ಕೋಲಾರದ ೧೫೦ ಸರ್ಕಾರಿ ಶಾಲೆಗಳಲ್ಲಿ ಧನ್ವಂತರಿ ತೋಟ ನಿರ್ಮಾಣ ಮಾಡಲು ಯೋಜನೆ
ಕೋಲಾರದ ೧೫೦ ಸರ್ಕಾರಿ ಶಾಲೆಗಳಲ್ಲಿ ಧನ್ವಂತರಿ ತೋಟ ನಿರ್ಮಾಣ ಮಾಡಲು ಯೋಜನೆ
ಚಿತ್ರ : ಕೋಲಾರ ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಸಾಮಾಜಿಕ ಆರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ೧೫೦ ಸರ್ಕಾರಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಧನ್ವಂತರಿ ವನ ನಿರ್ಮಿಸುವ ಕುರಿತು ಕೋಲಾರ ಜಿಲ್ಲಾಧಿಕಾರಿ ಭವನದಲ್ಲಿ ಏರ್ಪಡಿಸಿದ್ದಕಾರ್ಯಗಾರವನ್ನು ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್. ರವಿ ಚಾಲನೆ ನೀಡಿದರು.


ಕೋಲಾರ, ೧೫ ನವಂಬರ್ (ಹಿ.ಸ.) :

ಆ್ಯಂಕರ್ : ಆರೋಗ್ಯಪೂರ್ಣ ಜೀವನಶೈಲಿ ಮತ್ತು ಪ್ರಾಚೀನ ವೈದ್ಯಕೀಯ ಪದ್ಧತಿಯ ಪುನರುಜ್ಜೀವನದ ಮಹತ್ವವನ್ನು ಮನಗಂಡು ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ,ತೋಟಗಾರಿಕೆ ಇಲಾಖೆ,ಸಾಮಾಜಿಕ ಆರಣ್ಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ೧೫೦ ಸರ್ಕಾರಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಧನ್ವಂತರಿ ವನ ನಿರ್ಮಿಸುವ ಕುರಿತು ಏರ್ಪಡಿಸಿದ್ದಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ಇಡೀ ನಮ್ಮ ಕೋಲಾರ ಜಿಲ್ಲೆಯ ಸರ್ವೋತೋಮುಖ ಆಭಿವೃದ್ದಿಗಾಗಿ ಆನೇಕ ಯೋಜನೆಗಳನ್ನು ರೋಪಿಸುತ್ತಿದ್ದು ಅದರ ಜೋತೆಗೆ “ಧನ್ವಂತರಿ ವನ” ಎಂಬ ಮಹತ್ತರ ಕಾರ್ಯಕ್ರಮವನ್ನು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸೇರಿದಂತೆ ಕೇಲವು ಅನುಷ್ಠನ ಇಲಾಖೆಗಳನ್ನು ಒಳಗೋಂಡಂತೆ ಚಾಲನೆ ನಿಡುತ್ತಿದ್ದೆವೆ ಎಂದು ತಿಳಿಸಿದರು.

ನಾವು ಜಿಲ್ಲೆಯಲ್ಲಿ ಪೌಷ್ಠಿಕ ತೋಟ ಎಂಬ ಕಾರ್ಯಕ್ರಮವನ್ನು ಅನುಷ್ಠನ ಗೋಳಿಸಲು ಸುಮಾರು ೧೫೦ ಶಾಲೆಗಳು ೪೫ ವಸತಿ ನಿಲಯಗಳನ್ನು ಆಯ್ಕೆ ಮಾಡಿದ್ದು ಸ್ಥಳವಕಾಶ ಇರುವ ಭಾಗಗಳಲ್ಲಿ ೨೦ ಗುಂಟೆ ಯಿಂದ ಆರ್ಧ ಎಕರೆ ಯಷ್ಟು ಪ್ರದೇಶದಲ್ಲಿ ವಿವಿಧ ಬಗೆಯ ಆಯುರ್ವೆದ ಗಿಡಗಳನ್ನು ನೆಟ್ಟು ಪೋಶಿಸಲಾಗುತ್ತದ್ತಾಯಾ ಗಿಡದ ಮುಂದೆ ನಾiಫಲಕಗಳನ್ನು ಆಳವಡಿಸಿ ವಿಶೇಷತೆ ತಿಳಿಸಲಾಗುತ್ತದೆ, ಆದೇ ರೀತಿ ನರೇಗ ಯೋಜನೆ ಮತ್ತು ಮಕ್ಕಳನ್ನು ಬಳಸಿಕೋಂಡು ನಿರಂತರವಾಗಿ ಗಿಡಗಳನ್ನು ಪೋಷಿಸುವ ಕೆಲಸವನ್ನು ಮಾಡಬೇಕು ಪ್ರತಿದಿನ ಮಕ್ಕಳಿಗೆ ಆರಿವು ಮೂಡಿಸಬೇಕು ಇದಿದ್ದರೆ ನಮ್ಮ ಮುಂದಿನ ಪಿಳೀಗೆಗೆ ಇದರ ಆರಿವು ಕೂಡ ಇರುವುದಿಲ್ಲ ಎಂದರು.

ಈ ಕಾರ್ಯಕ್ರಮದಿಂದ ಮಕ್ಕಳ ಆರೋಗ್ಯದ ಮೇಲು ಪ್ರಭವ ಬಿರುತ್ತದೆ ನಾವು ಗಿಡಗಳನ್ನು ಯಾವ ರೀತಿ ಬೇಳೆಯುತ್ತವೆ ಎಂಬುದನ್ನು ಮಕ್ಕಳು ಗಮನಿಸುತ್ತಾರೆ ಆದರೊಂದಿಗೆ ಅವರ ಬೇಳವಣಿಗೆಯು ಆಗುತ್ತದೆ ಇದರಿಂದ ಅವರ ಬಾಂಧವ್ಯ ಮಾನವಿಕವಾಗುತ್ತದೆ ಎಂದರು.

ನಾವು ಏನನ್ನು ಅರಸುತ್ತೇವೋ ಅದನ್ನು ಹುಡುಕುವಾಗ ನಮ್ಮಲ್ಲಿರುವ ಅತ್ಯಮೂಲ್ಯವಾದದನ್ನು ಕಳೆದುಕೊಳ್ಳುತ್ತೇವೆ ಅದು ಆಗುವುದು ಬೇಡ ಆದ್ದರಿಂದ ಎಲ್ಲಾ ಇಲಾಖೆಯವರು ಆಸಕ್ತಿಯಿಂದ ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಬೇಕು. ಈಗಾಗಲೇ ತಮ್ಮ ಶಾಲೆಗಳಲ್ಲಿ ರಚಿಸಿರುವ ಪರಿಸರ ಕ್ಲಬ್ ಮತ್ತು ಮಾದಕ ದ್ರವ್ಯಗಳ ನಿಯಂತ್ರಣ ಘಟಕಗಳ ಸಹಯೋಗದೊಂದಿಗೆ ಇದನ್ನು ಅನುಷ್ಠಾನ ಮಾಡಿ ಜಿಲ್ಲೆಗೆ ಕೀರ್ತಿಯನ್ನು ತರಬೇಕು ಎಂದರು.

ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಗಿಡಮೂಲಿಕೆಗಳನ್ನು ಬಳಸಿ ಕಾಯಿಲೆಗಳನ್ನು ಗುಣಪಡಿಸುತ್ತಿದ್ದರು. ಆದರೆ, ಕಳೆದ ಶತಮಾನದಿಂದ ಈ ಪದ್ಧತಿಯ ಮಹತ್ವ ಕಳೆದುಕೊಂಡಿದ್ದೇವೆ. ಇದನ್ನು ಮನಗಂಡ ಜಿಲ್ಲಾಡಳಿತವು, ಜಿಲ್ಲೆಯ ವಿದ್ಯಾವಂತ ಹಾಗೂ ಕ್ರಿಯಾಶೀಲ ಜನರಿಗಾಗಿ ವೈದ್ಯಕೀಯ ಪದ್ಧತಿಯಲ್ಲಿ ಹೊಸ ಆಯಾಮ ನೀಡಲು ಈ ನಿರ್ಧಾರ ಕೈಗೊಂಡಿದೆ. ಪ್ರತಿ ನಾಗರಿಕರೂ ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ನಿರ್ಮಾಣ ಕಾರ್ಯ, ಮುಖ್ಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ, ಎರಡರಿಂದ ಐದು ಗುಂಟೆ ಜಾಗದಲ್ಲಿ ಈ ತೋಟಗಳನ್ನು ನಿರ್ಮಿಸಿ ಜೀವನ ಶೈಲಿಯನ್ನು ಬದಲಾವಣೆ ಮಾಡುವ ಮಹತ್ತರ ಗುರಿ ಇದೆ, ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಪಿ. ಭಾಗೇವಾಡಿ ಅವರು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಇದು ಒಂದು ವಿನೂತನ ಕಾರ್ಯಕ್ರಮ. ನಮ್ಮ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ನರೇಗಾ ಯೋಜನೆಯಡಿಯಲ್ಲಿ ಅನುಮೋದನೆ ಪಡೆದು ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ, ಜಿಲ್ಲೆಯ ಸುಮಾರು ೧೫೦ ಸರ್ಕಾರಿ ಶಾಲೆಗಳು ಮತ್ತು ೪೫ ವಸತಿ ನಿಲಯಗಳಲ್ಲಿ ಆಯುರ್ವೇದಿಕ್ ಗಿಡಗಳನ್ನು ನೆಡುವ ಮೂಲಕ ಪೌಷ್ಟಿಕ ತೋಟಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ, ಎಂದು ಹೇಳಿದರು. ಈ ಕಾರ್ಯಕ್ರಮದಿಂದ ಶಾಲಾ ಮಕ್ಕಳಲ್ಲಿ ಅರಿವು ಮೂಡುತ್ತದೆ ಮತ್ತು ಅವರು ತಮ್ಮ ಪೋಷಕರಿಗೂ ಗಿಡಗಳನ್ನು ಬೆಳೆಸುವಂತೆ ತಿಳಿಸುತ್ತಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ನಿಖಿಲ್ ಅವರು ಮಾತನಾಡಿ, ನಮ್ಮ ಹಿಂದಿನ ಪೀಳಿಗೆಯವರು (ತಾತ, ಮುತ್ತಾತ) ಶಕ್ತಿಯುತವಾಗಿ ಮತ್ತು ಆರೋಗ್ಯಕರವಾಗಿ ಬಾಳಲು ಕಾರಣ ಅವರು ಸುತ್ತಮುತ್ತಲಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದುದು. ಹಳ್ಳಿಯ ಮಕ್ಕಳು ದಾರಿಯಲ್ಲಿ ಸಿಗುವ ಹಣ್ಣುಗಳನ್ನು ಕಿತ್ತು ತಿನ್ನುತ್ತಾ ಬೆಳೆಯುತ್ತಿದ್ದರು, ಇದರಿಂದಲೇ ಅವರು ಹೆಚ್ಚು ಶಕ್ತಿಯುತವಾಗುತ್ತಿದ್ದರು ಎಂದರು.

ಜಿಲ್ಲಾಡಳಿತವು ರೂಪಿಸಿರುವ ಈ ಕಾರ್ಯಕ್ರಮವು ತಕ್ಷಣಕ್ಕೆ ಫಲ ನೀಡದಿದ್ದರೂ, ಮುಂದಿನ ಪೀಳಿಗೆಗೆ ಉತ್ತಮ ಫಲ ನೀಡುತ್ತದೆ. ಗಿಡ ನೆಡುವುದು ಮುಖ್ಯವಲ್ಲ, ಅದನ್ನು ಪಾಲನೆ ಮಾಡುವುದು ಮುಖ್ಯ, ಎಂದು ಎಸ್.ಪಿ. ನಿಖಿಲ್ ಒತ್ತಿ ಹೇಳಿದರು.

ಶಾಲಾ ಶಿಕ್ಷಕರು ಪ್ರತಿದಿನ ಕೇವಲ ಹತ್ತು ನಿಮಿಷ ವಿದ್ಯಾರ್ಥಿಗಳಿಗೆ ಗಿಡಗಳ ಬಗ್ಗೆ ಅರಿವು ಮೂಡಿಸಿ ನೀರು ಹಾಕುವಂತೆ ತಿಳಿಸಬೇಕು. ಈ ಮಹತ್ವದ ಕಾರ್ಯಕ್ರಮವನ್ನು ’ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಅವರಿಗೆ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ನಿಖಿಲ್ ಅವರು ಡಿಸೆಂಬರ್ ೧ ರಿಂದ ಕೋಲಾರದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ನಿಯಮ ಜಾರಿಗೆ ತರಲಾಗಿದೆ ಎಂದು ಘೋಷಿಸಿದರು. ಜಿಲ್ಲೆಯಲ್ಲಿ ಅನೇಕ ಪ್ರಾಣಾಪಾಯಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು. ಸಮಾಜದಲ್ಲಿ ಅರಿವು ಮೂಡಿಸಿ ಈ ಜವಾಬ್ದಾರಿಯುತ ಕಾರ್ಯಕ್ಕೆ ಕೈ ಜೋಡಿಸುವಂತೆ ಅವರು ಜನತೆಯಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ,ಉಪ ಕಾರ್ಯದರ್ಶಿ ಟಿ.ಕೆ.ರಮೇಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎ.ಆನಂದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಕುಮಾರಸ್ವಾಮಿ,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್,ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಅಲ್ಮಾಸ್ ಪರ್ವಿನ್ ತಾಜ್,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಆಧಿಕಾರಿ ಗೀತಮ್ಮ,ಜಿಲ್ಲಾ ಆಯುಷ್ ಆಧಿಕಾರಿ ಡಾ.ರಘವೇಂದ್ರ ಶೆಟ್ಟಗರ್ ಹಾಗೂ ಜಿಲ್ಲೆಯ ಏಲ್ಲಾ ತಾಲ್ಲೂಕುಗಳ ಕಾರ್ಯನಿರ್ವಹಕ ಆಧಿಕಾರಿಗಳು,ಎಲ್ಲಾ ಕ್ಷೇತ್ರ ಶಿಕ್ಷಣಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

ಚಿತ್ರ : ಕೋಲಾರ ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಸಾಮಾಜಿಕ ಆರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ೧೫೦ ಸರ್ಕಾರಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಧನ್ವಂತರಿ ವನ ನಿರ್ಮಿಸುವ ಕುರಿತು ಕೋಲಾರ ಜಿಲ್ಲಾಧಿಕಾರಿ ಭವನದಲ್ಲಿ ಏರ್ಪಡಿಸಿದ್ದಕಾರ್ಯಗಾರವನ್ನು ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್. ರವಿ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande