ಐಎಸ್ಐ ಬೆಂಬಲಿತರಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ : ನಾಲ್ವರ ಬಂಧನ
ನವದೆಹಲಿ, 22 ನವೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿ ಪೊಲೀಸ್ ಅಪರಾಧ ವಿಭಾಗವು ಪಾಕಿಸ್ತಾನ ಐಎಸ್‌ಐ ಬೆಂಬಲಿತ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿ ನಾಲ್ವರನ್ನು ಬಂಧಿಸಿದೆ. ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ತಲುಪುತ್ತಿದ್ದ 10 ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ಗಳು ಹಾ
Isi


ನವದೆಹಲಿ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿ ಪೊಲೀಸ್ ಅಪರಾಧ ವಿಭಾಗವು ಪಾಕಿಸ್ತಾನ ಐಎಸ್‌ಐ ಬೆಂಬಲಿತ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿ ನಾಲ್ವರನ್ನು ಬಂಧಿಸಿದೆ. ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ತಲುಪುತ್ತಿದ್ದ 10 ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ಗಳು ಹಾಗೂ 92 ಕಾರ್ಟ್ರಿಡ್ಜಗಳನ್ನು ವಶಪಡಿಸಿಕೊಳ್ಳಲಾಗಿದೆ.

ರೋಹಿಣಿ ಸೆಕ್ಟರ್–28ರಲ್ಲಿ ಮಣಿದೀಪ್ ಸಿಂಗ್ ಮತ್ತು ದಲ್ವಿಂದರ್ ಕುಮಾರ್ ಬಂಧಿತರಾಗಿದ್ದು, ಕಾರಿನ ಸ್ಪೀಕರ್ ಬಾಕ್ಸ್‌ನಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು. ಅವರ ಮಾಹಿತಿಯ ಮೇರೆಗೆ ರೋಹನ್ ತೋಮರ್ ಮತ್ತು ಅಜಯ್ ಅಲಿಯಾಸ್ ಮೋನು ಬಂಧಿತರಾಗಿದ್ದಾರೆ.

ತನಿಖೆಯಲ್ಲಿ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ಡ್ರೋನ್ ಮೂಲಕ ಜಿಪಿಎಸ್ ಸ್ಥಳಗಳಿಗೆ ಇಳಿಸಲ್ಪಡುತ್ತಿದ್ದವು, ಕಾರ್ಬನ್ ಪೇಪರ್‌ನಲ್ಲಿ ಸುತ್ತು ಹಾಕಿ ಪತ್ತೆ ತಪ್ಪಿಸಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ. ಈ ಜಾಲವನ್ನು ಅಮೆರಿಕದಲ್ಲಿರುವ ಸೋನು ಖತ್ರಿ ನಿರ್ವಹಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande