ಮಾಲೂರು ವಿಧಾನ ಸಭಾ ಕ್ಷೇತ್ರದ ಮತಗಳ ಮರು ಎಣಿಕೆಗೆ ಸಿದ್ದತೆ
ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳ ಮರು ಎಣಿಕೆಗೆ ಸಿದ್ದತೆ
ಚಿತ್ರ. ಕೆ.ವೈ.ನಂಜೆ ಗೌಡ ಹಾಗು ಮಂಜುನಾಥ ಗೌಡ


ಕೋಲಾರ, ೦೭ ನವಂಬರ್ (ಹಿ.ಸ):

ಆ್ಯಂಕರ್ : ಸುಪ್ರೀಮ್ ಕೋರ್ಟ್ ನಿರ್ದೇಶನದ ಮೇರೆಗೆ ಕೋಲಾರ ಜಿಲ್ಲೆಯ ಮಾಲೂರು ವಿಧಾನ ಸಭಾ ಕ್ಷೇತ್ರದ ಮತಗಳ ಮರು ಎಣಿಕೆ ನವಂಬರ್ ೧೧ ರಂದು ಕೋಲಾರದ ತೋಟಗಾರಿಕಾ ಕಾಲೇಜಿನಲ್ಲಿ ನಡೆಯಲಿದೆ.

ಕೋಲಾರ ಉಪ ವಿಭಾಗದ ಸಹಾಯಕ ಕಮೀಷನರ್ ಡಾ.ಮೈತ್ರಿಯವರನ್ನು ಮತಗಳ ಎಣಿಕೆಗೆ ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.ಈಗಾಗಲೇ ಮತಗಳ ಎಣಿಕೆಗೆ ಸಿದ್ದತೆ ನಡೆದಿದೆ.

ಸಹಾಯಕ ಚುನಾವಣಾ ಆಧಿಕಾರಿಯನ್ನಾಗಿ ಶ್ರೀನಿವಾಸಪುರ ತಾಶೀಲ್ದಾರ್ ಹಾಗು ಇತರ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಮತಗಳ ಎಣಿಕೆಗೆ ಅಧಿಕಾರಿಗಳು ಹಾಗು ಇತರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿಯವರು ಈಗಾಗಲೇ ಮತಗಳ ಮರು ಎಣಿಕೆಯ ಬಗ್ಗೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ.

ಕಳೆದ ೨೦೨೩ ರಂದು ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇ ಗೌಡರು ಕೇವಲ ಅಲ್ಪ ೨೪೮ ಮತಗಳ ಅಂತರದಿಂದ ಆಯ್ಕೆಯಾಗಿದ್ದರು.ಮತಗಳ ಎಣಿಕೆಯಲ್ಲಿ ಲೋಪಗಳಾಗಿದ್ದು ಮರು ಎಣಿಕೆ ಮಾಡುವಂತೆ ಪರಾಜಿತ ಬಿ.ಜೆ.ಪಿ ಅಭ್ಯರ್ಥಿ ಮಂಜುನಾಥ ಗೌಡರು ಆಕ್ಷೇಪ ವ್ಯಕ್ತಪಡಿಸಿ ಮರು ಎಣಿಕೆ ನಡೆಸಬೇಕೆಂದು ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದ್ದರು.

ಆದರೆ ಅಂದಿನ ಚುನಾವಣಾ ಅಧಿಕಾರಿ ಜಿಲ್ಲಾ ತೋಟಗಾರಿಕಾ ಅಧಿಕಾರಿ ಕುಮಾರ ಸ್ವಾಮಿಯವರು ಮಂಜುನಾಥ ಗೌಡರ ಮವಿಯನ್ನು ತಿರಸ್ಕರಿದ್ದರು.

ಮಂಜುನಾಥ ಗೌಡರು ಮರು ಎಣಿಕೆ ಕೋರಿ ನೀಡಲಾಗಿದ್ದ ಮನವಿಯನ್ನು ತಿರಸ್ಕರಿಸಿದ ಚುನಾವಣಾ ಅಧಿಕಾರಿ ಮೂರು ದಿನಗಳ ನಂತರ ಹಿಂಬರಹ ನೀಡಿದ್ದರು.

ಮತಗಳ ಎಣಿಕೆ ಪ್ರಗತಿಯಲ್ಲಿದ್ದಾಗ ಕಾಂಗ್ರೆಸ್ ಸ್ಪಷ್ಡ ಬಹುಮತ ಪಡೆಯುವ ಚಿತ್ರ ಹೊರಹೊಮ್ಮಿತ್ತು. ಇದರಿಂದ ಪ್ರಭಾವಕ್ಕೆ ಮಣಿದ ಚುನಾವಣಾ ಅಧಿಕಾರಿ ಮರು ಎಣಿಕೆಗೆ ನಿರಾಕರಿಸಿದ್ದರು.

ಇದರಿಂದ ಭಾದಿತರಾದ ಪರಾಜಿತ ಅಭ್ಯರ್ಥಿ ಮಂಜುನಾಥ ಗೌಡರು ನಂಜೇ ಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿ ಮತಗಳ ಮರು ಎಣಿಕೆ ನಡೆಸುವಂತೆ ಕೋರಿ ರಾಜ್ಯ ಹೈಕೋರ್ಟ್‌ಗೆ ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್ ೧೨೩ (೭) ೧೯೫೧ ರ ಪ್ರಕಾರ ಚುನಾವಣಾ ಅರ್ಜಿ ಸಲ್ಲಿಸಿದ್ದರು.

ಮತಗಳ ಎಣಿಕೆಯ ಸಂದರ್ಭದಲ್ಲಿ ಚುನಾವಣಾ ಏಜೆಂಟರ ಸಹಿಯನ್ನು ಚುನಾವಣಾ ಅಧಿಕಾರಿ ಪಡೆದಿಲ್ಲ. ಚುನಾವಣಾ ಅಧಿಕಾರಿಯ ನಡವಳಿಕೆ ಸಂಶಯಾಸ್ಪದ ಆಗಿದೆ. ಇಡೀ ಮತದಾನದ ಪ್ರಕ್ರಿಯನ್ನು ಚಿತ್ರೀಕರಿಸಿದ ಹಾರ್ಡ್ ನಾಪತ್ತೆಯಾಗಿದೆ. ಸಿ.ಸಿ. ಟಿ.ವಿ ಕ್ಯಾಮರಾ ದೃಶ್ಯಾವಳಿಯ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ. ಮತಗಳ ಎಣಿಕೆ ಪಾರದರ್ಶಕವಾಗಿ ನಡೆದಿಲ್ಲ.ಅಕ್ರಮಗಳು ನಡೆದಿವೆ .ಆದ್ದರಿಂದ ಮತಗಳ ಮರು ಎಣಿಕೆ ನಡೆಯ ಬೇಕೆಂದು ಕೋರಿ ಮಂಜುನಾಥ ಗೌಡ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಆರಂಭಿಸಿದ ಹೈಕೋರ್ಟ್ ಸಿಸಿ ಕ್ಯಾಮರಾ ದೃಶ್ಯಾವಳಿ ಇರುವ ಹಾರ್ಡ್ ಡಿಸ್ಕ್ ಹಾಜರು ಪಡಿಸುವಂತೆ ರಾಜ್ಯ ಹೈಕೋರ್ಟ್ ಕೋಲಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಆದರೆ ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಸಹ ಕೋಲಾರ ಜಿಲ್ಲಾಧಿಕಾರಿಗಳು ಸಿ.ಸಿ.ಟಿ.ವಿ ಸೇವೆ ಸಲ್ಲಸಿದ್ದ ಬೆಂಗಳೂರಿನ ಕಂಪನಿ ಹಾರ್ಡ್ ಡಿಸ್ಕ್ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.ಇದರಿಂದ ಅಸಮಾನಗೊಂಡ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿ ಹಾರ್ಡ್ ಡಿಸ್ಕ್ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ನಿರ್ದೇಶನ ನೀಡಿತ್ತು.

ಆಯೋಗ ಸಹ ಹಾರ್ಡ್ ಡಿಸ್ಕ್ ಲಭ್ಯವಿಲ್ಲವೆಂದು ನ್ಯಾಯಾಲಯದ ಮುಂದೆ ಪ್ರಮಾಣ ಪತ್ರ ಸಲ್ಲಿಸಿತ್ತು. ರಾಜ್ಯ ಹೈಕೋರ್ಟ್ ಅರ್ಜಿದಾರರು ಮತ್ತು ಪ್ರತಿವಾದಿ ನಂಜೇ ಗೌಡರ ಸಾಕ್ಷವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಅಂತ್ಯಗೊಳಿಸಿತು.

ಹೈಕೋರ್ಟ್ ನ್ಯಾಯಮೂರ್ತಿ ದೇವದಾಸ್ ಕಳೆದ ಸೆಪ್ಟಂಬರ್ ೧೬ರರಂದು ಆದೇಶ ಪ್ರಕಟಿಸಿ ಕಾಂಗ್ರೆಸ್ ಅಭ್ಯರ್ಥಿ ನಂಜೇ ಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿ ಮತಗಳ ಮರು ಎಣಿಕೆಗೆ ಆದೇಶ ಮಾಡಿತು.

ಒಂದು ತಿಂಗಳ ಕಾಲಾವಕಾಶ ನೀಡಿದ ಹೈಕೋರ್ಟ್ ಶಾಸಕ ಸ್ಥಾನದಿಂದ ನಂಜೇ ಗೌಡರನ್ನು ಅಸಿಂದುಗೊಳಿಸಿದ ಆದೇಶವನ್ನು ಹೈಕೋರ್ಟ್ ಅಮಾನತ್ತುಗೊಳಿಸಿ ಸುಪ್ರೀಮ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತು.

ನಂಜೇ ಗೌಡರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ ಸುಪ್ರೀಮ್ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ

ನೀಡಿತು.

ಆದರೆ ಮತಗಳ ಮರು ಎಣಿಕೆ ನಡೆಸಿ ಫಲಿತಾಂಶವನ್ನು ಪ್ರಕಟಿಸಿ ಬಾರದು. ಬದಲಾಗಿ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಮ್ ಕೋರ್ಟ್ ಆದೇಶ ಮಾಡಿದೆ. ಸುಪ್ರೀಮ್ ಕೋರ್ಟ್ ಆದೇಶದ ಪ್ರಕಾರ ನವಂಬರ್ ೧೧ ರಂದು ಮತಗಳ ಎಣಿಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಲಿದೆ.

ಈ ಬೆಳವಣಿಗೆ ತೀವ್ರ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಿದೆ.

ಚಿತ್ರಕೆ.ವೈ.ನಂಜೆ ಗೌಡ ಹಾಗು ಮಂಜುನಾಥ ಗೌಡ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande