
ಗದಗ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಕುಟುಂಬ ಯೋಜನೆಯಲ್ಲಿ ಪುರುಷರ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಯು ಅತಿ ಸುರಕ್ಷಿತ ಸರಳ ಮತ್ತು ಪರಿಣಾಮಕಾರಿ ಶಾಶ್ವತ ಗರ್ಭ ನಿರೋಧಕವೆಂದು ಸಾಬೀತಾಗಿದ್ದು ಇಲಾಖೆಯು ಗುರ್ತಿಸಲ್ಪಡುತ್ತಿರುವ ಆರ್ಹ ಪುರುಷರು ಪುರುಷ ನಿರೋಧ ಶಸ್ತ್ರ ಚಿಕಿತ್ಸೆಗೆ ಮುಂದಾಗ ಬೇಕೆಂದು ಗದಗ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್ ಗಡಾದ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಎನ್.ಎಸ್.ವಿ ಪಾಕ್ಷಿಕ 2025ರ ಸಮಾರಂಭದಲ್ಲಿ ಮಾತನಾಡಿದರು.
ನಂತರ ಸಾರ್ವಜನಿಕರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಎನ್ ಎಸ್ ವಿ ಅಂದರೆ ಪುರುಷ ಸಂತಾನ ಹರಣ ಶಸ್ತçಚಿಕಿತ್ಸೆಯ ಬಗೆಗೆ ಇರುವ ತಪುö್ಪ ಗ್ರಹಿಕೆಗಳನ್ನು ಪರಿಹರಿಸುತ್ತಾ ಕುಟುಂಬ ಯೋಜನೆಯಲ್ಲಿ ಸಮಾನ ಭಾಗವಹಿಸುವಿಕೆಯ ಮೇಲೆ ಕೇಂದ್ರೀಕರಿಸುವುದು ಅವಶ್ಯವಿರುತ್ತದೆ ಎಂದರು.
ಬೂದೇಶ್ ಸಿದ್ದನಗೌಡರ ಸ್ವಾಗತಿಸಿದರು ಗುರುರಾಜ, ಕೋಟ್ಯಾಳ ನಿರೂಪಿಸಿದರು, ಪುಷ್ಪಾ ಮಡಿವಾಳರ. ವಂದಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಎಸ್ ಎಸ್ ಕಟ್ಟಿಮನಿ, ಶೈಲಾ ಮಳೇಕರ ವಿವಿಧ ತಾಲೂಕಿನ ಪ್ರಾಥಮಿಕ ಆರೋಗ್ಯ ಸುರಕ್ಷತೆ ಅಧಿಕಾರಿಗಳು ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP