
ಕೋಲಾರ, ೦೭ ನವಂಬರ್ (ಹಿ.ಸ) :
ಆ್ಯಂಕರ್ : ಸುವರ್ಣ ಮಹೋತ್ಸವ ಆಚರಿಸಿದರು ಗಂಡ ಹೆಂಡಂತಿಯರು ಪರಸ್ಪರ ಗೌರವಿಸುವುದಿಲ್ಲ. ಒಬ್ಬ ಮಹಿಳೆ ಈಗಲೂ ತನಗೆ ಇಷ್ಟವಾದ ಸೀರೆ ಖರೀದಿ ಮಾಡಲು ಗಂಡನ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಹೆಂಡತಿಯ ಗಳಿಕೆಯಲ್ಲೇ ಮೋಜು ಮಸ್ತಿ ಮಾಡುವ ಆಧುನಿಕ ಪುರುಷರಿದ್ದಾರೆ. ದುಡಿಯುವ ಮಹಿಳೆ ತನ್ನ ಗಳಿಕೆಯನ್ನು ಗಂಡನ ಕೈಗೆ ಕೊಡಬೇಕಾದ ಪರಿಸ್ಥಿತಿಯನ್ನು ಈಗಲೂ ಮಹಿಳೆಯರು ಎದುರಿಸುತ್ತಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಬೀದಿ ಬದಿಯಲ್ಲಿ ಹಣ್ಣು ಮಾರಾಟ ಮಾಡಿ ಸಂಜೆ ಮನೆಗೆ ತೆರಳಿದರೆ ಹೆಂಡತಿ ದುಡಿದು ತಂದ ಹಣವನ್ನು ಗಂಡ ಆದವನು ಕಿತ್ತುಕೊಂಡು ಮೋಜು ಮಸ್ತಿ ಮಾಡುವ ಸೋಮಾರಿ ಗಂಡಂದಿರು ಈಗಲು ಇದ್ದಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ನಿರಂಜನ ವಾನಳ್ಳಿ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆಯೋಜಿಸಿದ್ದ ಹಣಕಾಸು ಸೇರ್ಪಡೆ ಹಾಗು ಲಿಂಗ ಸಮಾನತೆಯ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಕಾಲಘಟ್ಟದಲ್ಲಿ ಮಹಿಳಾ ಹಣಕಾಸು ಸೇರ್ಪಡೆ ಹಾಗು ಲಿಂಗ ಸಮಾನತೆಯ ಸಮಾವೇಶ ನಡೆಯುತ್ತಿರುವುದು ಅತ್ಯಂತ ಸಕಾಲಿಕವಾಗಿದೆ. ಕೇಂದ್ರ ಸರ್ಕಾರ ಪಿ.ಎಂ ಉಷಾ ಯೋಜನೆಯನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿರುವುದು ಸಂತಸವಾಗಿದೆ. ಈ ಯೋಜನೆಯಲ್ಲಿ ಒಂಬತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಮಹಿಳಾ ಹಾಸ್ಟಲ್ ನಿರ್ಮಿಸಲಾಗುತ್ತಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಮೌಲ್ಯಮಾಪನದ ರಿಜಿಸ್ಟ್ರಾರ್ ಡಾ.ಲೋಕನಾಥ್ ಮಾತನಾಡಿ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜನಧನ್ ಯೋಜನೆ, ಮುದ್ರಾ ಯೋಜನೆ ,ಸ್ಟಾಂಡ್ ಅಪ್ ಯೋಜನೆ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಈ ಯೋಜನೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಮಹಿಳಾ ಸಮಾನತೆ ಸಾಧ್ಯ. ಸಂವಿಧಾನ ಸಮಾನ
ಅವಕಾಶಗಳನ್ನು ನೀಡಿದೆ. ಆದರೆ ಇಂದಿಗೂ ಮಹಿಳೆಯರಿಗೆ ಸಮಾನವಾದ ಅವಕಾಶಗಳು ದೊರೆಯುತ್ತಿಲ್ಲ. ವಿದ್ಯಾವಂತ ಹಾಗು ಸರ್ಕಾರಿ ಅಧಿಕಾರಿಗಳಾಗಿರುವ ಮಹಿಳೆಯರು ತಮ್ಮ ಗಂಡಂದಿರ ಸಮ್ಮತಿ ಇಲ್ಲದೆ ಸ್ವತಂತ್ರವಾಗಿ ನಿರ್ಧಾಗಳನ್ನು ತೆಗೆದುಕೊಳ್ಳುವುದಿಲ್ಲ. ಹಣಕಾಸು ಸೇರ್ಪಡೆ ಮತ್ತು ಲಿಂಗ ಸಮಾನತೆಯಿಂದ ಮಹಿಳೆಯರು ಆರ್ಥಿಕ ಸಬಲೀಕರಣ ಸಾಧ್ಯ.ಮಹಿಳೆಯರು ಪಾಲ್ಗೊಳ್ಳವುದಲ್ಲದೆ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವಾತಾವರಣ ಕಲ್ಪಿಸಬೇಕೆಂದು ಸಲಹೆ ಮಾಡಿದರು. ಹೈದರಾಬಾದ್‌ನ ಸಾರ್ವಜನಿಕ ಉದ್ಯಮಗಳ ಸಂಸ್ಥೆಯ ರಾಮಕೃಷ್ಣ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಎಂಬತ್ತುಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದೆ.ಗ್ರಾಮೀಣ ಮಹಳೆಯರಿಗೆ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಗ್ರಾಮೀಣ ಮಹಿಳೆಯರಿಗೆ ತರಬೇತಿ ಮತ್ತು ಅರಿವು ಅಗತ್ಯವೆಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ಪ್ರೊಫೆಸರ್ ಎಸ್.ಆರ್. ಕೇಶವ ಮಾತನಾಡಿ ಮಹಿಳೆಯರು ಜನಧನ್ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಇದರಿಂದ ಮಹಿಳೆಯರ ಕೈಯಲ್ಲಿ ಹಣ ಹರಿದಾಡುತ್ತಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಣಕಾಸು ಯೋಜನೆಗಳಲ್ಲಿ ಪಾಲ್ಗೊಳ್ಳ ಬೇಕು.ಅವರು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಕಲ್ಪಿಸಬೇಕು.ಜನಧನ್ ಯೋಜನೆಯಿಂದ ಮಹಿಳೆಯರು ಆರ್ಥಿಕ ಸಬಲೀಕರಣದತ್ತ ದಾಪುಗಾಲು ಹಾಕುತ್ತಿದ್ದಾರೆ.ಹಣಕಾಸು ಸೇರ್ಪಡೆ ಮತ್ತು ಪಾಲ್ಗೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಮುದ್ರಾ ಯೋಜನೆಯಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ದೇಶದಲ್ಲಿ ಒಂದುವರೆ ಕೋಟಿಗೂ ಹೆಚ್ಚು ಮಹಿಳೆಯರು ಲಕ್‌ಪತಿ ದೀದಿ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದಾಗಿ ಪ್ರತಿತಿಂಗಳು ಒಂದು ಲಕ್ಷ ರೂಪಾಯಿ ಹಣಗಳಿಕೆ ಮಾಡುತ್ತಿದ್ದು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು.
ಅಲೆನ್ ಕಾಲೇಜಿನ ಪ್ರೊಫೆಸರ್ ದಿವ್ಯಶ್ರೀ ಹೆಗಡೆ ಮಾತನಾಡಿ ಹಣಕಾಸು ಸೇರ್ಪಡೆ ಕೇವಲ ಮಹಿಳೆಯರ ಆರ್ಥಿಕ ಸೇರ್ಪಡೆಯ ಕಾರ್ಯಕ್ರಮವಲ್ಲ.ಅದು ಪುರುಷರ ಮನಸ್ಥಿಯನ್ನು ಬದಲಾಯಿಸಬೇಕು. ಮಹಿಳಾ ಸಬಲೀಕರಣದ ಕಾರ್ಯಕ್ರಮದಲ್ಲಿ ಪುರುಷರು ಸಹ ಸಮಾನವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.
ವಾಣಿಜ್ಯ ವಿಭಾಗದ ದೀನ್ ಡಾ.ಎಸ್.ಮುರಳಿಧರ್ ಮಾತನಾಡಿ ಸಮಾಜದ ವಿವಿದ ವರ್ಗಗಳು ಹಣಕಾಸು ಯೋಜನೆಗಳಲ್ಲಿ ಪಾಲ್ಗೊಳ್ಳಬೇಕು. ಹಣಕಾಸು ಯೋಜನೆಗಳಲ್ಲಿ ಮಹಿಳೆಯರು ಸೇರ್ಪಡೆಯಾಗಬೇಕು. ಹuಕಾಸು ಯೋಜನೆಗಳಲ್ಲಿ ಸೇರ್ಪಡೆಯಾಗಿ ಆರ್ಥಿಕವಾಗಿ ಸಬಲರಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು.ಈ ನಿಟ್ಟಿನಲ್ಲಿ ಹಣಕಾಸು ಸೇರ್ಪಡೆ ಮತ್ತು ಲಿಂಗ ಸಮಾನತೆಯ ರಾಷ್ಟ್ರೀಯ ಸಮಾವೇಶ ಹೊಸ ದಿಕ್ಷೂಚಿಯಾಗಲಿದೆ ಎಂದು
ತಿಳಿಸಿದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಾ.ಕುಮುದ ಉತ್ತರ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ವಸಂತ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಿತ್ರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಹಣಕಾಸು ಸೇರ್ಪಡೆ ಮತ್ತು ಲಿಂಗ ಸಮಾನತೆಯ ರಾಷ್ಟ್ರೀಯ ಸಮಾವೇಶವನ್ನು ವಿಶ್ವವಿದ್ಯಾಲಯದ ಉಪಕುಲಪತಿ ನಿರಂಜನ ವಾನಹಳ್ಳಿ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್