ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕನ ಕ್ರೌರ್ಯ
ವಿಜಯಪುರ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕರು ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ-54 ರಲ್ಲಿರುವ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ. ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಮೃಗದ ರೀತಿ ಬುದ್ಧಿಮಾಂದ್ಯ ಬಾಲಕನಿಗೆ
ಹಲ್ಲೆ


ವಿಜಯಪುರ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕರು ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ-54 ರಲ್ಲಿರುವ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ. ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಮೃಗದ ರೀತಿ ಬುದ್ಧಿಮಾಂದ್ಯ ಬಾಲಕನಿಗೆ ಹಲ್ಲೆಗೈದು ಕ್ರೌರ್ಯ ಮೆರೆದಿದ್ದಾನೆ.

ದೀಪಕ್ ರಾಠೋಡ (16) ಹಲ್ಲೆಗೊಳಗಾದ ಬುದ್ಧಿಮಾಂದ್ಯ ಬಾಲಕ. ಶಿಕ್ಷಕ ಅಕ್ಷಯ್ ಇಂದುಲ್ಕರ್, ಆತನ ಪತ್ನಿ ಮಾಲಿನಿ ಬಾಲಕನ ಮೇಲೆ ದೌರ್ಜನ್ಯವೆಸಗಿದ್ದು, ದೀಪಕ್ ನೆಲಕ್ಕೆ ಬಿದ್ದು ಹೊರಳಾಡಿದರೂ ಬಿಡದೇ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಿಕ್ಷಕ ಅಕ್ಷಯ್ ಪತ್ನಿ ಹಲ್ಲೆ‌ ವೇಳೆ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿದ್ದಾಳೆ. ಶಿಕ್ಷಕ ದಂಪತಿ ದೌರ್ಜನ್ಯಕ್ಕೆ ಪೋಷಕರು, ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಬುದ್ಧಿಮಾಂದ್ಯ ಕೇಂದ್ರದ ಮುಂದೆ ಸಾರ್ವಜನಿಕರು ಜಮಾಯಿಸಿದ್ದಾರೆ.‌ ಹಲ್ಲೆ ಪ್ರಶ್ನಿಸಲು ಬಂದವರಿಗೆ ಕಿರಾತಕ ದಂಪತಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಶಿಕ್ಷಕ ದಂಪತಿಯನ್ನು ವಿಚಾರಣೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande