ಎಐಡಿಎಸ್‍ಓನ 72ನೇ ಸಂಸ್ಥಾಪನಾ ದಿನಾಚರಣೆ
ಬಳ್ಳಾರಿ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ 72ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಎಐಡಿಎಸ್‍ಓ ಕಚೇರಿಯಲ್ಲಿ ಧ್ವಜಾರೋಹಣವನ್ನು ಭಾನುವಾರ ನೆರವೇರಿಸಲಾಯಿತು. ಎಐಡಿಎಸ್‍ಓನ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಧ್ವಜಾರೋಹಣ ನೆರವೇರಿಸಿದರು. ರಾಜ
ಎಐಡಿಎಸ್‍ಓನ 72ನೇ ಸಂಸ್ಥಾಪನಾ ದಿನಾಚರಣೆ


ಎಐಡಿಎಸ್‍ಓನ 72ನೇ ಸಂಸ್ಥಾಪನಾ ದಿನಾಚರಣೆ


ಬಳ್ಳಾರಿ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ 72ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಎಐಡಿಎಸ್‍ಓ ಕಚೇರಿಯಲ್ಲಿ ಧ್ವಜಾರೋಹಣವನ್ನು ಭಾನುವಾರ ನೆರವೇರಿಸಲಾಯಿತು.

ಎಐಡಿಎಸ್‍ಓನ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಧ್ವಜಾರೋಹಣ ನೆರವೇರಿಸಿದರು.

ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾಘಿರುವ ರವಿಕಿರಣ್.ಜೆ.ಪಿ ಅವರು ಅತಿಥಿಗಳಾಗಿ, ಕಾಮ್ರೇಡ್ ಶಿವದಾಸ್ ಘೋಷ್ ಅವರ ವಿಚಾರಗಳ ಪ್ರೇರಣೆಯಿಂದಾಗಿ ಎಐಡಿಎಸ್‍ಓ ಕೊಲ್ಕತ್ತದಲ್ಲಿ ಸ್ಥಾಪನೆ ಆಯಿತು. ಈ ಸಂಘಟನೆಯು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವಾಗಿದೆ ಎಂದರು.

ಎಐಡಿಎಸ್‍ಓ ಜಿಲ್ಲಾ ಅಧ್ಯಕ್ಷರಾದ ಕೆ. ಈರಣ್ಣ ಅವರು, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದರು.

ಎಐಡಿಎಸ್‍ಓನ ಜಿಲ್ಲಾ ಉಪಾಧ್ಯಕ್ಷೆ ಎಂ. ಶಾಂತಿ, ಖಜಾಂಚಿ ಅನುಪಮಾ, ಕಚೇರಿ ಕಾರ್ಯದರ್ಶಿ ನಿಹಾರಿಕ ಮತ್ತು ಸದಸ್ಯರಾದ ಸಮೀರ್, ತಿಪ್ಪೇಸ್ವಾಮಿ, ಕಾಂತೇಶ್, ರಿಯಾಜ್, ರಾಜಶೇಖರ್, ಕಾರ್ತಿಕ್ ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande