ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಕಿಡಿ
ವಿಜಯಪುರ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದ್ವೇಷ ಭಾಷಣ ನಿಲ್ಲಬೇಕು ಅಥವಾ ಬೇಡವಾ ನೀವೆ ಹೇಳಿ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಕ್ಕೆ ಪ್ರಶ್ನಿಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ ಅಂದ್ರೆ ಬಾಯಿಗೆ ಬಂದ ಹಾಗೆ ಬೈಯುವುದಾ..?ವಿಧೇಯಕದ ಬಗ್ಗೆ ನಮಗೆ ಸ್ಪಷ್ಟತೆ ಇ
ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಕಿಡಿ


ವಿಜಯಪುರ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದ್ವೇಷ ಭಾಷಣ ನಿಲ್ಲಬೇಕು ಅಥವಾ ಬೇಡವಾ ನೀವೆ ಹೇಳಿ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಕ್ಕೆ ಪ್ರಶ್ನಿಸಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ ಅಂದ್ರೆ ಬಾಯಿಗೆ ಬಂದ ಹಾಗೆ ಬೈಯುವುದಾ..?ವಿಧೇಯಕದ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಬಿಜೆಪಿಯವರಿಗೆ ಸ್ಪಷ್ಟತೆ ಇಲ್ಲ. ಅವರು ಸರಿಯಾಗಿ ಓದಿದ್ದರೆ ಅವರಿಗೆ ಅರ್ಥ ಆಗ್ತಿತ್ತು. ದ್ವೇಷ ಭಾಷಣ ಮಾಡೋದೆ ಬಿಜೆಪಿಯವರು ಎಂದು ಕಿಡಿಕಾರಿದರು.

ಅಲ್ಲದೇ, ಅವರ ಟಾಪ್ ಲೀಡರ್ ಮೋದಿ, ಅಮಿತ್ ಶಾ ದಿಂದ ಹಿಡಿದು ಎಲ್ಲ ಬಿಜೆಪಿ ನಾಯಕರುಗಳು ದ್ವೇಷ ಭಾಷಣ ಮಾಡ್ತಾನೆ ಇರ್ತಾರೆ. ಅದಕ್ಕಾಗಿಯೇ ಈ ಕಾಯ್ದೆ ಜಾರಿಗೆ ತಂದಿದ್ದು, ದ್ವೇಷ ಭಾಷಣ ಬಿಜೆಪಿ ಮಾಡಿದಷ್ಟು ಯತ್ನಾಳ್ ಅವರು ಮಾಡಲ್ಲ. ಬಿಜೆಪಿ ಅವರೆ ಅತೀ ಹೆಚ್ಚು ದ್ವೇಷ ಭಾಷಣ ಮಾಡೋದು. ಅದರಲ್ಲೂ ಅರ್ ಎಸ್ ಎಸ್ ,ವಿಶ್ವ ಹಿಂದೂ ಪರಿಷತ್ ಅವರು ಹೇಳಿ ಕೊಡುತ್ತಾರೆ. ಅದಕ್ಕೆ ಇವರು ಮಾತನಾಡುತ್ತಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande