
ವಿಜಯಪುರ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆಯಲ್ಲಿ ಅಕ್ಟೋಬರ್ 3ರಂದು ನಡೆದಿದ್ದ ಭಯಾನಕ ಹಲ್ಲೆ ಹಾಗೂ ಕಿಡ್ನಾಪ್ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ. ಮಾಲೀಕ ಯಂಕಪ್ಪ ಚೂರಿ ಅವರ ಪತ್ನಿಯೊಡನೆ ಗೂಡ್ಸ್ ವಾಹನ ಚಾಲಕ ಪ್ರಕಾಶ್ ಹೊಸಮನಿ (25) ಸಲುಗೆಯಿಂದ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಚಾಲಕ ಹಾಗೂ ಮಹಿಳೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಚಾಲಕ ಪ್ರಕಾಶ್ ಹಾಗೂ ಯಂಕಪ್ಪ ಚೂರಿ ಅವರ ಪತ್ನಿಯನ್ನು ಬಲವಂತವಾಗಿ ಕಿಡ್ನಾಪ್ ಮಾಡಿ ತುಳಸಿಗೇರಿ ಗುಡ್ಡಕ್ಕೆ ಕರೆದುಕೊಂಡು ಹೋಗಲಾಗಿದೆ. ಪ್ರಕಾಶ್‌ನ ಕೈ ಕಟ್ಟಿ, ಕೋಲಿನಿಂದ ಕಾಲು–ಬೆನ್ನಿಗೆ ಹೊಡೆದು ಬಾಸುಂಡೆ ಬರುವಂತೆ ಕ್ರೂರ ಹಲ್ಲೆ ನಡೆಸಲಾಗಿದೆ. ಯಂಕಪ್ಪ ಚೂರಿ ತಮ್ಮ ಪತ್ನಿಯ ಮೇಲೂ ಹಲ್ಲೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಹಲ್ಲೆ ನಡೆಸುತ್ತಿರುವ ಪರಸಪ್ಪ ಮಾದರ ಸೇರಿದಂತೆ ಆರೋಪಿಗಳ ವಿಡಿಯೋ ಈಗ ಬಹಿರಂಗವಾಗಿ ವೈರಲ್ ಆಗಿದೆ.
ಯಂಕಪ್ಪ ಚೂರಿ, ಪರಸಪ್ಪ ಮಾದರ, ತುಳಸಪ್ಪ ಚೂರಿ, ಸಂಗಮೇಶ್ ಗೌಡರ ಸೇರಿದಂತೆ ಒಟ್ಟು 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನವನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 31ರಂದು ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆದಿದೆ. ಈ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದು, ವೈರಲ್ ವಿಡಿಯೊ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande