
ಬೆಂಗಳೂರು, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದಿನಾಂಕ 01.01.2026ರಿಂದ ಹೊಸ ರೈಲು ವೇಳಾಪಟ್ಟಿ ಜಾರಿಗೆ ಬರಲಿದೆ. ಈ ಹೊಸ ವೇಳಾಪಟ್ಟಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ವಿಭಾಗದಲ್ಲಿ 352 ರೈಲುಗಳ ಆಗಮನ/ನಿರ್ಗಮನ ಸಮಯಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ.
2 ರೈಲುಗಳ ಸೇವೆಯ ದಿನವನ್ನು ಬದಲಿಸಲಾಗಿದೆ. ಪ್ರಯಾಣಿಕರು ಪರಿಷ್ಕೃತ ಸಮಯವನ್ನು ನ್ಯಾಷನಲ್ ಟ್ರೈನ್ ಎನ್ಕ್ವೈರಿ ಸಿಸ್ಟಂ ಅಥವಾ ನೈರುತ್ಯ ರೈಲ್ವೆಯ ವೆಬ್ ಸೈಟ್ ನಲ್ಲಿ ಪರಿಶೀಲಿಸುವಂತೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa