ಮಾತಾ ಅನ್ನಪೂರ್ಣ ದೇವಾಲಯದ ಶಿಖರದಲ್ಲಿ ಧರ್ಮಧ್ವಜ ಪ್ರತಿಷ್ಠಾಪನೆ
ಅಯೋಧ್ಯೆ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಅಯೋಧ್ಯೆಯಲ್ಲಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದ ಅಂಗವಾಗಿ ಅವರು ಮೊದಲು ಹನುಮಾನ್‌ಗಢಿಗೆ ತೆರಳಿ ಸಂಕಟಮೋಚನ
Ayodya


ಅಯೋಧ್ಯೆ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಅಯೋಧ್ಯೆಯಲ್ಲಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದ ಅಂಗವಾಗಿ ಅವರು ಮೊದಲು ಹನುಮಾನ್‌ಗಢಿಗೆ ತೆರಳಿ ಸಂಕಟಮೋಚನ ಹನುಮಾನ್‌ಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀರಾಮ ಜನ್ಮಭೂಮಿ ಸಂಕೀರ್ಣಕ್ಕೆ ಆಗಮಿಸಿ ಭಗವಾನ್ ಶ್ರೀರಾಮ ಲಲ್ಲಾ ದೇವಸ್ಥಾನ ಮತ್ತು ರಾಮ ದರ್ಬಾರ್‌ನಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಈ ವೇಳೆ ಇಬ್ಬರೂ ಆರತಿ ಮಾಡಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿದರು. ದೇಶ ಹಾಗೂ ರಾಜ್ಯದ ಶಾಂತಿ, ಸಮೃದ್ಧಿ ಮತ್ತು ಜನಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ನಂತರ ಮಾತಾ ಅನ್ನಪೂರ್ಣ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಶ್ರೀರಾಮನ ಸ್ತುತಿ ಹಾಗೂ ಮಂತ್ರಪಠಣಗಳ ನಡುವೆ ದೇವಾಲಯದ ಶಿಖರದಲ್ಲಿ ಧರ್ಮಧ್ವಜವನ್ನು ಪ್ರತಿಷ್ಠಾಪಿಸಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧ್ವಜಾರೋಹಣ ನೆರವೇರಿಸಿದರು. ರಾಮ ಲಲ್ಲಾ ದೇವಸ್ಥಾನದ ಶಿಖರದಲ್ಲಿ ಬಳಸಿದ ಅದೇ ತಂತ್ರಜ್ಞಾನವನ್ನು ಅನ್ನಪೂರ್ಣ ದೇವಾಲಯದಲ್ಲೂ ಬಳಸಲಾಯಿತು.

ರಕ್ಷಣಾ ಸಚಿವರು ಬೆಳಿಗ್ಗೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ದರ್ಶನ ಹಾಗೂ ಪೂಜೆ ಮುಗಿಸಿ ದೇವಾಲಯದಿಂದ ಹೊರಬಂದಾಗ ಭಕ್ತರು “ಜೈ ಶ್ರೀ ರಾಮ್” ಘೋಷಣೆಗಳೊಂದಿಗೆ ಇಬ್ಬರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮುಖ್ಯಮಂತ್ರಿ ಯೋಗಿ ಸಾರ್ವಜನಿಕರ ಶುಭಾಶಯಗಳನ್ನು ಸ್ವೀಕರಿಸಿ ಕೈಬೀಸಿ, ಮಕ್ಕಳಿಗೆ ಆಶೀರ್ವಾದ ನೀಡಿದರು. ಸಂಪೂರ್ಣ ಸಂಕೀರ್ಣದಲ್ಲಿ ಭಕ್ತಿ ಮತ್ತು ಉತ್ಸಾಹದ ವಾತಾವರಣ ಆವರಿಸಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande