ಬಿಜಿಎಂಎಲ್ ಶಾಲೆಯನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಒತ್ತಾಯ
ಬಿಜಿಎಂಎಲ್ ಶಾಲೆಯನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಒತ್ತಾಯ
ಚಿತ್ರ : ಬಿಜಿಎಂಎಲ್ ಶಾಲೆಯನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಒತ್ತಾಯಿಸಿ ಮಾಜಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ ರವರಿಗೆ ಮನವಿ ಪತ್ರ ಸಲ್ಲಿಸಿದರು.


ಕೋಲಾರ, ೧೭ (ಹಿ.ಸ) :

ಆ್ಯಂಕರ್ : ಕೆಜಿಎಫ್ : ಬಿಜಿಎಂಎಲ್ ಶಾಲೆಯನ್ನು ಖಾಸಗಿ ವ್ಯಕ್ತಿಗಳ ಆಡಳತಕ್ಕೆ ನೀಡಿದರೆ ನಮ್ಮ ಮಕ್ಕಳು ಮರಿಮಕ್ಕಳು ಬಿಜಿಎಂಎಲ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ಅವಕಾಶದಿಂದ ವಂತಿತರಾಗುತ್ತಾರೆ ಮತ್ತು ಹಳೆ ವಿಧ್ಯಾರ್ಥಿಗಳ ಸಂಘವೆಂದು ಹೇಳಿಕೊಳ್ಳುವವರು ಶಾಲೆಯನ್ನು ಖಾಸಗಿಕರಣಗೊಳಿಸುವ ಹುನ್ನಾರ ನಡೆಸುತ್ತಿರುವುದರಿಂದ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ಕೈಗಳಿಗೆ ನೀಡಬಾರದು ಎಂದು ಬಿಜಿಎಂಎಲ್ ಚಿನ್ನದ ಗಣಿ ಮಾಜಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜಿಎಂಎಲ್ ಚಿನ್ನದ ಗಣಿ ಮಾಜಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೂರ್ತಿ ಬಿಜಿಎಂಎಲ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಕೆಲವು ಅಧಿಕಾರಿಗಳು ಬಿಜಿಎಂಎಲ್ ಕಂಪನಿಗೆ ಸೇರಿದ ಕ್ಲಬ್ ನೆಹರು ಕಲ್ಯಾಣ ಮಂಟಪ ಗಾಲ್ಫ್ ಕ್ಲಬ್ ಮುಂತಾದ ಹಲವು ಆಸ್ತಿಗಳನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ.

ಇದರ ನಡುವೆ ಇಧೀಗ ಬಿಜಿಎಂಎಲ್ ನಿವೃತ್ತ ಅಧಿಕಾರಿ ಸಂಪತ್ ಕುಮಾರ್ ಹಾಗೂ ಬಿಜಿಎಂಎಲ್ ಶಾಲೆಯ ಹಳೆ ವಿಧ್ಯಾರ್ಥಿ ನೀಲ್ ಮೈಕಲ್ ಜೋಸೆಫ್ ತನ್ನ ಕುಟುಂಭದ ಸದಸ್ಯರೊಂದಿಗೆ ಕೆಜಿಎಫ್ ಸ್ಕೂಲ್ ಪೌಂಡೇಷನ್ ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ನೋದಣಿ ಮಾಡಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಮತ್ತು ಹಳೆ ವಿಧ್ಯಾರ್ಥಿಗಳಿಂದ ದೇಣಿಗೆ ಪಡೆದು ಪೌಂಡೇಷನ್ ಬಳಸಿ ಸಮಾಜ ಸೇವೆಯ ನೆಪದಲ್ಲಿ ಶಾಲೆಯಲ್ಲಿ ಕಾನೂನು ಭಾಹಿರವಾಹಿರವಾಗಿ ಸ್ವಯಂ ಘೋಷಿತ ಶಿಕ್ಷಣಾ ಸಮಿತಿಯನ್ನು ಸ್ಪಾಪಿಸಿ ಅದರ ಮೂಲಕ ಶಾಲೆಯ ಆಡಳಿತವನ್ನು ತಮ್ಮ ವಶಕ್ಕೆ ಪಡೆಯುವ ಹುನ್ನಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ೧೨೫ ವರ್ಷಗಳಿಂದ ಬಿಜಿಎಂಎಲ್ ಕಾರ್ಮಿಕರ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತಿರುವ ಶಾಲೆಯು ಸರ್ಕಾರದ ಆಸ್ತಿಯಾಗಿದ್ದು ಶಾಲೆ ಖಾಸಗಿಕರಣಗೊಂಡರೆ ನಮ್ಮ ಮುಂದಿನ ಪೀಳಿಗೆಯು ಶಾಲಾ ಶುಲ್ಕವನ್ನು ಪಾವತಿಸಿ ವಿಧ್ಯಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಬಿಜಿಎಂಎಲ್ ಶಾಲೆಯನ್ನು ಖಾಸಗಿ ವ್ಯಕ್ತಿಗಳ ಕೈಗಳಿಗೆ ಆಡಳಿತ ವನ್ನು ನೀಡದೆ ಸರ್ಕಾರವೇ ಮುಂದುವರೆಸಿ ಕೊಂಡು ಹೋಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಿಜಿಎಂಎಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪನ್ನಿರ್ ಸೇಲ್ವನ್ , ಸೇತು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಚಿತ್ರ : ಬಿಜಿಎಂಎಲ್ ಶಾಲೆಯನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಒತ್ತಾಯಿಸಿ

ಮಾಜಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande