ಪಲ್ಸ್ ಪೋಲಿಯೋ ಲಸಿಕಾ
ಬಳ್ಳಾರಿ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತ ದೇಶವು ಪೋಲಿಯೋ ವಿರುದ್ಧ ನಿರಂತರ ವಿಜಯ ಸಾಧಿಸಿದ್ದು, ಇದನ್ನು ಮುಂದುವರೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಕೋರಿದ್ದಾರೆ. ಸಾಮಾನ್ಯವಾಗಿ ಮಕ್ಕಳಲ
ಪಲ್ಸ್ ಪೋಲಿಯೋ ಲಸಿಕಾ


ಪಲ್ಸ್ ಪೋಲಿಯೋ ಲಸಿಕಾ


ಬಳ್ಳಾರಿ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ದೇಶವು ಪೋಲಿಯೋ ವಿರುದ್ಧ ನಿರಂತರ ವಿಜಯ ಸಾಧಿಸಿದ್ದು, ಇದನ್ನು ಮುಂದುವರೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಕೋರಿದ್ದಾರೆ.

ಸಾಮಾನ್ಯವಾಗಿ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಪೋಲಿಯೋ ಮೆಲಟೈಸ್ ಎಂಬ ಸೂಕ್ಷಾö್ಮಣುವಿನಿಂದ ಉಂಟಾಗುವ ಪೋಲಿಯೋ ರೋಗದ ನಿಯಂತ್ರಣಕ್ಕಾಗಿ 1995 ರಿಂದ ನಿರಂತರವಾಗಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ರಾಷ್ಟçದ್ಯಾಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರಸ್ತುತ ಈ ವರ್ಷದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಡಿಸೆಂಬರ್-21 ರಂದು ಜರುಗಲಿದೆ. 1998ರಲ್ಲಿ 71 ಪ್ರಕರಣಗಳಿದ್ದ ಕರ್ನಾಟಕದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೂಲಕ ಪೋಲಿಯೋ ನಿರ್ಮೂಲನೆಗೆ ಪಣ ತೊಡಲಾಯಿತು. 2007 ರಲ್ಲಿ ಕರ್ನಾಟಕದಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ 2011 ರ ಜನವರಿ 13 ರಂದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿದ್ದು, ನಂತರದಲ್ಲಿ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು 11ನೇ ಪೆಬ್ರವರಿ 2014 ರಂದು ಭಾರತವನ್ನು ಪೋಲಿಯೋ ಮುಕ್ತ ರಾಷ್ಟçವೆಂದು ಘೋಷಣೆ ಮಾಡಿತು.

ಪಲ್ಸ್ ಪೋಲಿಯೊ ಎನ್ನುವುದು ಪೋಲಿಯೊ (Poliomyelitis) ಎಂಬ ಭೀಕರ ವೈರಲ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಸರ್ಕಾರ ನಡೆಸುವ ವಿಶೇಷ ಲಸಿಕೆ ಅಭಿಯಾನ. ಇದರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆ ಹನಿಗಳನ್ನು ನೀಡಲಾಗುತ್ತದೆ.

ಪೋಲಿಯೊ ಒಂದು ವೈರಸ್‌ನಿಂದ ಉಂಟಾಗುವ ಸೋಂಕು ರೋಗ. ಇದು ಮುಖ್ಯವಾಗಿ ನರವ್ಯವಸ್ಥೆಯನ್ನು ಹಾನಿಗೊಳಿಸಿ, ಕೆಲವೊಮ್ಮೆ ಶಾಶ್ವತ ಅಂಗವಿಕಲತೆ ಉಂಟುಮಾಡಬಹುದು.

ಭಾರತ ದೇಶವು ಪೋಲಿಯೊ ಮೇಲಿನ ವಿಜಯವನ್ನು ಮುಂದುವರೆಸುತ್ತಾ, ಜಗತ್ತಿನಾದ್ಯಂತ ಪೋಲಿಯೊ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಪಲ್ಸ್ ಪೋಲಿಯೊ ಕಾರ್ಯಕ್ರಮದ ಉದ್ದೇಶವಾಗಿದೆ ಎಂದಿದ್ದಾರೆ.

5 ವರ್ಷದೊಳಗಿನ ಯಾವುದೇ ಮಗುವೂ ಲಸಿಕೆಯಿಂದ ವಂಚಿತವಾಗದ0ತೆ ನೋಡಿಕೊಳ್ಳುವುದು. ಈಗಾಗಲೇ ಲಸಿಕೆ ಪಡೆದ ಮಕ್ಕಳಿಗೂ ಹೆಚ್ಚುವರಿ ರಕ್ಷಣೆಯನ್ನು ನೀಡುವುದಾಗಿದೆ.

ಬೈ ವಾಲೆಂಟ್ ಓರಲ್ ಪೋಲಿಯೊ ವ್ಯಾಕ್ಸಿನ್ ನೀಡುವ ವಿಧಾನ: ಬಾಯಿ ಮುಖಾಂತರ 2 ಹನಿ.

ವಯಸ್ಸು: 0–5 ವರ್ಷಗಳೊಳಗಿನ ಎಲ್ಲಾ ಮಕ್ಕಳು.

ಹಿಂದೆ ಲಸಿಕೆ ಪಡೆದಿದ್ದರೂ ಕೂಡ ಪಲ್ಸ್ ಪೋಲಿಯೊ ದಿನದಂದು ಮತ್ತೆ ಪೋಲಿಯೊ ಲಸಿಕೆ ಕೊಡಿಸಬೇಕು (ಇದು ಸುರಕ್ಷಿತ ಹಾಗೂ ಹೆಚ್ಚು ಪರಿಣಾಮಕಾರಿ) ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ / ಬೂತ್ ಗೆ ಡಿಸೆಂಬರ್ 21 ರಂದೇ ಮಗುವನ್ನು ಕರೆದೊಯ್ದು ಲಸಿಕೆ ಕೊಡಿಸಬೇಕು.

ಡಿಸೆಂಬರ್ 22 ರಿಂದ 24 ರ ವರೆಗೆ ಆರೋಗ್ಯ ಕಾರ್ಯಕರ್ತರು ಮನೆಗೆ ಬಂದು ಲಸಿಕೆ ಪಡೆದ ಬಗ್ಗೆ ಮಕ್ಕಳ ಪರಿಶೀಲನೆ ಮಾಡುವಾಗ ಸಹಕರಿಸಬೇಕು. ಲಸಿಕೆ ಪಡೆದ ನಂತರ ಮಗುವಿನ ಎಡಗೈ ಕಿರು ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಹಾಕಲಾಗುತ್ತದೆ (ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಲಸಿಕೆ ಪಡೆದಿರುವುದನ್ನು ಖಾತ್ರಿಪಡಿಸಲು) ಅಲ್ಪ ಪ್ರಮಾಣದ ಜ್ವರ, ಶೀತ, ಅತಿಸಾರ ಭೇದಿ ಇದ್ದರೂ ಕೂಡ ಲಸಿಕೆ ಕೊಡಿಸಬಹುದು.

ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಇಲ್ಲ. ಈ ಹಿನ್ನೆಲೆಯಲ್ಲಿ ವಲಸೆ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು, ಇಟ್ಟಿಗೆ ಬಟ್ಟಿಗಳು, ಅಲೇಮಾರಿ ಕುರಿ ಸಾಕಾಣಿಕೆದಾರರು, ತೋಟದ ಮನೆಗಳು, ಕಟ್ಟಡ ನಿರ್ಮಾಣ ಸ್ಥಳಗಳು ಮುಂತಾದ ಸ್ಥಳಗಳಲ್ಲಿ ಮಕ್ಕಳಿರುವ ಬಗ್ಗೆ ಕ್ರಿಯಾಯೋಜನೆಯಲ್ಲಿ ಹೆಚ್ಚು ಆದ್ಯತೆ ನೀಡಿ ಲಸಿಕೆ ಹಾಕಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande