರಿಸಿದ ಅವರು, ಅದು ನನಗೆ ಎಂದಿಗೂ ಮರೆಯಲು ಸಾಧ್ಯವಿಲ್ಲದ ಅನುಭವ ಎಂದು ಹೇಳಿದ್ದಾರೆ.
ಭಾರತೀಯ ನೌಕಾಪಡೆಗೆ ಭವಿಷ್ಯದ ಕಾರ್ಯಗಳಲ್ಲಿ ಯಶಸ್ಸು ಕೋರಿ, ನಮ್ಮ ನೌಕಾಪಡೆಯು ರಾಷ್ಟ್ರದ ಹೆಮ್ಮೆಯ ಆತ್ಮಶಕ್ತಿ. ಅವರ ಆದರ್ಶ ಸೇವೆಗೆ ನಾನು ನಮಿಸುತ್ತೇನೆ ಎಂದು ಪ್ರಧಾನಿಯವರು ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa