
ಕೊಪ್ಪಳ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಶ್ರೀಗವಿಮಠದ ಜಾತ್ರಾ ಮಹಾರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾದ ನಿಮಿತ್ಯ ಮಠದಲ್ಲಿ ಸಿದ್ಧತೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ.
ದಿನಾಂಕ 05.01.2026ರಂದು ಜುಗುಗುವ ಶ್ರೀ ಗವಿಸಿದ್ಧೇಶ್ವರ ಮಹಾರತೋತ್ಸವ ನಿಮಿತ್ಯ ಅನೇಕ ಲಕ್ಷ ಲಕ್ಷ ಭಕ್ತರು ಸೇರಿ ಸಂಭ್ರಮಿಸುವುದು ಭಕ್ತಿ ಭಾವದ ಸಂಗಮ. ಸಾಮಾನ್ಯವಾಗಿ ಜಾತ್ರಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ ಕಟ್ಟುವುದು ರೂಢಿಯಾಗಿದೆ.
ಪ್ರತಿವರ್ಷದಂತೆ ಈ ವರ್ಷವು ಜಾತ್ರಾ ಸಮಯದಲ್ಲಿ, ಶ್ರೀಮಠದ ರಸ್ತೆಯಲ್ಲಿ, ಜಾತ್ರಾ ಅವರಣದಲ್ಲಿ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಶ್ರೀಮಠವು ಭಕ್ತಾದಿಗಳಲ್ಲಿ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್