ದೆಹಲಿಯಲ್ಲಿ ತೀವ್ರ ಹದಗೆಟ್ಟ ವಾಯು ಗುಣಮಟ್ಟ
ನವದೆಹಲಿ, 22 ನವೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿ- ಎನ್ ಸಿಆರ್ ನಲ್ಲಿ ವಾಯು ಮಾಲಿನ್ಯ ತೀವ್ರ ಕಳಪೆಯಾಗಿದ್ದು, ಅನೇಕ ಪ್ರದೇಶಗಳಲ್ಲಿ AQI 400 ಕ್ಕಿಂತ ಹೆಚ್ಚು ದಾಖಲಾಗಿದೆ. ಪರಿಸ್ಥಿತಿ ಗಂಭೀರ ಹಂತ ತಲುಪುತ್ತಿರುವ ಹಿನ್ನೆಲೆಯಲ್ಲಿ, ವಾಯು ಗುಣಮಟ್ಟ ನಿರ್ವಹಣಾ ಆಯೋಗ GRAP ಹಂತ–3 ರ ನಿರ್ಬಂಧಗಳನ್
Air pollution


ನವದೆಹಲಿ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿ- ಎನ್ ಸಿಆರ್ ನಲ್ಲಿ ವಾಯು ಮಾಲಿನ್ಯ ತೀವ್ರ ಕಳಪೆಯಾಗಿದ್ದು, ಅನೇಕ ಪ್ರದೇಶಗಳಲ್ಲಿ AQI 400 ಕ್ಕಿಂತ ಹೆಚ್ಚು ದಾಖಲಾಗಿದೆ. ಪರಿಸ್ಥಿತಿ ಗಂಭೀರ ಹಂತ ತಲುಪುತ್ತಿರುವ ಹಿನ್ನೆಲೆಯಲ್ಲಿ, ವಾಯು ಗುಣಮಟ್ಟ ನಿರ್ವಹಣಾ ಆಯೋಗ GRAP ಹಂತ–3 ರ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆದೇಶಿಸಿದೆ.

CAQM ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಂತೆ, GRAP–4 ನಿಂದ ಕೆಲವು ತುರ್ತು ಕ್ರಮಗಳನ್ನು GRAP–3 ಗೆ ಸೇರಿಸಲಾಗಿದೆ. ಇದರಲ್ಲಿ ಸರ್ಕಾರಿ ಹಾಗೂ ಕೇಂದ್ರ ನೌಕರರಲ್ಲಿ 50% ಜನರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಖಾಸಗಿ ಕಂಪನಿಗಳಿಗೆ ಸಹ ಇದೇ ರೀತಿಯ ಕ್ರಮಗಳು ಅನುಸರಿಸುವಂತೆ ಸಲಹೆ ನೀಡಲಾಗಿದೆ.

GRAP–4 ಹಂತವನ್ನು AQI 451 ದಾಟಿದಾಗ ಜಾರಿಗೊಳಿಸಲಾಗುತ್ತದೆ. ಅದರಲ್ಲಿ ಶಾಲೆಗಳ ಹೈಬ್ರಿಡ್ ಓದು, ಕಚೇರಿಗಳಿಗೆ ಮನೆಯಿಂದ ಕೆಲಸ ಶಿಫಾರಸು, ವಾಣಿಜ್ಯ ವಾಹನಗಳ ಪ್ರವೇಶ ನಿಯಂತ್ರಣ ಸೇರಿದಂತೆ ಕಠಿಣ ಕ್ರಮಗಳು ಸೇರಿವೆ. ಶಾಲೆ–ಕಚೇರಿ ಮುಚ್ಚುವ ಬಗ್ಗೆ ಅಂತಿಮ ನಿರ್ಧಾರ ಸರ್ಕಾರ ಇನ್ನೂ ಪ್ರಕಟಿಸಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande