
ಕೊಪ್ಪಳ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಜಾತ್ರಾ ಆವರಣದ ಸ್ಥಳಗಳಲ್ಲಿ 44 ಸಿಸಿ ಕ್ಯಾಮೆರಾ ಕಣ್ಗಾವಲಾಗಿ ಅಳವಡಿಕೆ ಮಾಡಲಾಗಿದೆ.
ಗವಿಮಠ ಆವರಣ : ವಿಚಾರಣೆ ಕೇಂದ್ರದ ಹತ್ತಿರ ಕೆರೆ ದಡ, ದಾಸೋಹ ಭವನ ಹೊರ ವಿಕ್ಷಣೆಗೆ, ದಾಸೋಹ ಹೈ ಮಾಸ್ಕ ಲೈಟೆ ಗೆ, ಶಿಲಾ ಮಂಟಪ, ಗದ್ದುಗೆ ಹೊರ ಭಾಗ, ಗುಡ್ಡದಲ್ಲಿ, ಗುಡ್ಡದಿಂದ ಶ್ರೀಗಳ ಕೋಣೆಗೆ ಹೋಗುವ ದಾರಿ, ಅನ್ನಪೂರ್ಣೆಶ್ವರಿ ಗುಡಿಯಲ್ಲಿ, ಕೈಲಾಸ ಮಂಟಪ, ಸಂಗೀತ ಪಾಠಶಾಲಾ ಹತ್ತುವ ಮೆಟ್ಟಿಲುಗಳ ವಿಕ್ಷಣೆಗೆ ಒಟ್ಟು 16 ಸಿಸಿಕ್ಯಾಮೆರಾ ಕಣ್ಗಾವಲಾಗಿರುತ್ತವೆ.
ಮಹಾದಾಸೋಹ ಭವನ : ವಿದ್ಯುತ್ ಕೊಠಡಿ, ಮಿರ್ಚಿ ಹಾಕುವ ಕೊಠಡಿ, ಕಿರಾಣಿ ವಸ್ತುಗಳ ಕೊಠಡಿ, ರೊಟ್ಟಿ ಕೊಠಡಿ, ಸಿಹಿ ಪದಾರ್ಥ ಶೇಖರಣಾ ಕೊಠಡಿ, ಅನ್ನ, ಪಲ್ಯೆ, ಸಾಂಬಾರ ಶೇಖರಿಸುವ ಸ್ಥಳಗಳಲ್ಲಿ, ಚಟ್ನಿ ರುಬ್ಬುವ ಸ್ಥಳಗಳಲ್ಲಿ, ಅಡುಗೆ ಮಾಡುವ ಸ್ಥಳದಿಂದ ಹೊರ ಹೋಗುವ, ಗೇಟ್ ಹತ್ತಿರಕಾಯಿಪಲ್ಲೆ ಸಂಗ್ರಹಿಸುವ ಮತ್ತು ಹೆಚ್ಚುವ ಸ್ಥಳದಲ್ಲಿ, ಪ್ರಸಾದ ವಿತರಣೆ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರು ಪ್ರಸಾದ ಸ್ವೀಕರಿಸುವ ಸ್ಥಳ,ದಾಸೋಹ ಭವನದ ಹಿಂದೆ ಒಳಗೆ ಮತ್ತು ಹೊರಗೆ ಓಡಾಡುವ ದಾರಿಯ ಹತ್ತಿರ ಒಟ್ಟು 24 ಕ್ಯಾಮೆರಾ ಕಣ್ಗಾವಲಾಗಿರುತ್ತವೆ.
ಜಾತ್ರಾ ಆವರಣ; ಜಾತ್ರಾ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ 44 ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಮೆಲ್ಕಂಡಂತೆ ಜನದಟ್ಟಣೆ ಹೆಚ್ಚು ಇರುವ ಸ್ಥಳಗಳಲ್ಲಿ ಮಹಿಳೆಯರ, ಮಕ್ಕಳ, ವಯೋವೃದ್ದರ ಹಿತದೃಷ್ಟಿಯಿಂದ ಮತ್ತು ಹಣ, ಬಂಗಾರ, ವಸ್ತು, ಒಡವೆಗಳು, ಆಭರಣಗಳು, ಮೊಬೈಲ್ ಮುಂತಾದವುಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಜಾತ್ರಾ ಮಹೋತ್ಸವವನ್ನು ಶಿಸ್ತುಬದ್ದವಾಗಿ ಜರುಗಿಸಲು ಮುಂಜ್ರಾಗ್ರತೆಗೆ ಇಡೀ ಜಾತ್ರಾ ಆವರಣ, ಶ್ರೀ ಮಠದ ಪ್ರಾಂಗಣ ಮತ್ತು ದಾಸೋಹ ಭವನದ ತುಂಬೆಲ್ಲಾ ಒಟ್ಟು 84ಕ್ಕೀಂತ ಹೆಚ್ಚಿನ ಸಿ.ಸಿ. ಕ್ಯಾಮರಗಳನ್ನು ಅಳವಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಮೋಬೈಲ್ - ಜಯಸಿಂಹ- 8904226330, ಧ್ರುವಕಿರಣ ಶೆಟ್ಟರ್ - 9343967976ಸಂಪರ್ಕಿಸಲು ಶ್ರೀ ಗವಿಮಠ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್