
ಕೋಲಾರ, 0೪ ನವಂಬರ್ (ಹಿ.ಸ) :
ಆ್ಯಂಕರ್ : ಕೋರ್ಟ್‌ಗೆ ಬರುವ ಕಕ್ಷಿದಾರರು ನ್ಯಾಯ ನಿರೀಕ್ಷಿಸುತ್ತಾರೆ.ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ನಿರೀಕ್ಷೆ ಮಾಡುತ್ತಾರೆ.ಕಕ್ಷಿದಾರರು ವಿದ್ಯಾವಂತರಾಗಿದ್ದು ತಮ್ಮ ಹಕ್ಕಗಳಿಗಾಗಿ ನ್ಯಾಯಾಲಯದ ಕದತಟ್ಟುತ್ತಾರೆ. ವಕೀಲರು ಶೀಘ್ರ ನ್ಯಾಯ ಕೊಡಿಸಲು ಕೇವಲ ನ್ಯಾಯಾಲಕ್ಕೆ ಹಾಜರಾಗಿ ವಾದಮಂಡನೆ ಮಾಡಿದರೆ ಸಾಲದು.ನ್ಯಾಧೀಶರನ್ನು ಮನವರಿಕೆ ಮಾಡುವ ಮಾಹಿತಿ ಮತ್ತು ತಂತ್ರಗಳನ್ನು ಕರಗv ಮಾಡಿಕೊಳ್ಳ ಬೇಕು.ಮುಂದೆ ಕೃತಕ ಬುಧ್ದಿಮತೆ ನ್ಯಾಯಂಗಕ್ಕೂ ಬರಲಿದೆ.ವಕೀಲರು ವೃತ್ತಿ ಜೀವನದಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗುವುವಂತೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಲಹೆ ಮಾಡಿದರು.
ಕೋಲಾರದ ವಕೀಲರ ಸಂಘದ ಆಶ್ರಯದಲ್ಲಿ ಯುವ ವಕೀಲರ ಮುಂದೆ ಇರುವ ಸವಾಲಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.ಶೀಘ್ರ ನ್ಯಾಯ ಪ್ರದಾನಕ್ಕಾಗಿ ಮಧ್ಯಸ್ಥಿಕೆ, ಲೋಕ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ನಿಮ್ಮನ್ನು ನಂಬಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸದಿದ್ದರೆ ಬೇರೊಬ್ಬ ವಕೀಲರನ್ನು ಹುಡುಕಿಕೊಳ್ಳುತ್ತಾರೆ ಎಂಬುದಕ್ಕೆ ಬೆಂಗಳೂರಿನ ರಾಮಸುಬ್ಬಯ್ಯನವರ ಕತೆಯನ್ನು ನಾಗಮೋಹನ್ ದಾಸ್ ವಿವರಿಸಿದರು.
ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಜಯನಗರದಿಂದ ರಾಮು ಸುಬ್ಬು ಎಂಬ ವಕೀಲರು ಸೈಕಲ್‌ನಲ್ಲಿ ಸಿಟಿಕೋರ್ಟ್‌ಗೆ ಬಂದು ಗೌನ್ ಹಾಕಿಕೊಂಡು ಹೈಕೋರ್ಟ್‌ಗೆ ಹೋಗುತ್ತಿದದ್ದರು. ಅವರನ್ನು ಹುಡುಕಿಕೊಂಡು ಕೋಲಾರದ ಕಕ್ಷಿದಾರರೊಬ್ಬರು ಸಿಟಿ ಸಿವಿಲ್ ಕೋರ್ಟ್‌ಗೆ ಹೋದರು.ಆ ವೇಳೆಗೆ ರಾಮು ಸುಬ್ಬುರವರು ಹೈಕೋರ್ಟ್‌ಗೆ ಹೋಗಿದ್ದರು. ಅವರನ್ನು ಹುಡುಕಿಕೊಂಡು ಕಕ್ಷಿದಾರರು ಹೈಕೋರ್ಟ್‌ಗೆ ಹೋದರು. ಆ ವೇಳೆಗೆ ರಾಮು ಸುಬ್ಬು ಸಿಟಿ ಕೋರ್ಟ್‌ಗೆ ವಾಪಸ್ ಆದರು. ಕಡೆಗೂ ರಾಮುಸುಬ್ಬುರವರನ್ನು ಕಕ್ಷಿದಾರರು ಬೇಟಿ ಆದರು.ಯಾವುದೋ ದೊಡ್ಡ ಕೇಸ್ ಇರಬೇಕೆಂದು ಜಯನಗರದ ಮನೆಗೆ ಬರುವಂತೆ ಕಕ್ಷಿದಾರರಿಗೆ ರಾಮು ಸುಬ್ಬು ಹೇಳಿದರಂತೆ. ಏನು ನಿನ್ನ ಕೇಸ್ ಎಂದು ಕೇಳಿದರು. ಸಾರ್ ನನ್ನ ಸಂಬಂಧಿಗಳು ಜಮೀನಿನ ಬಗ್ಗೆ ಕೇಸ್ ಹಾಕಿ ಇಂಜೆಕ್ಷನ್ ಆರ್ಡರ್ ತೆಗೆದುಕೊಂಡಿದ್ದಾರೆ. ಕೆಲವರು ಪಟ್ಟಾಭಿರಾಮನ್‌ಗೆ ಕೇಸ್ ನೀಡಿ ಎನ್ನುತ್ತಿದ್ದಾರೆ.ಇನ್ನು ಕೆಲವರು ಸೀತಪ್ಪನವರಿಗೆ ಕೊಡಿ ಎನ್ನುತಿದ್ದಾರೆ. ಯಾರಿಗೆ ಕೊಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ನೀವು ಕೋಲಾರಕ್ಕೆ ಬಂದು ಕೇಸ್ ನಡೆಸುವಂತೆ ಮನವಿ ಮಾಡಿದರು.
ನಾನು ಕೋಲಾರಕ್ಕೆ ಬಂದು ಕೇಸ್ ನಡೆಸುತ್ತೇನೇ ಎಂದು ರಾಮುಸುಬ್ಬುರವರು
ಒಪ್ಪಿದರು.ವಕೀಲರಾದವರು ಕಕ್ಷಿದಾರರ ನಂಬಿಕೆ ಗಳಿಸಬೇಕೆಂದು ನಾಗಮೋಹನ್ ದಾಸ್ ಸಲಹೆ ಮಾಡಿದರು.
ನ್ಯಾಯಾಲಕ್ಕೆ ಹೋಗಿ ಕೇಸ್‌ಗಳನ್ನು ನಡೆಸಿದರೆ ಸಾಲದು.ನ್ಯಾಧೀಶರನ್ನು ಮನವೊಲಿಸುವ ತಂತ್ರಗಾರಿಕೆಯನ್ನು ವಕೀಲರು ಕರಗತ ಮಾಡಿಕೊಳ್ಳಬೇಕು.ಮಂಗಳೂರಿನ ಕಕ್ಷಿದಾರರೊಬ್ಬರು ನನ್ನನ್ನು ಬೇಟಿ ಮಾಡಿ ಬಾಡಿಗೆ ಮನೆಯಿಂದ ಹೊರಹಾಕಿ ನ್ಯಾಯಾಲಯ ಆದೇಶ ಮಾಡಿತ್ತು. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕೋರಿದರು.
ಆದರೆ ಕೇಸ್‌ನಲ್ಲಿ ಯಾವುದೇ ಅರ್ಹತೆ ಇರಲಿಲ್ಲ. ಹೈಕೋರ್ಟ್ ಮುಂದೆ ರಿವಿಜನ್ ಪಿಟೀಷನ್ ಹಾಕಲಾಯಿತು. ನಮ್ಮ ಕೇಸ್‌ನಲ್ಲಿ ಏನು ಮೆರಿಟ್ಸ್ ಇಲ್ಲ ಸ್ವಾಮಿ .ಆದರೆ ಅರ್ಜಿದಾರರು ವಿಧವೆ ಆಗಿದ್ದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದಾರೆ.ಸ್ವಲ್ಪ ಕಾಲಾವಕಾಶ ಕೊಡಿ ಸ್ವಾಮಿ ಎಂದು ಮನವಿ ಮಾಡಿದೆ. ಕೇಸ್ ಅಡ್ಮಿಟ್ ಮಾಡಿ ಸ್ಟೇ ಕೊಟ್ಟರು. ಮೂರು ವರ್ಷಗಳ ಕಾಲ ಕೇಸ್ ನಡೆಸಲಾಯಿತು. ಮೂರು ವರ್ಷಗಳನಂತರ ಕೇಸ್ ವಜಾ ಮಾಡಲಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಯಶಸ್ವಿ ವಕೀಲರಾಗಲು ಕನ್ನಡ,ಇಂಗ್ಲೀಷ್ ಹಾಗು ಕಂಪ್ಯೂಟರ್ ಪರಿಣತಿ ಅಗತ್ಯವಿದೆ. ವಕೀಲರಾದವರು ಪ್ರಾಮಾಣಿಕತೆ,ಬದ್ದತೆ,ದೈರ್ಯ ಹೊಂದಿರಬೇಕು. ನ್ಯಾಯಾಲಯಕ್ಕೆ ತೆರಳಿದ ಕಕ್ಷಿದಾರರೊಬ್ಬರು ಸ್ವಾಮಿ ಲಾಯರ್‌ನನ್ನು ನೇಮಕ ಮಾಡಬೇಕು ಎರಡು ತಿಂಗಳು ಕಾಲಾವಕಾಶ ಕೊಡಿ ಎಂದು ವಕೀಲರನ್ನು ಕೇಳಿಕೊಂಡರು.
ಎರಡು ತಿಂಗಳು ಯಾಕೆ ಅಲ್ಲಿ ಮರದ ಕೆಳಗೆ ಕುಳಿತು ಬೀಡಿ ಸೇದುತ್ತಿರುವ ವಕೀಲರಿದ್ದಾರೆ.ಅವರಿಗೆ ಹತ್ತು ರೂಪಾಯಿ ಕೊಡಿ ಕೇಸ್ ನಡೆಸುತ್ತಾರೆ ಎಂದು ನ್ಯಾಯಾಧಿಶರು ಸಲಹೆ ಮಾಡಿದರು.ಸೀದ ಕಕ್ಷಿದಾರ ವಕೀಲರ ಬಳಿ ಹೋಗಿ ಹತ್ತು ರೂಪಾಯಿ ಕೊಡುತ್ತೇನೆ .ಕೇಸ್ ನಡೆಸಿ.ನ್ಯಾಯಾಧೀಶರು ನಿಮ್ಮ ಬಳಿ ಕಳುಹಿಸಿದರು. ಹೋಗಿ ಆ ನ್ಯಾಯಾಧೀಶರಿಗೆ ಹೋಗಿ ಹೇಳಿ ಹತ್ತು ರೂಪಾಯಿ ತೆಗೆದಕೊಳ್ಳುತ್ತಿದ್ದ ಲಾಯರ್ ನ್ಯಾಯಾಧೀಶರಾಗಿದ್ದಾರೆ ಎಂದು ವಕೀಲರು ತಿರುಗೇಟು ನೀಡಿದರಂತೆ. ನಿಮಗೆ ವಕೀಲ ವೃತ್ತಿಯ ಆಳವಾದ ಜ್ನಾನ ಇಲ್ಲದಿದ್ದರೆ ಅಪಹಾಸಕ್ಕೆ ಈಡು ಆಗುತ್ತೀರಿ ಎಂದು ತಿಳಿಸಿದರು. ಕೃತಕ ಬುಧ್ಧಿಮತ್ತೆ ನ್ಯಾಯಾಂಗವನ್ನು ಆವರಿಸತ್ತಿದೆ. ಮೊದಲೆಲ್ಲ ಒಂದು ಸೈಟೇಷನ್‌ಗಾಗಿ ಹಲವಾರು ಪುಸ್ತಕಗಳನ್ನು ತಿರುವಿ ಹಾಕಬೇಕಾಗಿತ್ತು. ಕ್ಷಣ ಮಾತ್ರದಲ್ಲಿ ಈಗ ಮಾಹಿತಿ ದೊರೆಯತ್ತದೆ. ಅಷ್ಡೆ ಅಲ್ಲ ಪಾಟೀ ಸವಾಲು ಮಾಡಲು ಕೃತಕ ಬುಧ್ದಿಮತ್ತೆಯ ಮೂಲಕ ತಯಾರು ಆಗಬಹುದು.ಆದರೆ ಕೃತಕ ಬುಧ್ಧಿಮತ್ತೆಗೆ ಮಾನವೀಯತೆ ಇಲ್ಲ.ಮುಂದೆ ಒಂದು ದಿನ ರೋಬೋರ್ಟ್‌ಗಳು ಬರಲಿವೆ.ವಕೀಲರ ಬದಲು ರೋಬೋರ್ಟ್‌ಗಳು ನ್ಯಾಯಾಲಯದ ಮುಂದೆ ಹಾಜರಾಗಲಿವೆ.ವಕೀಲರು ಬದಲಾದ ಕಾಲಘಟ್ಟದಲ್ಲಿ ವಕೀಲರು ನಾವಿನ್ಯತೆ ಮತ್ತು ವಕೀಲ ವೃತ್ತಿಯಲ್ಲಿ ಮುಂದುವರೆಯಲು ಅಧ್ಯಯನ ಅಗತ್ಯವಿದೆ.ಕಾಲೇಜಿನಲ್ಲಿ ವ್ಯಾಸಂಗ ಮಾಡುವುದಲ್ಲದೆ ಪ್ರತಿನಿತ್ಯ ಹೊಸ ವಿಷಯಗಳನ್ನು ತಿಳಿದುಕೊಳ್ಳ ಬೇಕೆಂದು ಸಲಹೆ ಮಾಡಿದರು.
ಚಿತ್ರ.; ಕೋಲಾರದ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಯುವ ವಕೀಲರ ಮುಂದೆ ಇರುವ ಸವಾಲುಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್