

ಹೊಸಪೇಟೆ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರೋ.ಬಿ.ಕೃಷ್ಣಪ್ಪ ರವರು ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) 47/74-75. ಯ ಹೊಸಪೇಟೆ ತಾಲೂಕು ಪದಾಧಿಕಾರಿಗಳ ಸಮಿತಿಯನ್ನು ಪುನರ್ ರಚಿಸಲಾಯಿತು.
ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್. ದುರುಗೇಶ್, ಸಂಘಟನಾ ಸಂಚಾಲಕರಾದ ಹೆಚ್.ಬಿ.ಶ್ರೀನಿವಾಸ್ ಮರಿಯಮ್ಮನಹಳ್ಳಿ, ಕಂದಗಲ್ ಪರಶುರಾಮ್, ತುಂಬಾರಗುದ್ದಿ ದುರುಗೇಶ್, ಹಿರಿಯ ದಲಿತ ನಾಯಕರಾದ ಗೋವಿಂದರಾಜ್, ಶಾಮ್‍ರಾಜ್, ಬಿ.ಎಡ್.ಹನುಮಂತಪ್ಪ, ಉದಯಕುಮಾರ, ಇವರ ಉಪಸ್ಥಿತಿಯಲ್ಲಿ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಯಿತು.
ಹೊಸಪೇಟೆ ತಾಲೂಕು ಸಂಚಾಲಕರಾಗಿ ಎಂ.ವಿರುಪಾಕ್ಷಿ, ಸಂಘಟನಾ ಸಂಚಾಲಕರಾಗಿ ಹೆಚ್.ಈರಣ್ಣ, ಗಾದಿಗನೂರು ನಾಗರಾಜ್, ಹಾರುವನಹಳ್ಳಿ ನಾಗರಾಜ, ಪಕ್ಕೀರಪ್ಪ, ಹನುಮನಹಳ್ಳಿ ಮಂಜುನಾಥ, ಶ್ರೀನಿವಾಸ ನಂದಿಬಂಡೆ, ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಸಂಚಾಲಕರಾಗಿ ಡಾಕ್ಟರ್ ಆನಂದ್ ಮತ್ತು ಸಂಘಟನಾ ಸಂಚಾಲಕರಾಗಿ ಹೆಚ್.ಕೆ.ಈಶ್ವರ್ ನೇಮಕಗೊಂಡಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್