
ಗದಗ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಪಂಚಾಕ್ಷರಿ ವಲಯದ ಪಂಚಾಕ್ಷರಿ ನಗರದಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ 78 ನೇ ಹುಟ್ಟುಹಬ್ಬದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.
ಈ ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಉಮಾ ಅವರು ಸದಸ್ಯರಿಗೆ ಪೂಜ್ಯರು ಮಾಡುವ ಕಾರ್ಯಕ್ರಮಗಳ ಬಗ್ಗೆ ಮತ್ತು ಕುಟುಂಬದಲ್ಲಿ ಗುರು-ಹಿರಿಯರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವುದರ ಬಗ್ಗೆ ಮತ್ತು ಪೂಜ್ಯರು ಯೋಜಿಸಿರುವ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುವುದರ ಮೂಲಕ ಮಾಹಿತಿ ಮಾರ್ಗದರ್ಶನ ನೀಡಿದರು.
ಡಾ.ಸುವರ್ಣ ನಿಡುಗುಂದಿ ಅವರು ಸದಸ್ಯರಿಗೆ ಆರೋಗ್ಯದ ಬಗ್ಗೆ ಗಮನಹರಿಸುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಡಾ. ಮಹಾಂತೇಶ ಚಪ್ಪನಮಠ ಅವರು ನೇತ್ರ ಎಷ್ಟು ಮುಖ್ಯ ಅದನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಅದರ ಸಂರಕ್ಷಣೆಯಲ್ಲಿ ನಮ್ಮ ಆಹಾರ ಪದ್ಧತಿ ಹೇಗೆ ಇರಬೇಕು ಎಂದು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಸುಲ್ತಾನಪುರ ಹಾಗೂ ಕಾರ್ಯದರ್ಶಿ ಸುರೇಶ ಕುಂಬಾ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪೂಜ್ಯರ ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇರುತ್ತದೆ. ಪೂಜ್ಯರು ಮಾಡುವ ಕಾರ್ಯಕ್ರಮವನ್ನು ತುಂಬಾ ದಿನದಿಂದ ನಾವು ನೋಡುತ್ತಾ ಬಂದಿರುತ್ತೇವೆ ಶಿಸ್ತು ಮತ್ತು ಅಚ್ಚುಕಟ್ಟಿನಿಂದ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೆ ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈಶ್ವರ ದೇವಸ್ಥಾನದ ಪ್ರಸ್ತುತ ಕಮಿಟಿಯ ಸದಸ್ಯರಾದ ಮಲ್ಲಿಕಾರ್ಜುನ ಸಂತೋಜಿ ವರು ಮಾತನಾಡಿ, ವ್ಯಕ್ತಪಡಿಸಿದರು. ಸರ್ಕಾರ ಮಾಡಲಾರದ ಕೆಲಸಗಳನ್ನು ಇವತ್ತು ಧರ್ಮಸ್ಥಳ ಗ್ರಾಮಾಂತರ ಯೋಜನೆ ಮಾಡುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 99 ಜನರಿಗೆ ಉಚಿತ ನೇತ್ರ ತಪಾಸಣೆ ಮಾಡಿ ರೋಟರಿ ಕ್ಲಬ್ ನವರು ಕೆಲವು ಸದಸ್ಯರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಾಣಿಶ್ರೀ ಸಲ್ಲಪಟ್ಟಿ ಅವರು ವಹಿಸಿದ್ದರು. ವಲಯದ ಮೇಲ್ವಿಚಾರಕರು ಶಿಲ್ಪಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಗಂಗಮ್ಮ ಹಾಗೂ ಸೇವಾ ಪ್ರತಿನಿಧಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP