ನಾರಾಯಣ ಕಾಲೇಜ್‍ನಿಂದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಭವಿಷ್ಯದ ಕೋರ್ಸ್ ಮಾರ್ಗದರ್ಶನ
ಗಂಗಾವತಿ, 15 ನವೆಂಬರ್ (ಹಿ.ಸ.) : ಆ್ಯಂಕರ್ : ದೇಶವ್ಯಾಪಿ ಸುಮಾರು 650ಕ್ಕು ಹೆಚ್ಚು ಕಾಲೇಜು ಹೊಂದಿರುವ ಬೆಂಗಳೂರಿನ ನಾರಾಯಣ ಕಾಲೇಜು ಪರಿಣತರಿಂದ ಎಸ್‍ಎಸ್‍ಎಲ್‍ಸಿ ನಂತರ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳು ಆಯ್ಕೆ ಮಾಡಿಕೊಳ್ಳಬೇಕಾದ ಕೋರ್ಸ್‍ಗಳ ಕುರಿತು ಮಕ್ಕಳು ಹಾಗು ಪಾಲಕರಿಗೆ
ನಾರಾಯಣ ಕಾಲೇಜ್‍ನಿಂದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಭವಿಷ್ಯದ ಕೋರ್ಸ್ ಮಾರ್ಗದರ್ಶನ ಭಾನುವಾರ ಬೆಳಗ್ಗೆ 10 ಗಂಟೆಗೆ


ಗಂಗಾವತಿ, 15 ನವೆಂಬರ್ (ಹಿ.ಸ.) :

ಆ್ಯಂಕರ್ : ದೇಶವ್ಯಾಪಿ ಸುಮಾರು 650ಕ್ಕು ಹೆಚ್ಚು ಕಾಲೇಜು ಹೊಂದಿರುವ ಬೆಂಗಳೂರಿನ ನಾರಾಯಣ ಕಾಲೇಜು ಪರಿಣತರಿಂದ ಎಸ್‍ಎಸ್‍ಎಲ್‍ಸಿ ನಂತರ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳು ಆಯ್ಕೆ ಮಾಡಿಕೊಳ್ಳಬೇಕಾದ ಕೋರ್ಸ್‍ಗಳ ಕುರಿತು ಮಕ್ಕಳು ಹಾಗು ಪಾಲಕರಿಗೆ ಸೂಕ್ತ ಮಾರ್ಗದರ್ಶನವನ್ನು ಸಿಬಿಎಸ್ ವೃತ್ತದಲ್ಲಿರುವ ಅಶೋಕಾ ಹೊಟೇಲ್‍ನಲ್ಲಿ ಇಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನೀಡಲಾಗುವುದು ಎಂದು ನಾರಾಯಣ ಕಾಲೇಜು ಎಜಿಎಂ ವಿ.ಡಿ.ಮನೋಹರ ಹೇಳಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಬೆಂಗಳೂರು ಒಂದರಲ್ಲೇ ಸುಮಾರು 50ಕ್ಕು ಹೆಚ್ಚು ಕಾಲೇಜು ಹೊಂದಿರುವ ನಾರಾಯಣ ಕಾಲೇಜ್ ದೇಶದಾದ್ಯಂತ ಸುಮಾರು 6 ಲಕ್ಷಕ್ಕು ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ, ನೂರಕ್ಕೆ ನೂರರಷ್ಟು ಫಲಿತಾಂಶ ಹೊಂದಿರುವ ನಾರಾಯಣ ಕಾಲೇಜು ಜಿಇ ಕೋರ್ಸ್ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ರ್ಯಾಂಕ್ ತಂದ ಸಂಸ್ಥೆ ಇದಾಗಿದ್ದು, ಇಂಥ ಸಂಸ್ಥೆಯನ್ನು ಮುನ್ನೆಡೆಸುತ್ತಿರುವ ಕೋರ್ ಡೀನ್ ಡಿ.ವಿ.ನಾಗರಾಜ್, ಡೀನ್ ಜೆ.ವಿಜಯಲಕ್ಷ್ಮೀ, ಪ್ರಾಂಶುಪಾಲರಾದ ಉಷಾ ಟಿ.ಎಂ. ಮುಂತಾದ ಪರಿಣತರು ಇಲ್ಲಿಗೆ ಆಗಮಿಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆಂದರು.

ಸೈನ್ಸ್ ಕೋರ್ಸ್ ಪಡೆದಲ್ಲಿ ಸೂಕ್ತ ಅವಕಾಶಗಳಿದ್ದು ಜೆಇ, ಐಐಟಿ, ಮೆಡಿಕಲ್, ನೀಟ್, ಕೆಸೆಟ್ ಬಗೆಗೆ ಸಂಪೂರ್ಣ ಮಾಹಿತಿ ಒದಗಿಸಲಾಗುವುದು, ಉತ್ತಮ ಪರ್ಸಂಟೇಜ್ ಪಡೆದ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕ ಪಡೆದು ಕೋಚಿಂಗ್ ನೀಡಲಾಗುವುದು ಪ್ರತಿಭಾವಂತ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನವಿಲ್ಲದೆ ಅತ್ಯುತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶದಿಂದ ವಂಚಿತರಾಗಬಾರದು ಎನ್ನುವ ಕಾಳಜಿಯಿಂದಾಗಿ ಈ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು ಎಂದು ವಿವರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande