
ಕೋಲಾರ, ೨೦ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಕರ್ನಾಟಕ ಜ್ಞಾನ ಜ್ಞಾನ ಸಮಿತಿ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವೈ.ಮಂಜುಳಾ ನೇಮಕಗೊಂಡಿದ್ದಾರೆ.
ನಗರದ ಹೊರವಲಯದಲ್ಲಿರುವ ದಕ್ಷಿಣ ಸ್ವಾಧದಲ್ಲಿ ಇಂದು ನಡೆದ ಸಮಿತಿಯ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಈ ಸಂದರ್ಭದಲ್ಲಿ ಅವರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿಲಾಯಿತು. .
ವಿಜ್ಞಾನ ಕಾರ್ಯಗಾರರು, ವಿಜ್ಞಾನ ಗೋಷ್ಠಿ,ವಿಜ್ಞಾನಿಗಳ ನೆನಪು, ವೈಜ್ಞಾನಿಕ ಚಿಂತನೆ ನಿಟ್ಟಿನಲ್ಲಿ ಸದೃಢ ನಾಯಕತ್ವ ನೀಡುವಂತೆ ಸಮಿತಿಯ ಜಿಲ್ಲಾಧ್ಯಕ್ಷ ಜಿ ಶ್ರೀನಿವಾಸ್ ಅಭಿನಂದಿಸಿ ತಿಳಿಸಿದರು
ಜಿಲ್ಲೆಯಾದ್ಯಂತ ವಿದ್ಯಾರ್ಥಿ ಯುವ ಸಮುದಾಯ ಮತ್ತು ಶಿಕ್ಷಕರು ವೈಜ್ಞಾನಿಕ ಚಿಂತನೆ ನಡೆಸಲು ಸಹಕಾರಿ ಆಗಲಿರುವ ಚರ್ಚೆ ವಿಚಾರಗೋಷ್ಠಿಗಳನ್ನು ಜಿಲ್ಲೆಯಾದ್ಯಂತ ಏರ್ಪಡಿಸಿ ರಸಪ್ರಶ್ನೆ, ವಿಜ್ಞಾನ ಕಾರ್ಯಗಾರ ಮತ್ತು ವಿಜ್ಞಾನ ಶಿಬಿರ ಮೂಲಕ ವೈಜ್ಞಾನಿಕ ಮನೋಭಾವನೆಯನ್ನು ಜಿಲ್ಲೆಯಾದ್ಯಂತ ತುಂಬಲು ನೂತನ ಕಾರ್ಯದರ್ಶಿಗಳು ಸಹಕಾರ ನೀಡಿ ಸಮಿತಿಯನ್ನು ಅಭಿವೃದ್ಧಿಪಡಿಸಲು ಸೂಚನೆ ನೀಡಿದರು. .
ಅಭಿನಂದನೆ ಸ್ವೀಕರಿಸಿದ ಮಂಜುಳಾ ರವರು ಈ ಸಂದರ್ಭದಲ್ಲಿ ಮಾತನಾಡಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುವುದರ ಜೊತೆಗೆ ಜಿಲ್ಲೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ವಿಜ್ಞಾನ ಚಟುವಟಿಕೆಗಳನ್ನು ಮತ್ತಷ್ಟು ಜಾಗೃತಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ವಿ. ಜಗನ್ನಾಥ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಸಿ. ಪದ್ಮಾವತಿ ಮುಖಂಡರುಗಳಾದ ಡಾ. ಶ್ರೀನಿವಾಸ ಪ್ರಸಾದ್, ಕೊಂಡರಾಜನಹಳ್ಳಿ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್