ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಥಮ ಜಿಲ್ಲಾ ಸಮಾವೇಶ
ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಥಮ ಜಿಲ್ಲಾ ಸಮಾವೇಶ
ಕೋಲಾರ ನಗರದ ಸುವರ್ಣ ಕನ್ನಡ ಭವನದಲ್ಲಿ ಶನಿವಾರ ನಡೆದ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಥಮ ಜಿಲ್ಲಾ ಸಮಾವೇಶದಲ್ಲಿ ಜಿಲ್ಲೆಯ ಆರು ತಾಲೂಕುಗಳ ೨೪ ಶಿಕ್ಷಕರಿಗೆ ವಿದ್ಯಾರತ್ನ ಪ್ರಶಸ್ತಿ ಆರು ಜನ ಬೋಧಕೇತರ ಸಿಬ್ಬಂದಿಗೆ ಸೇವಾ ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.


ಕೋಲಾರ, ೨೦ ಡಿಸೆಂಬರ್ (ಹಿ.ಸ) :

ಆ್ಯಂಕರ್ : ನಗರದ ಸುವರ್ಣ ಕನ್ನಡ ಭವನದಲ್ಲಿ ಶನಿವಾರ ನಡೆದ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಥಮ ಜಿಲ್ಲಾ ಸಮಾವೇಶದಲ್ಲಿ ಜಿಲ್ಲೆಯ ಆರು ತಾಲೂಕುಗಳ ೨೪ ಶಿಕ್ಷಕರಿಗೆ ವಿದ್ಯಾರತ್ನ ಪ್ರಶಸ್ತಿ ಆರು ಜನ ಬೋಧಕೇತರ ಸಿಬ್ಬಂದಿಗೆ ಸೇವಾ ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ರಾಮಚಂದ್ರ ಮಾತನಾಡಿ, ಹಲವಾರು ಜ್ವಲ್ವಂತ ಸಮಸ್ಯೆಗಳನ್ನು ಸಂಘಟನೆ ಮೂಲಕ ಬಗೆಹರಿಸಬಹುದು ಬಡ್ತಿ ಇನ್ನಿತರೆ ಕಾರಣಗಳಿಂದ ಉಂಟಾಗುವ ವೇತನ ತಾರತಮ್ಯಗಳನ್ನು ಸರಿಪಡಿಸಲು ಸಂಘ ಸಾಧನವಾಗಬೇಕು ಎಂದರು.

ಶಿಕ್ಷಕ ವೃತ್ತಿಯ ಪಾವಿತ್ರö್ಯತೆ ಕಾಪಾಡಬೇಕು, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕಾಯಕದಲ್ಲಿರುವ ಶಿಕ್ಷಕರಿಗೆ ವಿವಿಧ ಕೆಲಸಗಳ ಒತ್ತಡವಿದ್ದು, ಅದರ ನಿವಾರಣೆಗೆ ಶ್ರಮಿಸಬೇಕು ಎಂದ ಅವರು, ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯವಿದ್ದು ಪರಿಷತ್ ಸದಸ್ಯರುಗಳ ಮೂಲಕ ಸಮಾಲೋಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಒಂದು ಕಾಲದಲ್ಲಿ ಶಿಕ್ಷಕರ ಕೆಲಸ ಬಹಳ ನಿರಾಳ ತರುವಂತಿತ್ತು ಆದರೆ ಈಗ ತುಂಬಾ ಒತ್ತಡದ ಸನ್ನಿವೇಶಗಳು ನಿರ್ಮಾಣವಾಗಿದೆ ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಶಿಕ್ಷಕರು ಜಿಲ್ಲೆಯಲ್ಲಿ ಉತ್ತಮ ಬೋಧನಾ ಕಾರ್ಯದಲ್ಲಿ ತೊಡಗಿದ್ದಾರೆ, ಇದರ ಪ್ರತಿಕವಾಗಿ ಈ ದಿನ ಸಂಘ ಪ್ರತಿಭಾವಂತ ೩೦ ಶಿಕ್ಷಕರನ್ನ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದೇ ಸಾಕ್ಷಿ ಮುಂದೆ ಈ ಸಂಘದೊ0ದಿಗೆ ಉತ್ತಮ ನಿಕಟಬಾಂಧವ್ಯವನ್ನು ಸಾಧಿಸಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರತಿಭಾವಂತ ಶಿಕ್ಷಕರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡುವ ಸದಾವಕಾಶ ಧನ್ಯತೆಯನ್ನು ತಂದಿದೆ ಪ್ರಶಸ್ತಿ ಪುರಸ್ಕöÈತರು ನಿಮ್ಮ ಜವಾಬ್ದಾರಿಗಳನ್ನು ಇನ್ನೂ ಉತ್ತಮ ಗೊಳಿಸಬೇಕು ಏಕೆಂದರೆ ಸಮಾಜ ನಿಮ್ಮನ್ನು ಗಮನಿಸುತ್ತಿರುತ್ತದೆ ಎಂದರು.

ಕೋಲಾರ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಎ ಅಜಯ್ ಕುಮಾರ್, ಜಿಲ್ಲೆಯಲ್ಲಿ ವಿವಿಧ ಸಂಘಗಳ ಕಾರ್ಯದ ಮಧ್ಯೆ ರಚನೆಗೊಂಡಿರುವ ಶಾಲಾ ಶಿಕ್ಷಣ ನೌಕರರ ಸಂಘ ಬಹಳ ಕಡಿಮೆ ಸಮಯದಲ್ಲಿ ಬಹುತೇಕ ನೌಕರರ ಮನಸ್ಸನ್ನು ಗೆದ್ದಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಮಿತಿಯ ಕವಿತಾ ರವರು ಮಾತನಾಡಿ ಸಂಘದ ವತಿಯಿಂದ ಮಹಿಳೆಯರಿಗೆ ಉತ್ತಮ ಆದ್ಯತೆ ಮತ್ತು ಅವಕಾಶ ಸಿಕ್ಕಿದೆ ಇದರ ಮುಖ್ಯನ ಮಹಿಳಾ ಸಬಲೀಕರಣಕ್ಕೆ ಪ್ರಯತ್ನಿಸಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಶಿಕ್ಷಣ ಸುಧಾರಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಸ್ ಚೌಡಪ್ಪ, ಜಿಲ್ಲೆಯ ಎಲ್ಲಾ ವೃಂದಸAಘಗಳು ನಮ್ಮ ಆಹ್ವಾನವನ್ನು ಮನ್ನಿಸಿ ಈ ಸಮಾವೇಶಕ್ಕೆ ಬಂದಿರುವುದೇ ನಮ್ಮ ಒಗ್ಗಟ್ಟಿನ ಪ್ರತಿಕ, ಜಿಲ್ಲಾ ಸಮಿತಿಯ ಉತ್ತಮ ಸಮನ್ವಯದಿಂದ ಕಾರ್ಯಕ್ರಮ ಯಶಸ್ಸು ಸಾಧಿಸಿದೆ ಎಂದರು.

ಇದನ್ನು ಮುಂದುವರೆಸಿಕೊAಡು ಹೋಗುವುದು ಪದಾಧಿಕಾರಿಗಳ ಮುಂದೆ ಇರುವ ಸವಾಲಾಗಿದೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಇರುವ ತಾಲೂಕು ಸಮಿತಿಗಳ ಪದಾಧಿಕಾರಿಗಳ ಸಭೆ ಹಾಗಾಗಿ ನಡೆದು ಶಿಕ್ಷಕರ ಬೋಧಕೇತರದ ಸಮಸ್ಯೆಗಳನ್ನು ಬಗೆಹರಿಸಲು ಪಣತೊಡಬೇಕು ಎಂದರು.

ಜಿಲ್ಲೆಯ ಮಾದರಿ ಕಾರ್ಯಕ್ರಮವನ್ನು ರಾಜ್ಯ ಹಂತದಲ್ಲಿ ಕೊಂಡೊಯ್ಯುವ ಅಭಿಲಾಷೆ ಇದೆ ಎಲ್ಲರ ಸಹಕಾರದೊಂದಿಗೆ ರಾಜ್ಯದಲ್ಲಿ ಉತ್ತಮ ಸಂಘಟನೆ ಮಾಡುವ ಬಗ್ಗೆ ಪ್ರೇರಣೆ ಸಿಕ್ಕಿದೆ ಎಂದರು.

ಸಮಾರಂಭದಲ್ಲಿ ನೌಕರ ಸಂಘದ ಗೌರವಾಧ್ಯಕ್ಷ ಕೆ.ಎನ್.ಮಂಜುನಾಥ್ ನಾವು ಬೆಳೆಸಿದ ಒಬ್ಬ ಸಂಘಟನಾ ಕಾರ್ಯದಲ್ಲಿ ಪ್ರಜ್ವಲಿಸುತ್ತಿರುವುದು ಅದರ ಜೊತೆಗೆ ರೂಪಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ರೀತಿ ಮೆಚ್ಚುಗೆಯನ್ನು ತಂದಿದೆ ಚೌಡಪ್ಪ ರವರ ಸಂಘಟನಾ ಶಕ್ತಿ ಇತರರಿಗೆ ಮಾದರಿ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಶ್ರೀ ಆರ್ ವೀರಣ್ಣ ರವರನ್ನು ಅಭಿನಂದಿಸಲಾಯಿತು ಸಮಾರಂಭದಲ್ಲಿ ಕೆ ಜಿ ಐ ಡಿ ಕುರಿತಾದ ಗೊಂದಲಗಳ ಬಗ್ಗೆ ಮಂಜುನಾಥ ಉಪನ್ಯಾಸ ನೀಡಿದರು.

ಜಿಲ್ಲಾಧ್ಯಕ್ಷೆ ಆರ್ ಮಂಜುಳಾ ಅಧ್ಯಕ್ಷತೆ ವಹಿಸಿದ್ದು, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಶಿಕ್ಷಕರು, ನೌಕರರ ಸಮಸ್ಯೆಗಳ ಪರಿಹಾರಕ್ಕೆ ಕಂಕಣಬದ್ದವಾಗಿದೆ ಎಂದು ತಿಳಿಸಿ ಸಹಕಾರ ಕೋರಿದರು.

ಸಮಾರಂಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಶಿವಕುಮಾರ್ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಪ್ಪೆ ಗೌಡ, ರಾಜ್ಯ ಪ್ರತಿನಿಧಿ ವೇಣುಗೋಪಾಲ್ ಜಿಲ್ಲಾ ಪ್ರತಿನಿಧಿಗಳಾದ ಗಿರೀಶ್ ಕುಮಾರ್ ಮುನಿರಾಜು ಮುನಿ ರಾಮಯ್ಯ, ಮಂಜುನಾಥ ಆಚಾರಿ, ರಾಧಮ್ಮ, ವೆಂಕಟೇಶ್ ಗೌಡ, ಲಕ್ಷ÷್ಮಣ್, ಕೃಷ್ಣೇಗೌಡ, ಲಲಿತ ಕಲಾ, ಶಿವರಾಜ್, ಎಚ್ ಟಿ ಕೃಷ್ಣಪ್ಪ, ಸೋಫಿಯಾ, ವಿನೋಧಿನಿ ,ಅನ್ಸರ್ ಅಹಮದ್, ತಾಲೂಕು ಅಧ್ಯಕ್ಷ ಸತೀಶ್ ಕುಮಾರ್, ನರಸಿಂಹಮೂರ್ತಿ, ನಾರಾಯಣಸ್ವಾಮಿ, ಶ್ರೀನಿವಾಸ್, ಶಂಕರಪ್ಪ, ಎಂಜಿ ನಾಗರಾಜ್, ಕಾರ್ಯದರ್ಶಿಗಳಾದ ತ್ಯಾಗರಾಜ್, ನಾರಾಯಣಸ್ವಾಮಿ, ಶಶಿಧರ್, ಆದಿನಾರಾಯಣಸ್ವಾಮಿ, ಬ್ರಹ್ಮಾನಂದ ರೆಡ್ಡಿ, ಸುದರ್ಶನ್, ವರಲಕ್ಷಿ÷್ಮ, ವಸಂತ, ಗಿರೀಶ್, ಪದಾಧಿಕಾರಿಗಳಾದ ಸುನಿಲ್ ಕುಮಾರ್. ಆನಂದ್. ವಿಜಯ್ ಕುಮಾರ್. ಪ್ರಭಾವತಿ, ಸಂತೋಷ್ ಕುಮಾರ್ ಭಾಗಿಯಾಗಿದ್ದರು.

ಚಿತ್ರ : ಕೋಲಾರ ನಗರದ ಸುವರ್ಣ ಕನ್ನಡ ಭವನದಲ್ಲಿ ಶನಿವಾರ ನಡೆದ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಥಮ ಜಿಲ್ಲಾ ಸಮಾವೇಶದಲ್ಲಿ ಜಿಲ್ಲೆಯ ಆರು ತಾಲೂಕುಗಳ ೨೪ ಶಿಕ್ಷಕರಿಗೆ ವಿದ್ಯಾರತ್ನ ಪ್ರಶಸ್ತಿ ಆರು ಜನ ಬೋಧಕೇತರ ಸಿಬ್ಬಂದಿಗೆ ಸೇವಾ ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande