
ಹೈದರಾಬಾದ್, 22 ನವೆಂಬರ್ (ಹಿ.ಸ.) :
ಆ್ಯಂಕರ್ : ತೆಲಂಗಾಣ ಸರ್ಕಾರದ ಪುನರ್ವಸತಿ ನೀತಿ ಮತ್ತು ಪೊಲೀಸ್ ಒತ್ತಡದ ಪರಿಣಾಮವಾಗಿ 37 ಮಾವೋವಾದಿಗಳು ಶನಿವಾರ ಪೊಲೀಸ್ ಮಹಾನಿರ್ದೇಶಕ ಶಿವಧರ್ ರೆಡ್ಡಿ ಅವರಿಗೆ ಶರಣಾಗಿದ್ದಾರೆ. ಇವರಲ್ಲಿ ಉನ್ನತ ನಾಯಕರಾದ ಆಜಾದ್, ನಾರಾಯಣ್, ಎರ್ರಾ ಹಾಗೂ 25 ಮಹಿಳೆಯರು ಸೇರಿದ್ದಾರೆ.
ಶರಣಾದವರು ಎಕೆ–47, ಎಸ್‌ಎಲ್‌ಆರ್, .303 ಮತ್ತು G3 ರೈಫಲ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ–ಮದ್ದುಗುಂಡುಗಳನ್ನು ಹಸ್ತಾಂತರಿಸಿದರು. ಶರಣಾಗತಿಗಳಿಗೆ ಸರ್ಕಾರದಿಂದ ಬಹುಮಾನ ಹಾಗೂ ಪುನರ್ವಸತಿ ನೆರವು ನೀಡಲಾಗುವುದೆಂದು ಡಿಜಿಪಿ ಘೋಷಿಸಿದರು.
ಆಪರೇಷನ್ ಕಾಗರ್ ನಂತರ ರಾಜ್ಯದಲ್ಲಿ ಮಾವೋವಾದಿಗಳ ಚಟುವಟಿಕೆಗಳು ಕುಗ್ಗುತ್ತಿದ್ದು, ಇನ್ನೂ 59 ಮಾವೋವಾದಿಗಳು ಕಾಡಿನಲ್ಲಿ ಅಡಗಿಕೊಂಡಿದ್ದಾರೆ. ಅವರು ಕೂಡ ಮುಖ್ಯವಾಹಿನಿಗೆ ಮರಳುವಂತೆ ಡಿಜಿಪಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa