ಸುಸ್ಥಿರ ಮೀನುಗಾರಿಕೆ, ರಫ್ತು ಉತ್ತೇಜನಕ್ಕಾಗಿ ಹೊಸ ನಿಯಮಗಳು ಜಾರಿ
ನವದೆಹಲಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ “ನೀಲಿ ಆರ್ಥಿಕತೆಯ ಕನಸು” ನನಸಾಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸುಸ್ಥಿರ ಮೀನುಗಾರಿಕೆ ಶೋಷಣೆ, ಅಕ್ರಮ ಮೀನುಗಾರಿಕೆ ನಿಗ್ರಹ, ಸಣ್ಣ ಮೀನುಗಾರರ ಸಬಲೀಕರಣ ಮತ್ತು ಸಮುದ್ರ ಉತ್ಪನ್ನ ರಫ್ತು ಉತ್ತೇಜನ ಗುರಿಯೊ
Law


ನವದೆಹಲಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ “ನೀಲಿ ಆರ್ಥಿಕತೆಯ ಕನಸು” ನನಸಾಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸುಸ್ಥಿರ ಮೀನುಗಾರಿಕೆ ಶೋಷಣೆ, ಅಕ್ರಮ ಮೀನುಗಾರಿಕೆ ನಿಗ್ರಹ, ಸಣ್ಣ ಮೀನುಗಾರರ ಸಬಲೀಕರಣ ಮತ್ತು ಸಮುದ್ರ ಉತ್ಪನ್ನ ರಫ್ತು ಉತ್ತೇಜನ ಗುರಿಯೊಂದಿಗೆ, ವಿಶೇಷ ಆರ್ಥಿಕ ವಲಯಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಕಾರ, ಹೊಸ ನಿಯಮಗಳು ಮೀನುಗಾರರ ಸಹಕಾರ ಸಂಘಗಳಿಗೆ ತರಬೇತಿ, ಅಂತರರಾಷ್ಟ್ರೀಯ ಮಾನ್ಯತಾ ಪ್ರವಾಸ, ಸಂಸ್ಕರಣೆ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುತ್ತವೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿಗಳ ಅಡಿಯಲ್ಲಿ ಕೈಗೆಟುಕುವ ಸಾಲ ಸೌಲಭ್ಯಗಳು ಲಭ್ಯವಾಗಲಿವೆ.

ಸರ್ಕಾರವು ಪರಿಸರಕ್ಕೆ ಹಾನಿಕಾರಕವಾದ ಎಲ್ಇಡಿ ಲೈಟ್ ಮೀನುಗಾರಿಕೆ, ಜೋಡಿ ಟ್ರಾಲಿಂಗ್ ಮತ್ತು ಬುಲ್ ಟ್ರಾಲಿಂಗ್ ಪದ್ಧತಿಗಳನ್ನು ನಿಷೇಧಿಸಿದೆ. ಜೊತೆಗೆ ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ ಮೀನುಗಾರಿಕೆಯನ್ನು ತಡೆಯಲು ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

ಹೊಸ ನಿಯಮಗಳ ಪ್ರಕಾರ, ಯಾಂತ್ರಿಕೃತ ದೋಣಿಗಳಿಗೆ ಆನ್‌ಲೈನ್ ರಿಯಲ್‌ಕ್ರಾಫ್ಟ್ ಪೋರ್ಟಲ್ ಮುಖಾಂತರ ಉಚಿತ ಪ್ರವೇಶ ಪಾಸ್‌ಗಳನ್ನು ನೀಡಲಾಗುತ್ತದೆ. ಸಾಂಪ್ರದಾಯಿಕ ಮತ್ತು ಸಣ್ಣ ಮೀನುಗಾರರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ಮತ್ತು ಪಾರದರ್ಶಕವಾಗಿರಲಿದೆ. ಇದರಿಂದ ಸಮಯ ಉಳಿತಾಯ ಹಾಗೂ ಆಡಳಿತ ಕ್ರಮದಲ್ಲಿ ಸರಳತೆ ಸಾಧ್ಯವಾಗಲಿದೆ.

ನಿಯಮಗಳು ಆಳ ಸಮುದ್ರ ಮೀನುಗಾರಿಕೆಯನ್ನು ಉತ್ತೇಜಿಸುವುದರೊಂದಿಗೆ, ರಫ್ತು ಪ್ರಮಾಣ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸಲಿವೆ. ಸಮುದ್ರ ಉತ್ಪನ್ನಗಳ ಮೂಲ ಗುರುತಿನ ವ್ಯವಸ್ಥೆಯನ್ನೂ ಬಲಪಡಿಸಲಾಗುತ್ತದೆ.

ಹೊಸ ನೀತಿಯಲ್ಲಿ “ತಾಯಿ ಮತ್ತು ಮಕ್ಕಳ ಹಡಗು ವ್ಯವಸ್ಥೆ” ಅಂದರೆ ಮದರ್-ಚೈಲ್ಡ್ ವೆಸ್‌ಸೆಲ್ ಸಿಸ್ಟಮ್ ಜಾರಿಗೊಳ್ಳಲಿದೆ. ಇದರಿಂದ ಸಮುದ್ರದಲ್ಲಿಯೇ ಟ್ರಾನ್ಸ್‌ಶಿಪ್‌ಮೆಂಟ್‌ ಪ್ರಕ್ರಿಯೆ ಸಾಧ್ಯವಾಗಲಿದ್ದು, ದೀರ್ಘ ದೂರ ಮೀನುಗಾರಿಕೆ ಹಡಗುಗಳಿಗೆ ದೊಡ್ಡ ನೆರವಾಗಲಿದೆ.

ಅಂಡಮಾನ್–ನಿಕೋಬಾರ್ ಹಾಗೂ ಲಕ್ಷದ್ವೀಪದ ದ್ವೀಪ ಪ್ರದೇಶಗಳು ಭಾರತದ ಇಇಜಡ್‌ನ ಸುಮಾರು ಅರ್ಧದಷ್ಟು ವಿಸ್ತೀರ್ಣವನ್ನು ಹೊಂದಿರುವುದರಿಂದ ಈ ನಿಯಮಗಳಿಂದ ಅವುಗಳಿಗೆ ವಿಶೇಷ ಪ್ರಯೋಜನ ಲಭಿಸುವುದಾಗಿ ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande