
ಬೆಂಗಳೂರು, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಸಾಹಿತ್ಯದಲ್ಲಿ ಮಹತ್ವದ ಕೃತಿಯಾಗಿರುವ ವಿ.ಆರ್. ಹನುಮಂತಯ್ಯರ “ಕುರುಬರ ಚರಿತ್ರೆ” ಪ್ರಕಟಣೆಯ ಶತಮಾನೋತ್ಸವದ ಅಂಗವಾಗಿ ಸ್ಮರಣೆ ಕಾರ್ಯಕ್ರಮವನ್ನು ನವೆಂಬರ್ 9ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ವಿಜಯನಗರದಲ್ಲಿರುವ ಕಾಸಿಯಾ ಉದ್ಯೋಗ ಭವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಹಾಲುಮತ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಹಾಗೂ ಶ್ರೀ ಕನಕದಾಸ ಆಧ್ಯಾತ್ಮ ಪ್ರತಿಷ್ಠಾನ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕನಕಗುರು ಪೀಠ ಹೊಸದುರ್ಗದ ಶ್ರೀ ಈಶ್ವರಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಸರ್ಕಾರದ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ. ರೇವಣ್ಣ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ|| ಪರಶಿವಮೂರ್ತಿ ವಹಿಸಲಿದ್ದು, ಆಶಯ ಭಾಷಣವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ|| ಚನ್ನಪ್ಪ ಕಟ್ಟಿ ನೀಡಲಿದ್ದಾರೆ.
ವಿ.ಆರ್. ಹನುಮಂತಯ್ಯರ ಸಾಹಿತ್ಯ ವಿಚಾರ ಸಂಕೀರ್ಣದಲ್ಲಿ ಡಾ|| ಎಫ್.ಟಿ. ಹಳ್ಳಿಕೇರಿ, ಡಾ|| ಗಂಗಾಧರ ಕೊಡ್ಲಿಯವರ, ಡಾ|| ಲಿಂಗದಹಳ್ಳಿ ಹಾಲಪ್ಪ, ಡಾ|| ಎನ್.ಬಿ. ವಿರೂಪಾಕ್ಷಿ ಹಾಗೂ ಗೋಣಿಬಸಪ್ಪ ಪಿ. ವಿಚಾರ ಮಂಡನೆ ಮಾಡಲಿದ್ದಾರೆ.
ತುಮಕೂರಿನ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಡಾ|| ಎಂ.ಆರ್. ಹುಲಿನಾಯ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa