ಬಿಐಟಿಎಂನಲ್ಲಿ ಜಲ ನಿರ್ವಹಣೆ ಕಾರ್ಯಾಗಾರ
ಬಳ್ಳಾರಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಅಂತರ್ಜಲ ಮಂಡಳಿ, ನೈರುತ್ಯ ಕ್ಷೇತ್ರ, ಬೆಂಗಳೂರು ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗ, ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ)
ಬಿಐಟಿಎಂನಲ್ಲಿ ಜಲ ನಿರ್ವಹಣೆ ಕಾರ್ಯಾಗಾರ


ಬಿಐಟಿಎಂನಲ್ಲಿ ಜಲ ನಿರ್ವಹಣೆ ಕಾರ್ಯಾಗಾರ


ಬಳ್ಳಾರಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಅಂತರ್ಜಲ ಮಂಡಳಿ, ನೈರುತ್ಯ ಕ್ಷೇತ್ರ, ಬೆಂಗಳೂರು ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗ, ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ) ಇವರ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ `ಜಲಧರೆಗಳ ನಕಾಶಿಕೆ, ಅಂತರ್ಜಲ ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ’ ವಿಷಯದ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜಿ. ಕೃಷ್ಣಮೂರ್ತಿ, ಅವರು ಕಾರ್ಯಾಗಾರ ಉದ್ಘಾಟಿಸಿ, ರಾಜ್ಯ–ಕೇಂದ್ರ ಅಂತರ್ಜಲ ಇಲಾಖೆಗಳ ಅಧಿಕಾರಿಗಳು, ಶೈಕ್ಷಣಿಕ ವಲಯ, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಅಂತರ್ಜಲ ವಿಜ್ಞಾನದಲ್ಲಿ ನಡೆಯುತ್ತಿರುವ ತಾಂತ್ರಿಕ ಅಭಿವೃದ್ಧಿಗಳು ಹಾಗೂ ಸವಾಲುಗಳ ಕುರಿತು ಅರಿವು ಮೂಡಿಸಲಾಗುತ್ತದೆ ಎಂದರು.

ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ) ಯ ಪ್ರಾಂಶುಪಾಲರಾದ ಡಾ. ಯಡವಳ್ಳಿ ಬಸವರಾಜ್ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

‘ಕರ್ನಾಟಕದಲ್ಲಿನ ಕೇಂದ್ರೀಯ ಅಂತರ್ಜಲ ಮಂಡಳಿಯ ಚಟುವಟಿಕೆಗಳು’ ವಿಷಯದ ಕುರಿತು ಜಿ. ಕೃಷ್ಣಮೂರ್ತಿ, ‘ಬಳ್ಳಾರಿ ಜಿಲ್ಲೆಯ ಎನ್‍ಎಕ್ಯೂಐಎಂ ಅಧ್ಯಯನಗಳು’ ವಿಷಯದ ಕುರಿತು ಸಹಾಯಕ ಜಲವಿಜ್ಞಾನಿ ಡಾ. ದಮೇರ ಆಂಜನೇಯುಲು, ‘ಕರ್ನಾಟಕ ರಾಜ್ಯದಲ್ಲಿನ ನೀರಿನ ಮಟ್ಟ ಮತ್ತು ನೀರಿನ ಗುಣಮಟ್ಟದ ಮೇಲೆ ಹವಾಮಾನ ವ್ಯತ್ಯಾಸ ಮತ್ತು ಅದರ ಪ್ರಭಾವ’ ವಿಷಯದ ಕುರಿತು ಡಾ. ಎಂ. ಗೋಬಿನಾಥ್ ಮತ್ತು ‘ಸುಸ್ಥಿರ ಅಂತರ್ಜಲಕ್ಕಾಗಿ ಗ್ರಾಮ ಮಟ್ಟದಲ್ಲಿ ಅಂತರ್ಜಲ ಮೂಲಗಳ ಮೌಲ್ಯಮಾಪನ ನಿರ್ವಹಣೆ’ ವಿಷಯದ ಕುರಿತು ಡಾ. ಜೆ. ದವಿತುರಾಜ್ ಅವರು ವಿಶೇಷ ಉಪನ್ಯಾಸ ನೀಡಿದರು.

ಬಳ್ಳಾರಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ (ಬಿಐಟಿಎಂ)ಯ ಉಪ ಪ್ರಾಂಶುಪಾಲ ಮತ್ತು ಡೀನ್ ಡಾ.ಬಿ.ಎಸ್. ಖೇಣೆಡ್ ವೇದಿಕೆಯಲ್ಲಿದ್ದರು.

ಕಾರ್ಯಾಗಾರದಲ್ಲಿ ಅಂತರ್ಜಲ ವಿಜ್ಞಾನ ಮತ್ತು ನಿರ್ವಹಣೆಯ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ತರಬೇತಿಗಳ ಉಪನ್ಯಾಸ ಕಾರ್ಯಕ್ರಮ ಜರುಗಿದವು. ನಂತರ ಪ್ರಶಿಕ್ಷಣಾರ್ಥಿಗಳ ಪ್ರತಿಕ್ರಿಯೆ ಹಾಗೂ ಸಂವಾದ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande