ಮಾನವ ಹಕ್ಕುಗಳ ರಕ್ಷಣೆಗೆ ಶಿಕ್ಷಣವೇ ಆಯುಧ : ಪಿ.ಎನ್. ಸುರೇಶ್
ಬಳ್ಳಾರಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್: ಮಾನವ ಹಕ್ಕುಗಳನ್ನು ಕಾಪಾಡಲು ಶಿಕ್ಷಣವೇ ಶಕ್ತಿಯುತ ಆಯುಧ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪಿ.ಎನ್. ಸುರೇಶ್ ಅವರು ತಿಳಿಸಿದ್ದಾರೆ. ಶ್ರೀ ವಾಸವಿ ವಿದ್ಯಾಲಯದಲ್ಲಿ ಬುಧವಾರ ನಡೆದ `ಮಾನವ ಹಕ್ಕುಗಳ ದಿನ
ಮಾನವ ಹಕ್ಕುಗಳ ರಕ್ಷಣೆಗೆ ಶಿಕ್ಷಣವೇ ಆಯುದ - ಪಿ.ಎನ್. ಸುರೇಶ್


ಬಳ್ಳಾರಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್: ಮಾನವ ಹಕ್ಕುಗಳನ್ನು ಕಾಪಾಡಲು ಶಿಕ್ಷಣವೇ ಶಕ್ತಿಯುತ ಆಯುಧ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪಿ.ಎನ್. ಸುರೇಶ್ ಅವರು ತಿಳಿಸಿದ್ದಾರೆ.

ಶ್ರೀ ವಾಸವಿ ವಿದ್ಯಾಲಯದಲ್ಲಿ ಬುಧವಾರ ನಡೆದ `ಮಾನವ ಹಕ್ಕುಗಳ ದಿನ'ದ ಜಾಗೃತಿ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಂವಿಧಾನಬದ್ಧವಾದ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಅಲ್ಲದೇ, ಇತರರ ಹಕ್ಕುಗಳನ್ನೂ ಗೌರವಿಸಿ ಶಾಂತಿ - ನೆಮ್ಮದಿ, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದರು.

ವಿದ್ಯಾರ್ಥಿನಿ ಎ.ಸಿ. ಸಿಂಚನಾ ಅವರು `ಮಾನವ ಹಕ್ಕುಗಳ ದಿನದ ಮಹತ್ವ'ವನ್ನು ವಿವರಿಸಿ, ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಗೌರವ, ಸ್ವಾತಂತ್ರ್ಯ ಮತ್ತು ಸುರಕ್ಷಿತ ಜೀವನ ನೀಡುತ್ತವೆ. ಮೂಲಭೂತ ಹಕ್ಕುಗಳು ಮತ್ತು ಈ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ತಿಳಿಸುತ್ತವೆ ಎಂದರು.

ಕುಮಾರಿ ಹರಿಣಿ ಅವರು `ಮಾನವ ಹಕ್ಕುಗಳ ದಿನದ ಮಹತ್ವ' ಸಾರುವ ನೃತ್ಯ ಪ್ರದರ್ಶಿಸಿ ವಿದ್ಯಾರ್ಥಿಗಳ ಮೆಚ್ಚುಗೆ ಪಡೆದರು. ಶಾಲಾ ಮುಖ್ಯೋಪಾಧ್ಯಯರಾದ ಯು. ವೀರೇಶ್ ಅವರು ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande