ಡಿಜಿಲಾಕರ್; ನಾಗರಿಕರು, ಇಲಾಖೆಗಳ ನಡುವಿನ ನಂಬಿಕೆಯ ಕೊಂಡಿ : ಎಸ್. ಕೃಷ್ಣನ್
ನವದೆಹಲಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಡಿಜಿಲಾಕರ್ ಈಗ ದೇಶದ ಡಿಜಿಟಲ್ ನಂಬಿಕೆಯ ಹೊಸ ಕೊಂಡಿ ಆಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದರು. “ಡಿಜಿಲಾಕರ್ ನಾಗರಿಕರು, ಸಚಿವಾಲಯಗಳು ಮತ್ತು ಇಲಾಖೆಗಳ ನಡುವಿನ ನಂಬಿಕೆಯ ಪದ
Digi


ನವದೆಹಲಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಡಿಜಿಲಾಕರ್ ಈಗ ದೇಶದ ಡಿಜಿಟಲ್ ನಂಬಿಕೆಯ ಹೊಸ ಕೊಂಡಿ ಆಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದರು. “ಡಿಜಿಲಾಕರ್ ನಾಗರಿಕರು, ಸಚಿವಾಲಯಗಳು ಮತ್ತು ಇಲಾಖೆಗಳ ನಡುವಿನ ನಂಬಿಕೆಯ ಪದರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಸುರಕ್ಷಿತ, ಪರಸ್ಪರ ಸಂಪರ್ಕಿತ ಮತ್ತು ಜವಾಬ್ದಾರಿಯುತ ಡಿಜಿಟಲ್ ಆಡಳಿತವನ್ನು ಖಚಿತಪಡಿಸುತ್ತದೆ,” ಎಂದು ಅವರು ಹೇಳಿದರು.

ದೆಹಲಿಯ ಭಾರತ್ ಮಂಟಪದಲ್ಲಿ ನಡೆದ “ಡಿಜಿಲಾಕರ್: ಎಲ್ಲರಿಗೂ ಕಾಗದರಹಿತ ಪ್ರವೇಶವನ್ನು ಸಕ್ರಿಯಗೊಳಿಸುವುದು” ಎಂಬ ವಿಷಯದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಭಾರತದ ಡಿಜಿಟಲ್ ಪ್ರಯಾಣವು ಈಗ ಸಂಪರ್ಕದಿಂದ ಸಾಮರ್ಥ್ಯಕ್ಕೆ, ಸೇವಾ ವಿತರಣೆಯಿಂದ ಸ್ವಾವಲಂಬನೆಗೆ ಮತ್ತು ಈಗ ಡಿಜಿಟಲೀಕರಣದಿಂದ ನಂಬಿಕೆಗೆ ಚಲಿಸುತ್ತಿದೆ. ಪ್ರತಿಯೊಂದು ಡಿಜಿಟಲ್ ಸಂಪರ್ಕ ನಂಬಿಕೆಯಾಧಾರವಾಗಬೇಕು ಎಂದು ಕೃಷ್ಣನ್ ಹೇಳಿದರು.

ಈ ಸಮ್ಮೇಳನವನ್ನು ರಾಷ್ಟ್ರೀಯ ಇ-ಆಡಳಿತ ವಿಭಾಗ ಆಯೋಜಿಸಿತ್ತು. ಸಚಿವಾಲಯಗಳ, ರಾಜ್ಯ ಸರ್ಕಾರಗಳ ಹಾಗೂ ತಂತ್ರಜ್ಞಾನ, ಹಣಕಾಸು ಮತ್ತು ಶಿಕ್ಷಣ ಕ್ಷೇತ್ರದ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande