ಮಹಾರಾಷ್ಟ್ರದ 374 ಕಿ.ಮೀ. 6 ಪಥ ಹಸಿರು ರಸ್ತೆ ಕಾರಿಡಾರ್‌ಗೆ ಅನುಮೋದನೆ
ನವದೆಹಲಿ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ, ಮಹಾರಾಷ್ಟ್ರ ರಾಜ್ಯದಲ್ಲಿ ಬಿಒಟಿ (ಟೋಲ್) ಮಾದರಿಯಲ್ಲಿ 6 ಪಥದ ಹಸಿರು ಕ್ಷೇತ್ರ ಪ್ರವೇಶ-ನಿಯಂತ್ರಿತ ನಾಸಿಕ್–ಸೋಲಾಪುರ–ಅಕ್ಕಲಕೋಟೆ ಕಾರಿಡಾರ್ ನಿ
ಮಹಾರಾಷ್ಟ್ರದ 374 ಕಿ.ಮೀ. 6 ಪಥ ಹಸಿರು ರಸ್ತೆ ಕಾರಿಡಾರ್‌ಗೆ ಅನುಮೋದನೆ


ನವದೆಹಲಿ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ, ಮಹಾರಾಷ್ಟ್ರ ರಾಜ್ಯದಲ್ಲಿ ಬಿಒಟಿ (ಟೋಲ್) ಮಾದರಿಯಲ್ಲಿ 6 ಪಥದ ಹಸಿರು ಕ್ಷೇತ್ರ ಪ್ರವೇಶ-ನಿಯಂತ್ರಿತ ನಾಸಿಕ್–ಸೋಲಾಪುರ–ಅಕ್ಕಲಕೋಟೆ ಕಾರಿಡಾರ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಈ ಮಹತ್ವಾಕಾಂಕ್ಷಿ ಯೋಜನೆಯ ಒಟ್ಟು ಉದ್ದ 374 ಕಿಲೋಮೀಟರ್ ಆಗಿದ್ದು, ಅಂದಾಜು ಬಂಡವಾಳ ವೆಚ್ಚ ರೂ. 19,142 ಕೋಟಿ ಎಂದು ನಿಗದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಬಲಪಡಿಸುವ ಉದ್ದೇಶದಿಂದ ಕೈಗೊಳ್ಳಲಾದ ಈ ಕಾರಿಡಾರ್, ನಾಸಿಕ್, ಅಹಲ್ಯಾನಗರ ಹಾಗೂ ಸೋಲಾಪುರದಂತಹ ಪ್ರಮುಖ ಪ್ರಾದೇಶಿಕ ನಗರಗಳಿಗೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿದೆ. ಜೊತೆಗೆ ಆಂಧ್ರ ಪ್ರದೇಶದ ಕರ್ನೂಲ್‌ಗೆ ವೇಗದ ಸಂಪರ್ಕ ಒದಗಿಸುವ ಮೂಲಕ ಅಂತರರಾಜ್ಯ ಸಂಚಾರಕ್ಕೆ ಹೊಸ ಉತ್ತೇಜನ ನೀಡಲಿದೆ.

ಹಸಿರು ಕ್ಷೇತ್ರ ಪ್ರವೇಶ-ನಿಯಂತ್ರಿತ ಕಾರಿಡಾರ್ ಆಗಿರುವುದರಿಂದ ಪ್ರಯಾಣ ಸಮಯದಲ್ಲಿ ಗಣನೀಯ ಕಡಿತ, ರಸ್ತೆ ಸುರಕ್ಷತೆಯಲ್ಲಿ ಸುಧಾರಣೆ ಹಾಗೂ ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಇಳಿಕೆ ಸಂಭವಿಸುವ ನಿರೀಕ್ಷೆಯಿದೆ. ಕೈಗಾರಿಕೆ, ಕೃಷಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಈ ಯೋಜನೆ ವೇಗ ನೀಡಲಿದ್ದು, ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಬಿಒಟಿ (ಟೋಲ್) ಮಾದರಿಯಲ್ಲಿ ಜಾರಿಗೆ ಬರುವ ಈ ಯೋಜನೆಯು ಖಾಸಗಿ ಹೂಡಿಕೆ ಆಕರ್ಷಿಸಿ, ಮೂಲಸೌಕರ್ಯ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರೊಂದಿಗೆ ದೀರ್ಘಾವಧಿಯಲ್ಲಿ ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಬಲ ನೀಡಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande