ಮುಂದಿನ ಐದು ದಿನಗಳ ಕಾಲ ಬಿಜೆಪಿ ಸಂಸದರಿಗೆ ವಿಪ್ ಜಾರಿ
ನವದೆಹಲಿ, 15 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಚಳಿಗಾಲದ ಅಧಿವೇಶನದ ಕೊನೆಯ ವಾರಕ್ಕೆ ಸೋಮವಾರ ಪ್ರವೇಶಿಸಿದಂತೆಯೇ ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಕೋಲಾಹಲಕ್ಕೆ ವೇದಿಕೆ ಸಿದ್ಧವಾಯಿತು. ಈ ನಡುವೆ, ಭಾರತೀಯ ಜನತಾ ಪಕ್ಷ ತನ್ನ ಎಲ್ಲಾ ಸಂಸದರಿಗೆ ಮುಂದಿನ ಐದು ದಿನಗಳ ಕಾಲ ವಿಪ್ ಜಾರಿ ಮಾಡಿದೆ. ಡಿಸೆಂಬ
LS


ನವದೆಹಲಿ, 15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಚಳಿಗಾಲದ ಅಧಿವೇಶನದ ಕೊನೆಯ ವಾರಕ್ಕೆ ಸೋಮವಾರ ಪ್ರವೇಶಿಸಿದಂತೆಯೇ ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಕೋಲಾಹಲಕ್ಕೆ ವೇದಿಕೆ ಸಿದ್ಧವಾಯಿತು. ಈ ನಡುವೆ, ಭಾರತೀಯ ಜನತಾ ಪಕ್ಷ ತನ್ನ ಎಲ್ಲಾ ಸಂಸದರಿಗೆ ಮುಂದಿನ ಐದು ದಿನಗಳ ಕಾಲ ವಿಪ್ ಜಾರಿ ಮಾಡಿದೆ.

ಡಿಸೆಂಬರ್ 15 ರಿಂದ 19 ರವರೆಗೆ ಸದನದ ಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ತನ್ನ ಸಂಸದರಿಗೆ ಸೂಚಿಸಿದೆ. ಈ ಅವಧಿಯಲ್ಲಿ ಹಲವು ಪ್ರಮುಖ ಮಸೂದೆಗಳನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ. ಚಳಿಗಾಲದ ಅಧಿವೇಶನವು ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ.

ಮುಂದಿನ ದಿನಗಳಲ್ಲಿ ಸರ್ಕಾರವು ಹೊಸ ಪರಮಾಣು ಶಕ್ತಿ (ಶಾಂತಿ) ಮಸೂದೆಯನ್ನು ಪರಿಚಯಿಸುವ ನಿರೀಕ್ಷೆಯಿದೆ. ಜೊತೆಗೆ ಕಾರ್ಪೊರೇಟ್ ಮಸೂದೆ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಮಸೂದೆಗಳೂ ಚರ್ಚೆಗೆ ಬರುವ ಸಾಧ್ಯತೆ ಇದೆ.

ಪರಮಾಣು ಶಕ್ತಿ ಮಸೂದೆಗೆ ವಿಶೇಷ ಮಹತ್ವವಿದ್ದು, ಇದು ಇಂಧನ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ದಾರಿ ತೆರೆಯುವ ಜೊತೆಗೆ, ಭಾರತದ ಇಂಧನ ಭದ್ರತೆ ಹಾಗೂ ತಾಂತ್ರಿಕ ಪ್ರಗತಿಯತ್ತ ಮಹತ್ವದ ಹೆಜ್ಜೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande