ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ
ಬಳ್ಳಾರಿ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿಯ ಎಫ್‍ಐಸಿಸಿಐನ ಸುಸ್ಥಿರ ಕೃಷಿ - 2025ರ ಪ್ರಶಸ್ತಿ ಪುರಸ್ಕøತರಾದ ಮಾತೃಭೂಮಿ ಸ್ಪೈಸಿ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕರಾದ ಬ್ರಹ್ಮಯ್ಯನಾಯ್ಡು ತಮ್ಮಿನೇನಿ ಮತ್ತು ಸಹ ಸಂಸ್ಥಾಪಕರಾದ ಶಿವನಗೌಡ ಅವರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ


ಬಳ್ಳಾರಿ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿಯ ಎಫ್‍ಐಸಿಸಿಐನ ಸುಸ್ಥಿರ ಕೃಷಿ - 2025ರ ಪ್ರಶಸ್ತಿ ಪುರಸ್ಕøತರಾದ ಮಾತೃಭೂಮಿ ಸ್ಪೈಸಿ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕರಾದ ಬ್ರಹ್ಮಯ್ಯನಾಯ್ಡು ತಮ್ಮಿನೇನಿ ಮತ್ತು ಸಹ ಸಂಸ್ಥಾಪಕರಾದ ಶಿವನಗೌಡ ಅವರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅಭಿನಂದಿಸಿ, ಗೌರವಿಸಿದೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು, ಎಫ್‍ಐಸಿಸಿಐ ಗುರುತಿಸಿ - ಬಹುಮಾನ ನೀಡಿರುವುದರಿಂದ ಭವಿಷ್ಯದಲ್ಲಿ ಸುಸ್ಥಿರ ಕೃಷಿ, ಪರಿಸರ ಸ್ನೇಹಿ, ಆರೋಗ್ಯಕರ ಕೃಷಿ ಮತ್ತು ಸಾವಯವ ಕೃಷಿ ನಡೆಸಲು ಪೆÇ್ರೀತ್ಸಾಹ ನೀಡಿದಂತೆ ಆಗಲಿದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ಕೃಷಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಸಾಧಿಸಿದೆ. ಈ ಹಿನ್ನಲೆಯಲ್ಲಿ ಸಾವಯವ ಕೃಷಿಯಲ್ಲೂ ಬಳ್ಳಾರಿ ಜಿಲ್ಲೆಯು ಎಫ್‍ಐಸಿಸಿಐನಿಂದ ಬಹುಮಾನ ಪಡೆದಿರುವುದು ಶ್ಲಾಘನೀಯ ಎಂದರು.

ಸನ್ಮಾನಿತರಾದ ಬ್ರಹ್ಮಯ್ಯನಾಯ್ಡು ತಮ್ಮಿನೇನಿ ಮತ್ತು ಶಿವನಗೌಡ ಅವರು, ಕೃಷಿಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಸಾಧನೆ ಮಾಡುವ ಉತ್ಸಾಹಿಗಳಿಗೆ ಸೂಕ್ತ ಮಾರ್ಗದರ್ಶನ - ಪೆತ್ಸಾಹ ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಿಗಲಿದೆ. ಕ್ರಿಯಾಶೀಲರು - ಸೃಜನಶೀಲರಿಗೆ ಕೃಷಿ ಕ್ಷೇತ್ರ ಸಾಧನೆಗೆ ಪೂರಕವಾಗಿದೆ ಎಂದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರುಗಳಾದ ಸೊಂತ ಗಿರಿಧರ್, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ನಿಕಟಪೂರ್ವ ಅಧ್ಯಕ್ಷರಾದ ಯಶವಂತ ರಾಜ್ ನಾಗಿರೆಡ್ಡಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳ ಚೇರ್ಮನ್ ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande