
ಕೋಲಾರ, ೧೩ ಡಿಸೆಂಬರ್ (ಹಿ.ಸ.) :
ಆಂಕರ್ : ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಲೈಕೊ ಮೆಟರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ನಗರದ ಬಾಲಕರ ಪದವಿ ಕಾಲೇಜಿಗೆ ಶುದ್ದ ನೀರಿನ ಯಂತ್ರ (ವಾಟರ್ ಫಿಲ್ಟರ್) ವಿತರಿಸಿದರು.
ಲೈಕೊ ಮಟಿರಿಯಲ್ಸ್ ಕಂಪನಿಯ ಸಂಪನ್ಮೂಲ ವ್ಯವಸ್ಥಾಪಕ ಡಿ.ಎಂ ಮಹದೇವ್ ಮಾತನಾಡಿ ಕಂಪನಿಗಳ ಮೂಲಕ ಸಿಗುವ ಸಿಎಸ್ಆರ್ ಅನುದಾನವನ್ನು ವಿಧ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಕಂಪನಿಯ ಹಿರಿಯ ವ್ಯವಸ್ಥಾಪಕಿ ಶಾಲಿನಿ ಮಾಯಾಂಕ್ ಮಾತನಾಡಿ ವಿಧ್ಯಾರ್ಥಿಗಳು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡದು ಜೀವನೋಪಾಯದ ಉದ್ಯೋಗವನ್ನು ಪಡೆಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮುನಿಶಾಮಪ್ಪ ಮಾತನಾಡಿ ಲೈಕೊ ಮೆಟರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯಕ್ಕೆ ಅಭಿನಂದನೆಗಳು ಕಂಪನಿಗಳು ಸಹ ಸರ್ಕಾರಿ ಶಾಲಾ ಕಾಲೇಜುಗಳಿಗೆ ಸಿಎಸ್ಆರ್ ಅನುದಾನವನ್ನು ನೀಡಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಮುರಳಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಲೈಕೊ ಮೆಟರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ನಗರದ ಬಾಲಕರ ಪದವಿ ಕಾಲೇಜಿಗೆ ಶುದ್ದ ನೀರಿನ ಯಂತ್ರ ಲೈಕೊ ಮಟಿರಿಯಲ್ಸ್ ಕಂಪನಿಯ ಸಂಪನ್ಮೂಲ ವ್ಯವಸ್ಥಾಪಕ ಡಿ.ಎಂ ಮಹದೇವ್ ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್