ಹಳೆಯ ಅನುಪಯುಕ್ತ ವಸ್ತುಗಳ ವಿಲೇವಾರಿ
ಬಳ್ಳಾರಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದ ಸ್ಟೇಷನ್ ರಸ್ತೆಯ ಜನತಾ ಬಜಾರ್ ಕಟ್ಟಡದ ಬಳ್ಳಾರಿ ಉಪವಿಭಾಗದ ಬಳ್ಳಾರಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ 40 ವರ್ಷಗಳಿಂದ ಬಳಕೆಗೆ ಬಾರದ ಅನುಪಯುಕ್ತ ಪಿಠೋಪಕರಣಗಳು ಹಾಗೂ ಕಡತಗಳಿದ್ದು, ಅವುಗಳ ವಿಲೇವಾರಿಗೆ ಸಂಬಂಧಿ
ಹಳೆಯ ಅನುಪಯುಕ್ತ ವಸ್ತುಗಳ ವಿಲೇವಾರಿ


ಬಳ್ಳಾರಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ಸ್ಟೇಷನ್ ರಸ್ತೆಯ ಜನತಾ ಬಜಾರ್ ಕಟ್ಟಡದ ಬಳ್ಳಾರಿ ಉಪವಿಭಾಗದ ಬಳ್ಳಾರಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ 40 ವರ್ಷಗಳಿಂದ ಬಳಕೆಗೆ ಬಾರದ ಅನುಪಯುಕ್ತ ಪಿಠೋಪಕರಣಗಳು ಹಾಗೂ ಕಡತಗಳಿದ್ದು, ಅವುಗಳ ವಿಲೇವಾರಿಗೆ ಸಂಬಂಧಿಸಿದಂತೆ ವಸ್ತುಗಳ ಖರೀದಿಗಾಗಿ ಮನವಿ ಆಹ್ವಾನಿಸಲಾಗಿದೆ.

ಆಸಕ್ತರು ಡಿ.16 ರೊಳಗಾಗಿ ವಸ್ತುಗಳ ಖರೀದಿಗಾಗಿ ಮನವಿಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬಳ್ಳಾರಿ ಉಪ-ವಿಭಾಗ, ಬಳ್ಳಾರಿ, ಜನತಾ ಬಜಾರ್ ಕಟ್ಟಡ ಸ್ಟೇಷನ್ ರಸ್ತೆ, ಬಳ್ಳಾರಿ ಇಲ್ಲಿಗೆ ಅಥವಾ ಮೊ.9535151619, 8073013396 ಗೆ ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande